ಕನ್ನಡಪ್ರಭ ವಾರ್ತೆ, ಬೆಂಗಳೂರು
ಗುರುವಾರ ನಗರದ ಲಿಸಾ ಸ್ಕೂಲ್ ಆಫ್ ಡಿಸೈನಿಂಗ್‌ನಲ್ಲಿ ಮುದ್ರಣಕಲೆ ಮತ್ತು ಉತ್ಪನ್ನ ವಿನ್ಯಾಸದ ಕುರಿತು ಒಂದು ದಿನದ ಕಾರ್ಯಾಗಾರ ಆಯೋಜಿಸಲಾಗಿದೆ. ಇಂಗ್ಲೀಷ್‌ನಲ್ಲಿ 26 ಅಕ್ಷರಗಳಿದ್ದು, 27ನೇ ಹೊಸ ಅಕ್ಷರ ವಿನ್ಯಾಸಗೊಳಿಸುವುದು ಈ ಕಾರ್ಯಾಗಾರದ ಉದ್ದೇಶವಾಗಿತ್ತು.
ಮೊದಲು ಮರದ ಹಲಗೆಯ ಮೇಲೆ ಅಕ್ಷರವನ್ನು ಕೆತ್ತನೆ ಮಾಡಿಕೊಂಡು, ತದನಂತರದಲ್ಲಿ ಅತ್ಯುತ್ತಮವಾಗಿ ಮೂಡಿಬಂದ ಅಕ್ಷರದ ವಿನ್ಯಾಸವನ್ನು ಡಿಸೈನ್ ಸಾಫ್ಟ್‌ವೇರ್‌ಗಳಾದ ಇನ್‌ಡಿಸೈನ್ ಇಲ್ಲಸ್ಟ್ರೇಟರ್ ಮೂಲಕ ಪ್ರಸ್ತುತ ಪಡಿಸಲಾಯಿತು.ಲಿಸಾ ಸ್ಕೂಲ್ ಆಫ್ ಡಿಸೈನ್ ಸಂಸ್ಥಾಪಕಿ ಅವಿ ಕೆಸ್ವಾನಿ, ಇಂಗ್ಲೀಷ್ ಮಾತನಾಡುವವರು ಕೆಲ ಫ್ರೆಂಚ್ ಉಚ್ಚಾರಣೆ ಮಾಡಲು ಕಷ್ಟಪಡುವುದನ್ನು ಗಮನಿಸಿದ್ದೇವೆ. ಈ ಹಿನ್ನೆಲೆಯಲ್ಲಿ 27ನೇ ಅಕ್ಷರವನ್ನು ವಿನ್ಯಾಸಗೊಳಿಸುವ ಮೂಲಕ ಫ್ರೆಂಚ್ ಮತ್ತು ಇಂಗ್ಲೀಷ್ ಭಾಷೆಗೆ ಸೇತುವೆ ಕಲ್ಪಿಸುವ ಪ್ರಯತ್ನ ಮಾಡುತ್ತಿದ್ದೇವೆ ಎಂದು ಹೇಳಿದರು.
ಕಾರ್ಯಾಗಾರದಲ್ಲಿ ಫ್ರೆಂಚ್ ಭಾಷಾ ತಜ್ಞೆ ಮಾಧುರಿ ವೆಲ್ಲಿಂಗ್ ಉಪಸ್ಥಿತರಿದ್ದರು.