ಕಲಬುರಗಿಯಲ್ಲಿ ಕಬ್ಬು ರೈತರ ಹೋರಾಟ ಮತ್ತೆ ತಾರಕ್ಕೇರಿದೆ. ರಾಮ ಮಂದಿರ ಹೆದ್ದಾರಿ ಮೇಲೆ ಕಬ್ಬು ಸುರಿದು, ಟ್ರಾಕ್ಟರ್ ನಿಲ್ಲಿಸಿ ಹೋರಾಟ ಉಗ್ರಗೊಳಿಸಿದ್ದಾರೆ. ಟನ್ ಕಬ್ಬಿಗೆ 5,500 ರು. ದರ ನಿಗದಿ ಹಾಗೂ ಸ್ವಾಮಿನಾಥನ್ ವರದಿ ಜಾರಿಗೆ ಆಗ್ರಹಿಸಿ ನಗರದ ರಾಮ ಮಂದಿರ ವೃತ್ತದ ಬಳಿ ರೈತರು 5 ದಿನದಿಂದ ನಡೆಸುತ್ತಿದ್ದ ಹೋರಾಟದ ಟೆಂಟ್ನ್ನು ಶುಕ್ರವಾರ ರಾತ್ರಿ ಪೊಲೀಸರು ತೆರವು ಮಾಡಿ ರೈತ ಹೋರಾಟಗಾರರನ್ನು ವಶಕ್ಕೆ ಪಡೆದಿದ್ದಾರೆ.
ಕನ್ನಡಪ್ರಭ ವಾರ್ತೆ ಕಲಬುರಗಿಕಲಬುರಗಿಯಲ್ಲಿ ಕಬ್ಬು ರೈತರ ಹೋರಾಟ ಮತ್ತೆ ತಾರಕ್ಕೇರಿದೆ. ರಾಮ ಮಂದಿರ ಹೆದ್ದಾರಿ ಮೇಲೆ ಕಬ್ಬು ಸುರಿದು, ಟ್ರಾಕ್ಟರ್ ನಿಲ್ಲಿಸಿ ಹೋರಾಟ ಉಗ್ರಗೊಳಿಸಿದ್ದಾರೆ. ಟನ್ ಕಬ್ಬಿಗೆ 5,500 ರು. ದರ ನಿಗದಿ ಹಾಗೂ ಸ್ವಾಮಿನಾಥನ್ ವರದಿ ಜಾರಿಗೆ ಆಗ್ರಹಿಸಿ ನಗರದ ರಾಮ ಮಂದಿರ ವೃತ್ತದ ಬಳಿ ರೈತರು 5 ದಿನದಿಂದ ನಡೆಸುತ್ತಿದ್ದ ಹೋರಾಟದ ಟೆಂಟ್ನ್ನು ಶುಕ್ರವಾರ ರಾತ್ರಿ ಪೊಲೀಸರು ತೆರವು ಮಾಡಿ ರೈತ ಹೋರಾಟಗಾರರನ್ನು ವಶಕ್ಕೆ ಪಡೆದಿದ್ದಾರೆ.
ಇದಕ್ಕೆ ಪ್ರತಿರೋಧ ತೋರಿದ ರೈತರು, ಅದೇ ಟೆಂಟ್ ಹೆದ್ದಾರಿಯಲ್ಲೇ ಹಾಕಿ ಹೋರಾಟ ತೀವ್ರಗೊಳಿಸಿದ್ದಾರೆ. ಹೀಗಾಗಿ ಹೆದ್ದಾರಿ ಪಕ್ಕ ಪ್ರತಿಭಟನೆ ಮುಂದುವರಿದಿದೆ. ಪ್ರತಿಭಟನಾ ನಿರತ ರೈತರನ್ನು ವಶಕ್ಕೆ ಪಡೆದ ಪೊಲೀಸರು ಸ್ವಾಮಿನಾಥನ್ ವರದಿ ಜಾರಿ ಹಾಗೂ ಕಬ್ಬಿಗೆ ಸೂಕ್ತ ಬೆಂಬಲ ಬೆಲೆ ನಿಗದಿ ಸೇರಿದಂತೆ ರೈತರ ಪ್ರಮುಖ ಬೇಡಿಕೆಗಳು ಈಡೇರುವವರೆಗೂ ಹೋರಾಟ ಮುಂದುವರಿಸುವುದಾಗಿ ಘೋಷಿಸಿದ್ದು ಕಲಬುರಗಿ- ಜೇವರ್ಗಿ ರಸ್ತೆಯಲ್ಲಿ ರೈತರ ಪ್ರತಿಭಟನೆ ಭುಗಿಲೆದ್ದಿದೆ.