ನೀರಿಗಾಗಿ ರೈತರು ಬಂಡೇಳುವ ಕಾಲ ದೂರವಿಲ್ಲ

KannadaprabhaNewsNetwork |  
Published : Mar 18, 2026, 02:15 AM IST
17ಕೆಪಿಎಲ್24:ಕೊಪ್ಪಳ ನಗರದ ನಗರಸಭೆ ಬಳಿ ನಡೆಯುತ್ತಿರುವ ಅನಿರ್ದಿಷ್ಠಾವಧಿ ಧರಣಿಯಲ್ಲಿ ಮಂಗಳವಾರ ಭಾಗ್ಯನಗರ ನವಚೇತನ ಶಾಲಾ ಮಕ್ಕಳು, ಸಿಬ್ಬಂದಿ ಪಾಲ್ಗೊಂಡು ಹೋರಾಟ ವಿವಿಧ ಕಾರ್ಖಾನೆಗಳ ಸ್ಥಾಪನೆ ಮತ್ತು ವಿಸ್ತರಣೆ ವಿರೋಧದ ಹೋರಾಟಕ್ಕೆ ಬೆಂಬಲಿಸಿದರು. | Kannada Prabha

ಸಾರಾಂಶ

ಈಗಾಗಲೇ ತುಂಗಭದ್ರಾ ಅಣೆಕಟ್ಟು ಪ್ರದೇಶದಲ್ಲಿ ರೈತರು ಒಂದೇ ಬೆಳೆ ಬೆಳೆಯುವ ಸ್ಥಿತಿ ನಿರ್ಮಾಣವಾಗಿದೆ.

ಕೊಪ್ಪಳ: ಕಾರ್ಖಾನೆ ಸ್ಥಾಪನೆ ಮತ್ತು ವಿಸ್ತರಣೆ ವಿರೋಧಿಸಿ ನಡೆಯುತ್ತಿರುವ ಹೋರಾಟ ನಿರಂತರವಾಗಿದ್ದು, ಇದೇ ಮಾ. ೨೨ರಂದು ಸಂಜೆ 7 ಗಂಟೆಗೆ ಹಂಪಿಎಕ್ಸ್ ಪ್ರೆಸ್ ಮೂಲಕ ಕೊಪ್ಪಳ ರೈಲ್ವೆ ನಿಲ್ದಾಣದಿಂದ ಬೆಂಗಳೂರು ಚಲೋ ಸತ್ಯಾಗ್ರಹದಲ್ಲಿ ಪಾಲ್ಗೊಳ್ಳಲು ಎಲ್ಲರೂ ಮುಂದಾಗಬೇಕು. ಅಲ್ಲದೆ, ಎಲ್ಲ ಹಂತದ ಘಟಕಗಳು ರೈತರನ್ನು ಬೆಂಗಳೂರು ಚಲೋಗೆ ಕರೆತರಬೇಕು ಎಂದು ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ನಜೀರ್ ಸಾಬ್ ಮೂಲಿಮನಿ ಕರೆ ನೀಡಿದರು.

ನಗರದ ನಗರಸಭೆ ಬಳಿ ನಡೆಯುತ್ತಿರುವ ಅನಿರ್ದಿಷ್ಠಾವಧಿ ಧರಣಿ ಸತ್ಯಾಗ್ರಹದಲ್ಲಿ ಮಂಗಳವಾರ ಪಾಲ್ಗೊಂಡು ಮಾತನಾಡಿದ ಅವರು, ಈಗಾಗಲೇ ತುಂಗಭದ್ರಾ ಅಣೆಕಟ್ಟು ಪ್ರದೇಶದಲ್ಲಿ ರೈತರು ಒಂದೇ ಬೆಳೆ ಬೆಳೆಯುವ ಸ್ಥಿತಿ ನಿರ್ಮಾಣವಾಗಿದೆ.ಕಾರ್ಖಾನೆ ಮಾಲೀಕರು ನಿರ್ಭೀತಿಯಿಂದ ಮಿತಿ ಇಲ್ಲದೆ ನೀರು ಬಳಸುತ್ತಾರೆ. ಮಳೆ ಕೊರತೆ, ಹೂಳು ತುಂಬಿದೆ, ಕ್ರಸ್ಟ್ ಗೇಟ್ ಮುರಿದಿದೆ ಎಂದು ಹೇಳುವುದು ಕೇವಲ ನೆಪವಾಗಿದೆ. ಇದಕ್ಕೆ ರೈತರು ಒಗ್ಗಿಕೊಳ್ಳಲಿ ಎಂದು ರೂಢಿ ಮಾಡಿಸುತ್ತಿದ್ದಾರೆ. ಮುಂದೊಂದು ದಿನ ಇದರ ವಿರುದ್ಧ ರೈತರು ಬಂಡೇಳುವ ಕಾಲ ದೂರವಿಲ್ಲ ಎಂದರು.

