ಕನ್ನಡಪ್ರಭ ವಾರ್ತೆ ಬಂಗಾರಪೇಟೆ
ಅಧಿಕಾರವಿದ್ದಾಗ ಬಡವರಿಗೆ ನೆರವಾಗಿ
ಮುಂದೆಯೂ ಸಹ ಅಂಗಡಿದಾರರು ನನಗೆ ನೀಡಿದ ಸಹಕಾರವನ್ನು ನೂತನ ಆಹಾರ ಶಿರಸ್ತೇದಾರ್ ಸುಭ್ರಮಣಿರವರಿಗೂ ನೀಡಬೇಕು ಎಂದು ಕೋರಿದರಲ್ಲದೆ,ಅಧಿಕಾರದಲ್ಲಿರುವಾಗ ಅಧಿಕಾರದ ಅಮಲಿನಿಂದ ವರ್ತಿಸದೆ ಬಡವರಿಗೆ ಅನುಕೂಲವಾಗುವಂತೆ ನಡೆದುಕೊಳ್ಳಬೇಕು ಅದೇ ನಮಗೆ ಶ್ರೀರಕ್ಷೆಯಾಗಲಿದೆ ಎಂದರು.ತಹಸೀಲ್ದಾರ್ ವೆಂಕಟೇಶಪ್ಪ ಮಾತನಾಡಿ ಸರ್ಕಾರದ ಎಲ್ಲಾ ಯೋಜನೆಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸುವುದು ನಮ್ಮ ಕರ್ತವ್ಯವಾಗಿದೆ, ಹಸಿದವರ ಹೊಟ್ಟೆ ತುಂಬಿಸುವ ಅನ್ನಭಾಗ್ಯ ಯೋಜನೆಯ ರೂವಾರಿಗಳಾಗಿರುವ ಪಡಿತರ ವಿತರಕರು ಸಮಯ ಪ್ರಜ್ಞೆಯಿಂದ ತಾಲೂಕಿನಲ್ಲಿ ಯಾವುದೇ ಲೋಪಗಳಿಲ್ಲದಂತೆ ನಡೆದುಕೊಳ್ಳಲಾಗುತ್ತಿದೆ. ಮುಂದೆಯೂ ಇದೇ ರೀತಿ ಸಹಕಾರ ನೀಡುವಂತೆ ಕೋರಿದರು.
ಆಹಾರ ಇಲಾಖೆಯಲ್ಲಿ ಹಲವು ಬದಲಾವಣೆಗಳು ಕಾಲಕ್ಕೆ ತಕ್ಕಂತೆ ನಡೆಯುತ್ತಿರುತ್ತದೆ ಅದಕ್ಕೆ ಅನುಗುಣವಾಗಿ ನಡೆದುಕೊಳ್ಳಬೇಕು,ಎಲ್ಲರೂ ಸೇರಿ ಕರ್ತವ್ಯವನ್ನು ಪರಿಪಾಲಿಸುವ ಮೂಲಕ ಉತ್ತಮ ಆಡಳಿತ ನೀಡಲು ನನ್ನೊಂದಿಗೆ ಕೈಜೋಡಿಸಿ ಎಂದು ಹೇಳಿದರು.ಈ ವೇಳೆ ಆಹಾರ ಶಿರಸ್ತೆದಾರ್ ಸುಭ್ರಮಣಿ,ಆಹಾರ ನಿರೀಕ್ಷಕ ಚೌಡಪ್ಪ,ಜಿಲ್ಲಾ ಪಡಿತರ ವಿತರಕರ ಸಂಘದ ಅಧ್ಯಕ್ಷ ಹುನ್ಕುಂದ ಶ್ರೀನಿವಾಸ್,ತಾಲೂಕು ಅಧ್ಯಕ್ಷ ಗೋವಿಂದಪ್ಪ,ಕಣಿಂಬೆಲೆ ಶ್ರೀನಿವಾಸ್,ಸುರೇಶ್,ಸಾಧಿಕ್ ಪಾಷ,ಪೆದ್ದಣ್ಣ,ಶ್ರೀನಿವಾಸರೆಡ್ಡಿ,ಪ್ರಸನ್ನ,ವೈ.ವಿ.ರಮೇಶ್,ಬಶೀರ್,ಅಖಿಲ್ ಮತ್ತಿತರರು ಇದ್ದರು.