ದಿ. ನರಸರೆಡ್ಡಿ ಜೆಡಿಎಸ್‌ನಿಂದ ಶ್ರದ್ಧಾಂಜಲಿ

KannadaprabhaNewsNetwork | Published : Dec 12, 2024 12:34 AM

ಸಾರಾಂಶ

ಹಿರಿಯ ಮುಖಂಡ ಹಾಗೂ ರಾಜ್ಯ ಭೂ ಅಭಿವೃದ್ಧಿ ಮಂಡಳಿಯ ಮಾಜಿ ನಿರ್ದೇಶಕ ಹಾಗೂ ಪಿಎಲ್‌ಡಿ ಬ್ಯಾಂಕ್‌ ಮಾಜಿ ಅಧ್ಯಕ್ಷರಾದ ಲಿಂಗದಹಳ್ಳಿಯ ಎಲ್‌.ಎಸ್‌.ನರಸರೆಡ್ಡಿ ಅವರು ನಿಧನರಾಗಿದ್ದ ಹಿನ್ನಲೆಯಲ್ಲಿ ಸೋಮವಾರ ತಾಲೂಕು ಜೆಡಿಎಸ್‌ ಘಟಕದಿಂದ ಇಲ್ಲಿನ ಎಸ್‌ಎಸ್‌ಕೆ ಸಮುದಾಯ ಭವನದಲ್ಲಿ ಹಮ್ಮಿಕೊಂಡಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಮೃತರ ಆತ್ಮಕ್ಕೆ ಶಾಂತಿ ಕೋರಿ ಸಂತಾಪ ವ್ಯಕ್ತಪಡಿಸಲಾಯಿತು.

ಕನ್ನಡಪ್ರಭವಾರ್ತೆ ಪಾವಗಡ

ಹಿರಿಯ ಮುಖಂಡ ಹಾಗೂ ರಾಜ್ಯ ಭೂ ಅಭಿವೃದ್ಧಿ ಮಂಡಳಿಯ ಮಾಜಿ ನಿರ್ದೇಶಕ ಹಾಗೂ ಪಿಎಲ್‌ಡಿ ಬ್ಯಾಂಕ್‌ ಮಾಜಿ ಅಧ್ಯಕ್ಷರಾದ ಲಿಂಗದಹಳ್ಳಿಯ ಎಲ್‌.ಎಸ್‌.ನರಸರೆಡ್ಡಿ ಅವರು ನಿಧನರಾಗಿದ್ದ ಹಿನ್ನಲೆಯಲ್ಲಿ ಸೋಮವಾರ ತಾಲೂಕು ಜೆಡಿಎಸ್‌ ಘಟಕದಿಂದ ಇಲ್ಲಿನ ಎಸ್‌ಎಸ್‌ಕೆ ಸಮುದಾಯ ಭವನದಲ್ಲಿ ಹಮ್ಮಿಕೊಂಡಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಮೃತರ ಆತ್ಮಕ್ಕೆ ಶಾಂತಿ ಕೋರಿ ಸಂತಾಪ ವ್ಯಕ್ತಪಡಿಸಲಾಯಿತು.

ಕೆ.ಎಂ.ತಿಮ್ಮರಾಯಪ್ಪಮಾತನಾಡಿ ಹಿರಿಯ ರಾಜಕಾರಣಿ ಹಾಗೂ ರಾಜ್ಯ ಭೂ ಅಭಿವೃದ್ಧಿ ಮಂಡಳಿಯ ಮಾಜಿ ಅಧ್ಯಕ್ಷ, ಜನಪರ ನಾಯಕರಾಗಿದ್ದ ಎಲ್‌.ಎಸ್‌.ನರಸರೆಡ್ಡಿ ಅವರು ಇತ್ತೀಚೆಗೆ ವಯೋ ಸಹಜ ಕಾಯಿಲೆಯಿಂದ ನಿಧನರಾಗಿದ್ದು ಇದರಿಂದ ಜೆಡಿಎಸ್‌ ಪಕ್ಷಕ್ಕೆ ತುಂಬಲಾರದ ನಷ್ಟ ಉಂಟಾಗಿದೆ ಎಂದರು. ಹಿರಿಯ ಮುಖಂಡರಾದ ಎನ್‌.ತಿಮ್ಮಾರೆಡ್ಡಿ, ಶಿವರಾಮರೆಡ್ಡಿ,ಜಿ.ಎನ್‌.ನಾಗಣ್ಣ,ಪಾಂಡುರಂಗಪ್ಪ,ಅಶ್ವತ್ಥರೆಡ್ಡಿ ಇಂತಹ ಮಹಾನ್ ನಾಯಕರ ಗರಡಿಯಲ್ಲಿ ಎಲ್‌.ಎಸ್‌.ನರಸರೆಡ್ಡಿ ಬೆಳೆದಿದ್ದು 55ವರ್ಷಗಳ ಕಾಲ ಜನತಾದಳ ಹಾಗೂ ಜೆಡಿಎಸ್‌ ಕಟ್ಟಿ ಬೆಳೆಸಿದ್ದಾರೆ. ಜೆಡಿಎಸ್‌ಗೆ ಅವರ ಕೊಡುಗೆ ಅಪಾರವಾಗಿದ್ದು ಜಾತಿ,ವ್ಯಕ್ತಿಗೆ ಆದ್ಯತೆ ನೀಡದೇ ತಮ್ಮ ರಾಜಕಾರಣ ಜೀವನದಲ್ಲಿ ಜೆಡಿಎಸ್‌ ಪಕ್ಷಕ್ಕೆ ಬದ್ದರಾಗಿದ್ದರು ಎಂದರು.