ಧರಣಿ ನೇತೃತ್ವ ವಹಿಸಿದ್ದ ಪ್ರಧಾನ ಸಂಚಾಲಕ ಅಲ್ಲಮಪ್ರಭು ಬೆಟ್ಟದೂರು ಮಾತನಾಡಿ,ಮಾ. 22 ರಂದು ಬೆಂಗಳೂರು ಚಲೋ ಸತ್ಯಾಗ್ರಹ ಯಶಸ್ವಿಗೊಳಿಸಲು ಮುನ್ನಡೆಯಿರಿ ಎಂದು ಕರೆ ನೀಡಿದರು.

ಹೋರಾಟದಲ್ಲಿ ಪಾಲ್ಗೊಂಡಿದ್ದ ಭಾಗ್ಯನಗರದ ನವಚೇತನ ಶಾಲೆ ಮುಖ್ಯೋಪಾಧ್ಯಾಯ ಹನುಮಂತಪ್ಪ ಎಂ.ಕಡದಳ್ಳಿ ಮಾತನಾಡಿ, ಬಲ್ಡೋಟ ಲಕ್ಷಗಟ್ಟಲೆ ಜನರ ಆರೋಗ್ಯ ಹಾಳು ಮಾಡಲು ಬರುತ್ತಿರುವುದು ದುರಂತ ಸಂಗತಿ. ಇಲ್ಲಿನ ಹಿರಿಯರು ತಪಸ್ಸಿನ ರೀತಿ ಹೋರಾಟ ಮಾಡುತ್ತಿದ್ದಾರೆ. ಇವರಿಗೆ ನಮ್ಮ ಮಕ್ಕಳು ಚಿರಋಣಿಯಾಗಿರಬೇಕು. ಇದು ನಿಮ್ಮ ಭವಿಷ್ಯದ ಬೆಳಕಿಗಾಗಿ ನಡೆದ ಹೋರಾಟದಲ್ಲಿ ಶುದ್ಧ ಗಾಳಿ, ಶುದ್ಧ ನೀರು, ಶುದ್ಧ ಪರಿಸರ ಪಡೆಯೋಣ ಎಂದರು.

ಸಂಚಾಲಕ ಮಲ್ಲಿಕಾರ್ಜುನ ಬಿ‌. ಗೋನಾಳ, ಮಂಜುನಾಥ ಜಿ. ಗೊಂಡಬಾಳ, ನಿವೃತ್ತ ಪ್ರಾಚಾರ್ಯ ಎಸ್.ಬಿ.ರಾಜೂರು, ಪ್ರಕಾಶಕ ಡಿ.ಎಂ. ಬಡಿಗೇರ, ರಾಜ್ಯ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಹನುಮಂತಪ್ಪ ಹೊಳೆಯಾಚೆ,ರಾಜಶೇಖರ ಏಳುಬಾವಿ, ಶಂಭುಲಿಂಗಪ್ಪ ಹರಗೇರಿ, ಶರಣು ಶೆಟ್ಟರ್, ಸುಭಾನ್ ಸಾಬ್ ನೀರಲಗಿ, ಮಖ್ಬುಲ್ ರಾಯಚೂರು, ನಿರುಪಾದಿಗೌಡ, ಆನಂದ ಕಟ್ಟಿ, ಶಿವಕುಮಾರ ಸ್ವಾಮಿ, ಗಾಯತ್ರಿ ಹೊಸಮನಿ, ನಿವೃತ್ತ ಪ್ರಾಚಾರ್ಯ ಎಲ್.ಎಫ್‌.ಪಾಟೀಲ್, ಶಿವಾನಂದಯ್ಯ ಬೀಳಗಿಮಠ, ಸರೋಜಾ ಬಾಕಳೆ, ಸುವರ್ಣ ಎಂ.ತುಪ್ಪದ್, ಎಂ.ಡಿ. ಸಿರಾಜ್, ಮೂಕಪ್ಪ ಮೇಸ್ತ್ರಿ ಬಸಾಪುರ, ಯಮನೂರಪ್ಪ ಹಾಲಳ್ಳಿ ಬಸಾಪುರ, ರವಿ ಕಾಂತನವರ, ಬಿ.ಜಿ. ಕರಿಗಾರ, ವೈ.ಸತ್ಯನಾರಾಯಣ, ಪಂಪಣ್ಣ ಚಿಂತಪಲ್ಲಿ, ಮಲ್ಲಪ್ಪ ಎಸ್.ಎಚ್, ಹನುಮಂತಪ್ಪ ಗೊಂದಿ, ನಾಗರಾಜ ಕುಷ್ಟಗಿ, ಶಿವಪ್ಪ ಜಲ್ಲಿ, ಆಂಜನೇಯ ಡಿ, ಮಹಾದೇವಪ್ಪ ಮಾವಿನಮಡು, ವಿಜಯ ಮಹಾಂತೇಶ ಹಟ್ಟಿ ಸೇರಿದಂತೆ ಮೊದಲಾದವರು ಹೋರಾಟದಲ್ಲಿ ಪಾಲ್ಗೊಂಡರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಾಲಕ್ಕೆ ಹೆದರಿ ಗುತ್ತಲ ರೈತ ಆತ್ಮಹತ್ಯೆ
ರಂಜಾನ್, ಯುಗಾದಿ ಆಚರಣೆ ಸೌಹಾರ್ದತೆಯ ಸಂಕೇತ-ಬಿ.ಸಿ. ಪಾಟೀಲ್‌