ಈವರೆಗೆ 52,384 ಜನ ಭಾಗಿ । ಸ್ವದೇಶಿ ಪ್ರಜ್ಞೆಗೆ ಸಾಕ್ಷಿಯಾದ ಸಂಗಮ । ಒಂದೇ ಸೂರಿನಡಿ 200ಕ್ಕೂ ಹೆಚ್ಚು ಮಳಿಗೆಗಳು ಲಭ್ಯ
ಜನರಿಗೆ ದೇಶೀಯ ವಸ್ತುಗಳ ಪರಿಚಯ ಮತ್ತು ಸ್ವದೇಶಿ ಉತ್ಪಾದಕರಿಗೆ ಮಾರುಕಟ್ಟೆ ಒದಗಿಸುವ ದೃಷ್ಟಿಯಿಂದ ನಗರದ ಫ್ರೀಡಂ ಪಾರ್ಕ್‌ನಲ್ಲಿ ಮೊಟ್ಟ ಮೊದಲ ಬಾರಿಗೆ ಸ್ವದೇಶಿ ಜಾಗರಣ ಮಂಚ್ ಆಯೋಜಿಸಿರುವ ಬೃಹತ್ ಸ್ವದೇಶಿ ಮೇಳಕ್ಕೆ ಮಲೆನಾಡಿನಲ್ಲಿ ಭರ್ಜರಿ ರೆಸ್ಪಾನ್ ಸಿಕ್ಕಿದ್ದು, 52,384 ಜನ ಈಗಾಗಲೇ ಮೇಳವನ್ನು ಕಣ್ತುಂಬಿಕೊಳ್ಳುವ ಮೂಲಕ ದಾಖಲೆ ಬರೆದಿದ್ದಾರೆ.
ಯಾವುದೇ ಫ್ಲೆಕ್ಸ್‌ಗಳ ಅಬ್ಬರ, ಪ್ರಚಾರದ ಆಡಂಬರವಿಲ್ಲದಿದ್ದರೂ ಸ್ವದೇಶಿತನಕ್ಕೆ ಶಿವಮೊಗ್ಗ ನಗರದ ಜನತೆ ಮನ್ನಣೆ ಕೊಟ್ಟಿದ್ದು, ಇದು ಸ್ವದೇಶಿ ಪ್ರಜ್ಞೆಗೆ ಸಾಕ್ಷಿಯಾಗಿದೆ.ಮೊದಲ ದಿನ ಸುಮಾರು 16 ಸಾವಿರಕ್ಕೂ ಹೆಚ್ಚು ಜನ ಭೇಟಿ ನೀಡಿದ್ದರೆ, ಎರಡನೆಯ ದಿನ 35 ಸಾವಿರಕ್ಕೂ ಹೆಚ್ಚು ಮಂದಿ ಭೇಟಿ ನೀಡಿದ್ದಾರೆ. ಒಟ್ಟು 52,384 ಜನ ಈಗಾಗಲೇ ಮೇಳವನ್ನು ಕಣ್ತುಂಬಿಕೊಳ್ಳುವ ಮೂಲಕ ದಾಖಲೆ ಬರೆದಿದ್ದಾರೆ. ಅಲ್ಲದೇ ಪ್ರತಿ ನಿತ್ಯವೂ 220 ಸ್ಟಾಲ್‌ಗಳಲ್ಲಿ ಒಟ್ಟು 3 ಕೋಟಿ ರು. ಗಿಂತ ಹೆಚ್ಚು ವ್ಯಾಪಾರ ವಹಿವಾಟು ನಡೆದಿದೆ.
ಮೇಳವು ಭಾನುವಾರದವರೆಗೆ ನಡೆಯಲಿದ್ದು, ಪ್ರತಿ ದಿನವೂ ವಿವಿಧ ಮನರಂಜನಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಶನಿವಾರ ಹಾಗೂ ಭಾನುವಾರ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಜನ ಹರಿದು ಬರುವ ನಿರೀಕ್ಷೆ ಇದ್ದು, ಐತಿಹಾಸಿಕ ದಾಖಲೆ ಬರೆಯುವತ್ತ ಮೇಳವು ಸಾಗಿದೆ.
- - -
ಸ್ವದೇಶದ ಮೇಳದ ವಿಶೇಷ ದೇಶಿಯ ಉತ್ಪನ್ನಗಳು. ಹಲವಾರು ಉತ್ಪನ್ನಗಳನ್ನು ಉತ್ಪಾದಿಸುವ ಸಣ್ಣ, ಗುಡಿಕೈಗಾರಿಕೆಗಳು ಕಾಣಸಿಗುತ್ತಿವೆ. ಸುಮಾರು 200ಕ್ಕೂ ಹೆಚ್ಚು ಮಳಿಗೆಗಳನ್ನು ಒಂದೇ ಸೂರಿನಡಿ ತರಲಾಗಿದೆ. ಇಂದು ಅಳಿವಿನಂಚಿನಲ್ಲಿರುವ ಮಲೆನಾಡಿನ ಗಿಡ್ಡ ತಳಿ ಬಗ್ಗೆ ವಿಶೇಷ ಕಾಳಜಿವಹಿಸಿ ತಳಿಯ ಸಂರಕ್ಷಣೆ ದೃಷ್ಟಿಯಿಂದ ದೇಶಿಯ ಗೋ ತಳಿಯ ಪ್ರದರ್ಶನ ಪ್ರಾರಂಭಿಸಲಾಗಿದೆ. ಇಂದಿನ ಆಧುನಿಕ ಬಗೆ ಬಗೆಯ ಆಹಾರಗಳ ಮಧ್ಯೆ ದೇಶಿಯ ಖಾದ್ಯಗಳು, ದೇಶಿ ಕ್ರೀಡೆಗಳು ಇವೆ.
- - -
ಶಿವಮೊಗ್ಗದ ನಗರದ ಫ್ರೀಡಂ ಪಾರ್ಕ್‌ನಲ್ಲಿ ಮೊಟ್ಟ ಮೊದಲ ಬಾರಿಗೆ ಸ್ವದೇಶಿ ಜಾಗರಣ ಮಂಚ್ ಆಯೋಜಿಸಿರುವ ಬೃಹತ್ ಸ್ವದೇಶಿ ಮೇಳದಲ್ಲಿ ವಿವಿಧ ತಿಂಡಿಗಳನ್ನು ಖರೀದಿಸುತ್ತಿರುವ ಜನ.
8ಎಸ್‌ಎಂಜಿಕೆಪಿ05
ಶಿವಮೊಗ್ಗದ ನಗರದ ಫ್ರೀಡಂ ಪಾರ್ಕ್‌ನಲ್ಲಿ ಮೊಟ್ಟ ಮೊದಲ ಬಾರಿಗೆ ಸ್ವದೇಶಿ ಜಾಗರಣ ಮಂಚ್ ಆಯೋಜಿಸಿರುವ ಬೃಹತ್ ಸ್ವದೇಶಿ ಮೇಳದಲ್ಲಿ ಆಹಾರ ಮಳಿಗೆಯಲ್ಲಿ ವಿವಿಧ ಖಾದ್ಯ ಸವಿಯುತ್ತಿರುವ ಜನ.