*ಪೊಲೀಸರ ವಶಕ್ಕೆ ಬಗ್ಗದ ರೈತರು: ಪೊಲೀಸರ ವಶಕ್ಕೆ ಪಡೆಯುವ ಕ್ರಮಕ್ಕೂ ಜಗ್ಗದ ರೈತ ಹೋರಾಟಗಾರರು ಮತ್ತೆ ಬೀದಿಗಿಳಿದು ಬೃಹತ್ ಧರಣಿ ನಡೆಸಿದ್ದಾರೆ. ಮಂಗಳವಾರದಿಂದ ರೈತರು ಧರಣಿ ನಡೆಸುತ್ತಿದ್ದು, ಶುಕ್ರವಾರ ಸಂಜೆ ಪೊಲೀಸರು ಧರಣಿ ಸ್ಥಳಕ್ಕೆ ಆಗಮಿಸಿ ಟೆಂಟ್ ಸಮೇತ ರೈತರ ರೈತರನ್ನು ವಶಕ್ಕೆ ಪಡೆದಿದ್ದಾರೆ. ಪೊಲೀಸರ ಈ ಕ್ರಮಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ರೈತರು, ಹೋರಾಟ ಹತ್ತಿಕ್ಕುವ ಪ್ರಯತ್ನಕ್ಕೆ ಮಣಿಯುವುದಿಲ್ಲ ಎಂದು ಪಟ್ಟು ಹಿಡಿದರು. ಶನಿವಾರ ಬೆಳಗ್ಗೆಯೂ ಜೇವರ್ಗಿ ರಸ್ತೆಯಲ್ಲಿ 15ಕ್ಕೂ ಹೆಚ್ಚು ಟ್ರಾಕ್ಟರ್ ಗಳ ಜತೆಗೆ ಜಮಾಯಿಸಿದ ರೈತರು ತಮ್ಮ ಹೋರಾಟ ಮುಂದುವರಿಸಿದರು.ಮಧ್ಯಾಹ್ನದ ನೂರಾರು ರೈತರು ಸ್ಥಳದಲ್ಲಿ ಜಮಾಯಿಸಿ ಹೆದ್ದಾರಿ ತಡೆದು ಮತ್ತೊಮ್ಮೆ ಪ್ರತಿಭಟಿಸಿದರು. ರಸ್ತೆಯ ಪಕ್ಕಕ್ಕೆ ಸ್ಥಳಾಂತರಿಸಿದ್ದ ಟೆಂಟನ್ನು ಮತ್ತೆ ರಸ್ತೆಯ ಮಧ್ಯಭಾಗದಲ್ಲಿ ಸ್ಥಾಪಿಸಿ ಧರಣಿ ಆರಂಭಿಸಿದರು. ಈ ಮೂಲಕ ಪೊಲೀಸರ ಕ್ರಮಕ್ಕೆ ಜಗ್ಗದೆ ಬೇಡಿಕೆ ಈಡೇರುವವರೆಗೂ ಹೋರಾಟದಿಂದ ಹಿಂದೆ ಸರಿಯುವುದಿಲ್ಲ ಎಂಬ ಸಂದೇಶವನ್ನು ರೈತರು ರವಾನಿಸಿದರು. ರಸ್ತೆಯ ಪಕ್ಕದಲ್ಲೇ ಅಡುಗೆ ಮಾಡಿ ಪ್ರತಿಭಟನೆ ಮುಂದುವರಿಸಿದ್ದಾರೆ.ನಾಲ್ಕು ದಿನದಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯಿಂದ ಹಾಕಿದ್ದ ಟೆಂಟ್ನ್ನು ತೆರವುಗೊಳಿಸಿದ ಪೊಲೀಸರ ಕ್ರಮ ಖಂಡಿಸಿ ರೈತರು ರಸ್ತೆ ಮೇಲೆ ಮಲಗಿ ಆಕ್ರೋಶ ವ್ಯಕ್ತಪಡಿಸಿದರು. ರೈತ ಮುಖಂಡರಾದ ಸಿದ್ದರಾಮ ಡಣ್ಣೂರು, ಬಸವರಾಜ ಕೋರಿ, ಮಲ್ಲಿಕಾರ್ಜುನ ಸಾರವಾಡ್ ಸೇರಿ ಒಂಬತ್ತು ಹೋರಾಟಗಾರರನ್ನು ವಶಕ್ಕೆ ಪಡೆದರು. ಪರಿಸ್ಥಿತಿ ನಿಯಂತ್ರಿಸಲು ಹರಸಾಹಸ ಪಟ್ಟ ಪೊಲೀಸರು ರಸ್ತೆ ಬದಿ ಟೆಂಟ್ ಹಾಕಿಕೊಂಡು ಪ್ರತಿಭಟನೆ ಮುಂದುವರಿಸಲು ಅವಕಾಶ ನೀಡಿದ್ದರಿಂದ ಹೋರಾಟ ಮುಂದುವರಿಸಿದರು.
