ಆರೋಗ್ಯ ಕಾರ್ಯಾಗಾರ । ಪರೀಕ್ಷೆ ಸಮಯದಲ್ಲಿ ಪೋಷಕರ ಪಾತ್ರ ಬಗ್ಗೆ ಮಾತು । ಪರೀಕ್ಷಾ ಪೆ ಚರ್ಚಾದಂತಹ ಕಾರ್ಯಕ್ರಮ ಆಲಿಕೆಗೆ ಸಲಹೆ
ಕನ್ನಡಪ್ರಭ ವಾರ್ತೆ ದಾವಣಗೆರೆಪರೀಕ್ಷೆ ಎಂದರೆ ಒಂದು ಮಗು ತಾನು ಆ ವಾರ್ಷಿಕ ಸಮಯದಲ್ಲಿ ಕಲಿತ ವಿದ್ಯೆಯನ್ನು ಬರೆಯುವುದರ/ಪಠನ ಮಾಡುವುದರ ಮೂಲಕ ತೋರ್ಪಡಿಸುವುದೇ ಪರೀಕ್ಷೆ ಎಂದು ಜೆಜೆಎಂ ವೈದ್ಯಕೀಯ ಕಾಲೇಜಿನ ಮಕ್ಕಳ ವಿಭಾಗದ ಸಹ ಪ್ರಾಧ್ಯಾಪಕಿ ಡಾ.ಕೆ.ಎ.ಛಾಯಾ ತಿಳಿಸಿದರು.
ಇಲ್ಲಿನ ಬಾಪೂಜಿ ಮಕ್ಕಳ ಆರೋಗ್ಯ ಸಂಸ್ಥೆ ಮತ್ತು ಸಂಶೋಧನಾ ಕೇಂದ್ರದ ಸಭಾಂಗಣದಲ್ಲಿ ಬಾಪೂಜಿ ಮಕ್ಕಳ ಆರೋಗ್ಯ ಸಂಸ್ಥೆ ಮತ್ತು ಸಂಶೋಧನಾ ಕೇಂದ್ರದಿಂದ ವಿವೇಕ್ ಪೋಷಕರ ಆರೋಗ್ಯ ಕಾರ್ಯಾಗಾರದಡಿ ಆಯೋಜಿಸಿದ ಕಾರ್ಯಕ್ರಮದಲ್ಲಿ ‘ಪರೀಕ್ಷೆ ಸಮಯದಲ್ಲಿ ಮಕ್ಕಳ ಆರೋಗ್ಯ ಹಾಗೂ ಪೋಷಕರಿಗೆ ಸುಲಭ ಸೂತ್ರಗಳು’ ಎಂಬ ವಿಷಯ ಕುರಿತು ಮಾತನಾಡಿದರು.ಮಾರ್ಚ್ ಏಪ್ರಿಲ್ ಎಂದರೆ ಸಾಕು, ಶಾಲಾ-ಕಾಲೇಜು ಮತ್ತು ಮನೆಗಳಲ್ಲಿ ಕರ್ಫ್ಯೂ ವಾತಾವರಣ ಸೃಷ್ಟಿಯಾಗುವ ಸಾಧ್ಯತೆ ಹೆಚ್ಚು. ಏಕೆಂದರೆ ಅದು ಪರೀಕ್ಷೆಗೆ ತಯಾರಿ ನಡೆಸುವ ಸಮಯ. ನಾವು ಅಡಿಗೆ ಮನೆಯಲ್ಲಿ ಒಂದು ತಿನಿಸು ಮಾಡಬೇಕಾದರೆ ಅದರ ಸಿದ್ದತೆ ಎಷ್ಟು ಮುಖ್ಯವೋ ಹಾಗೆಯೇ ಮಕ್ಕಳು ತಮ್ಮ ವಾರ್ಷಿಕ ಪರೀಕ್ಷೆಗಳಿಗೆ ಪೂರ್ವಭಾವಿ ತಯಾರಿ ನಡೆಸುವುದು ಅಷ್ಟೇ ಮುಖ್ಯವಾಗಿರುತ್ತದೆ. ಆದರೆ ಇದು ಒಂದೆರಡು ತಿಂಗಳು ಕಠಿಣ ಶ್ರಮವಾಗದೇ ಶಾಲಾ ಕಾಲೇಜುಗಳ ಪ್ರಾರಂಭದ ದಿನದಿಂದಲೇ ಶುರುವಾಗಿರಬೇಕು ಎಂದರು.