ಜೆಡಿಎಸ್‌ ಜಿಲ್ಲಾಧ್ಯಕ್ಷ ಆರ್‌.ಸಿ.ಅಂಜಿನಪ್ಪ, ರಾಜ್ಯ ಘಟಕದ ಜೆಡಿಎಸ್‌ ಉಪಾಧ್ಯಕ್ಷ ಎನ್‌.ತಿಮ್ಮಾರೆಡ್ಡಿ, ಎಸ್‌.ವಿ.ಗೋವಿಂದಪ್ಪ ತಾಲೂಕು ಜೆಡಿಎಸ್‌ ಅಧ್ಯಕ್ಷ ಎನ್‌.ಎ.ಈರಣ್ಣ ,ಹೊಸಹಳ್ಳಿ ಅಂಜನನಾಯಕ, ಜಿಪಂ ಮಾಜಿ ಸದಸ್ಯ ಕೋಟಗುಡ್ಡ ಅಂಜಪ್ಪ ದಿ.ನರಸರೆಡ್ಡಿ ಪುತ್ರ ಸಣ್ಣಾರೆಡ್ಡಿ, ರಾಜಶೇಖರಪ್ಪ,ಜೆಡಿಎಸ್‌ ಘಟಕದ ಮಾಜಿ ಅಧ್ಯಕ್ಷ ಬಲರಾಮರೆಡ್ಡಿ,ಜೆಡಿಎಸ್‌ ಮಹಾ ಪ್ರಧಾನ ಕಾರ್ಯದರ್ಶಿ ಸೊಗಡು ವೆಂಕಟೇಶ್‌ , ಎಸ್‌.ಕೆ.ರೆಡ್ಡಿ,ರೈತ ಸಂಘದ ಅಧ್ಯಕ್ಷ ವಿ.ನಾಗಭೂಷಣರೆಡ್ಡಿ, ದೊಡ್ಡೇನಹಳ್ಳಿಯ ಶಿವಪ್ಪ, ತಾಲೂಕು ಜೆಡಿಎಸ್ ಮಹಿಳಾ ಘಟಕದ ಅಧ್ಯಕ್ಷೆ ಅಂಬಿಕಾರಮೇಶ್‌,ಮುಖಂಡರಾದ ವೈ.ಆರ್‌.ಚೌದರಿ, ರಂಗಸಮುದ್ರ ಕೆ.ವಿ.ಗಿರಿರಾಜ್‌,ಹುಸೇನ್‌ಪುರ ರಾಜ್‌ಗೋಪಾಲ್‌,ರಾಮಾಂಜಿನರೆಡ್ಡಿ, ಜೆಡಿಎಸ್‌ ನಗರ ಘಟಕದ ಅಧ್ಯಕ್ಷ ಗಡ್ಡಂ ತಿಮ್ಮರಾಜ್‌,ಯುವ ಘಟಕದ ಗೋಪಾಲ್‌,ಭರತ್‌ಕುಮಾರ್‌, ನೆರಳೇಕುಂಟೆ ಪ್ರತಾಪ್‌,ಯುವ ಘಟಕದ ಕೃಷ್ಣಗಿರಿ ಶಿವಕುಮಾರ್‌, ವದನಕಲ್ಲು ನರಸಿಂಹಯ್ಯ ಹಾಗೂ ಇತರೆ ಅನೇಕ ಮಂದಿ ಜೆಡಿಎಸ್‌ ಹಿರಿಯ ಮುಖಂಡರು ಹಾಗೂ ಕಾರ್ಯಕರ್ತರು ಸಭೆಯಲ್ಲಿ ಉಪಸ್ಥಿತರಿದ್ದರು.

Share this article