ಶ್ರೀಗಳು, ಮಂಗಳಮುಖಿಯರ ಸಾಥ್: ಇಡೀ ದಿನ ಹಲವು ಸ್ವಾಮೀಜಿಗಳು, ರೈತ, ದಲಿತ, ವಿದ್ಯಾರ್ಥಿ ಸಂಟನೆಗಳು, ಸಾರ್ವಜನಿಕರು ಭಾಗವಹಿಸಿ ಬೆಂಬಲಿಸಿದರು. ಹೋರಾಟಕ್ಕೆ ದಲಿತ ಸೇನೆ, ವಿಜಯಸೇನೆ ಹಾಗೂ ಕಾನೂನು ವಿದ್ಯಾರ್ಥಿಗಳು ಸಾಥ್ ನೀಡಿದರು.ಶ್ರೀಶೈಲಂ ಸಾರಂಗಮಠದ ಡಾ. ಶ್ರೀ ಸಾರಂಗಧರ ದೇಶಿಕೇಂದ್ರ ಮಹಾಸ್ವಾಮೀಜಿ ಪ್ರತಿಭಟನೆಗೆ ಬೆಂಬಲ ಸೂಚಿಸಿದರು. ರಾಜ್ಯ ರೈತ ಸಂದ ಕಾರ್ಯಾಧ್ಯಕ್ಷ ಮಹೇಶ ಸುಬೇದಾರ್, ಜಿಲ್ಲಾ ಕಾರ್ಯದರ್ಶಿ ಸಿದ್ದರಾಮ್ ದಣ್ಣೂರು, ಯಾದಗಿರಿ ಜಿಲ್ಲಾಧ್ಯಕ್ಷ ವಿಜಯಕುಮಾರ್ ಮುಷ್ಟೂರು, ಶರಣಪ್ಪ ಮಮಶೆಟ್ಟಿ, ಸಿದ್ದು ಎಸ್. ಎಲ್, ಕರೆಪ್ಪ ಕರಗೊಂಡ, ಜಗದೇಶ ಪಾಟೀಲ್ ರಾಜಾಪುರ, ಅಶೋಕ ಹೂಗಾರ, ಬಸವರಾಜ ಚಾನಕೋಟೆ, ಬಸವರಾಜ ಕೋರಿ, ಶರಣಗೌಡ ಮಾಲಿಪಾಟೀಲ್ ಇತರರಿದ್ದರು.ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾ ಕಾರ್ಯಾಧ್ಯಕ್ಷ ಸಿದ್ದರಾಮ ದನ್ನೂರ್, ಅಶೋಕ್ ಹೂಗಾರ್, ಮಹೇಶ ಸುಬೇದಾರ, ಮಹಾಂತೇಶ ಜಮಾದಾರ್, ಎ.ಎಸ್. ಗುಣಾರಿ, ಸಂತೋಷ್ ಮನಗೊಂಡ, ಪಿಡ್ಡಪ್ಪ ಜಾಲಗಾರ, ಕರೆಪ್ಪ ಕರಗೊಂಡ, ಸಿದ್ದು ಎಸ್.ಎಲ್, ಕನಸು ಸೇವಾ ಸಂಸ್ಥೆಯ ಸಂತೋಷ್ ಎಸ್.ಕೆ., ಶರಣಗೌಡ ಪಾಟೀಲ್, ಪಾಟೀಲ್, ಉಮಾಪತಿ ಪಾಟೀಲ್ ಸಹಿತ ಹಲವು ರೈತ ಮುಖಂಡರು ಭಾಗವಹಿಸಿದರು. ರೈತರ ನ್ಯಾಯಯುತ ಬೇಡಿಕೆಗಳಿಗೆ ಬೆಂಬಲ ಸೂಚಿಸಿ ಮಂಗಳಮುಖಿಯರೂ ಪ್ರತಿಭಟನೆಯಲ್ಲಿ ಪಾಲ್ಗೊಂಡರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.