ಪೋಷಕರು ತಮ್ಮ ಮಕ್ಕಳ ಬಗ್ಗೆ ಅತೀ ನಿರೀಕ್ಷೆ ಸರಿಯಲ್ಲ. ಪೋಷಕರು ಅತಿಯಾದ ನಿರೀಕ್ಷೆ ಅದರಲ್ಲೂ ಪಕ್ಕದ ಮನೆಯ ಮಗುವಿಗಿಂತ ಜಾಸ್ತಿ ಅಂಕಗಳಿಸಬೇಕೆಂದು ಅವರಿಗಿಂತ ಜಾಸ್ತಿ ಅಂಕ ತೆಗೆಯಬೇಕೆಂದು, ನೀನೇ ಟಾಪರ್ ಆಗಬೇಕು, ನಮ್ಮ ಮರ್ಯಾದೆ ಉಳಿಸಬೇಕು ಎಂದು ನಿರೀಕ್ಷೆ ಇಟ್ಟುಕೊಂಡಿರುತ್ತಾರೆ. ಒಮ್ಮೊಮ್ಮೆ ಮಕ್ಕಳ ತಮ್ಮ ಸಾಮರ್ಥ್ಯಕ್ಕೂ ಮೀರಿದ ನಿರೀಕ್ಷೆ ಇಟ್ಟುಕೊಂಡು ಅದರ ಸರಿಸಾಟಿ ಉತ್ತೀರ್ಣರಾಗದಿರುವ ಅಂಜಿಕೆ ಯ ಪರೀಕ್ಷಾ ಒತ್ತಡ ಎದುರಾಗುತ್ತದೆ. ಯುದ್ಧ ಕಾಲೇ ಶಸ್ತಾçಭ್ಯಾಸ ಎಂಬ ಗಾದೆ ಮಾತಿನಂತೆ ಯಾವ ಮಕ್ಕಳು ತಮ್ಮನ್ನು ಸುಧೀರ್ಘವಾಗಿ ಮೊದಲನೇ ದಿನದಿಂದ ಅಧ್ಯಯನದಲ್ಲಿ ತೊಡಗಿಸಿಕೊಳ್ಳುವರೋ ಅವರು ಪರೀಕ್ಷೆಯನ್ನು ಸುಲಭವಾಗಿ ಎದುರಿಸುತ್ತಾರೆ. ಪರೀಕ್ಷೆ ಎಂದ ಕೂಡಲೇ ಮಕ್ಕಳಿಗಿಂತ ಪೋಷಕರೇ ಹೆಚ್ಚು ಆತಂಕಕ್ಕೆ ಒಳಗಾಗುವುದರಿಂದ ಮೊದಲಿಗೆ ಪೋಷಕರು ಡಿ-ಸ್ಟೆçಸ್ ಆಗಬೇಕು.ಮಕ್ಕಳು ನಿತ್ಯ ಸಾತ್ವಿಕ ಆಹಾರ, ಸಾಕಷ್ಟು ನೀರನ್ನು ಸೇವಿಸಬೇಕು, 6-8 ತಾಸು ನಿದ್ದೆ ಮಾಡಬೇಕು. ಮಕ್ಕಳು ಪ್ರಧಾನ ಮಂತ್ರಿಯವರ ಪರೀಕ್ಷಾ-ಪೆ-ಚರ್ಚಾದಂತಹ ಕಾರ್ಯಕ್ರಮಗಳನ್ನು ಆಲಿಸಬೇಕು ಎಂದು ಕರೆ ನೀಡಿದರು.
ಕಾಲೇಜಿನ ನಿರ್ದೇಶಕ ಡಾ.ಜಿ.ಗುರುಪ್ರಸಾದ, ವ್ಯವಸ್ಥಾಪಕ ಸಿದ್ದೇಶ್ವರ ಗುಬ್ಬಿ, ಹಿರಿಯ ಮಕ್ಕಳ ತಜ್ಞರಾದ ಡಾ.ಸುರೇಶ ಬಾಬು, ಡಾ.ಕೌಜಲಗಿ, ಡಾ.ಮೃತ್ಯುಂಜಯ, ಮಂಜುನಾಥ ರೊಳ್ಳಿ, ಬಿ.ಎಂ.ನಾಗರಾಜ, ಸಂಜೀವ್, ಆಯಿಷಾ, ನಾಗರತ್ನ, ಮಂಜುಳಾ, ಡಾ.ಮಧು ಪೂಜಾರ್ ಇತರರು ಇದ್ದರು.