ಶಿಕ್ಷಣ ನೀಡಿ ಬದುಕಿನ ಸನ್ಮಾರ್ಗ ತೋರುವವನೇ ನಿಜವಾದ ಗುರು: ಶ್ರೀಧರ್

KannadaprabhaNewsNetwork | Published : Jul 24, 2024 12:28 AM

ಸಾರಾಂಶ

ತಂದೆ ತಾಯಿ ಮೊದಲ ಗುರು. ಅಕ್ಷರ ಕಲಿಸಿದವರು ಎರಡನೇ ಗುರು. ಹಾಗೇಯೇ ಆಧ್ಯಾತ್ಮಿಕ ಶಿಕ್ಷಣ ನೀಡಿ ಯೋಗ ಧ್ಯಾನ ಪ್ರಾಣಾಯಾಮ ಕಲಿಸಿದ ಆರೋಗ್ಯವನ್ನು ನೀಡಿದ ಗುರುವೂ ಸಹ ಎಲ್ಲ ಗುರುಗಳಂತೆಯೇ ಶ್ರೇಷ್ಠ ಗುರು. ಶಿಷ್ಯನಿಗೆ ಆಧ್ಯಾತ್ಮಿಕ ಶಿಕ್ಷಣ ನೀಡಿ ಬದುಕಿನ ಸನ್ಮಾರ್ಗ ತೋರುವವನೇ ನಿಜವಾದ ಗುರು.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ಶಿಷ್ಯನಿಗೆ ಆಧ್ಯಾತ್ಮಿಕ ಶಿಕ್ಷಣ ನೀಡಿ ಬದುಕಿನ ಸನ್ಮಾರ್ಗ ತೋರುವವನೇ ನಿಜವಾದ ಗುರು ಎಂದು ಉಪನ್ಯಾಸಕ ಶ್ರೀಧರ್ ಹೇಳಿದರು.

ಪಟ್ಟಣದ ಹೌಸಿಂಗ್ ಬೋರ್ಡ್ ಬಡಾವಣೆಯ ಬುದ್ಧ, ಬಸವ, ಅಂಬೇಡ್ಕರ್ ಯೋಗ ಕೇಂದ್ರದಲ್ಲಿ ಆಯೋಜಿಸಿದ್ದ ಗುರುಪೂರ್ಣಿಮೆ ಕಾರ್ಯಕ್ರಮದಲ್ಲಿ ಯೋಗ ಗುರು ಅಲ್ಲಮಪ್ರಭು ಅವರನ್ನು ಅಭಿನಂದಿಸಿ ಮಾತನಾಡಿದರು.

ತಂದೆ ತಾಯಿ ಮೊದಲ ಗುರು. ಅಕ್ಷರ ಕಲಿಸಿದವರು ಎರಡನೇ ಗುರು. ಹಾಗೇಯೇ ಆಧ್ಯಾತ್ಮಿಕ ಶಿಕ್ಷಣ ನೀಡಿ ಯೋಗ ಧ್ಯಾನ ಪ್ರಾಣಾಯಾಮ ಕಲಿಸಿದ ಆರೋಗ್ಯವನ್ನು ನೀಡಿದ ಗುರುವೂ ಸಹ ಎಲ್ಲ ಗುರುಗಳಂತೆಯೇ ಶ್ರೇಷ್ಠ ಗುರು ಎಂದರು.

ಬುದ್ಧ, ಬಸವ, ಅಂಬೇಡ್ಕರ್ ಅವರು ಜಗತ್ತಿನ ಜೀವಿಗಳ ಸುಖ ಶಾಂತಿ ನೆಮ್ಮದಿಗಾಗಿ ದುಡಿದ ಮಹನೀಯರು. ಇಂತಹ ಪುಣ್ಯಾತ್ಮರ ಹೆಸರಿಟ್ಟು ನಮ್ಮ ಆರೋಗ್ಯ ಕಾಪಾಡಿಕೊಳ್ಳಲು ಯೋಗ ಕಲಿಸುವ ಮೂಲಕ ಸನ್ಮಾರ್ಗ ತೋರುತ್ತಿರುವ ಅಲ್ಲಮಪ್ರಭು ಯೋಗ ಗುರು ಅವರಿಗೆ ಸನ್ಮಾನ ಔಚಿತ್ಯ ಪೂರ್ಣ ಎಂದರು.

ತಾಲೂಕು ಒಕ್ಕಲಿಗರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ನಾಟನಹಳ್ಳಿ ಗಂಗಾಧರ್ ಮಾತನಾಡಿ, ಗುರು ಅಲ್ಲಮಪ್ರಭು ರವರು ಆರೋಗ್ಯ ಚಿಂತಕರಾಗಿ ಜನತೆ ಯೋಗ ಕಲಿತು ಆರೋಗ್ಯವಂತರಾಗಲಿ ಎಂದು ಯೋಗ ತರಗತಿ ಮಾಡಿರೋದು ನಮ್ಮ ಪುಣ್ಯ ಎಂದು ನುಡಿದರು.

ತಾಲೂಕು ಒಕ್ಕಲಿಗರ ಸಂಘದ ಉಪಾಧ್ಯಕ್ಷ ಬೋರೇಗೌಡರು ಮಾತಾನಾಡಿದರು. ಕಾರ್ಯಕ್ರಮದಲ್ಲಿ ಶಿಕ್ಷಕರಾದ ಕೊಡಗಹಳ್ಳಿ ಪ್ರಕಾಶ್, ಕೆಂಬಾರೆಗೌಡ, ಕೆಎಸ್ಆರ್‌ಸಿ ವಿಶ್ವನಾಥ್, ಗಿರೀಶ್ ಕಿಕ್ಕೇರಿ, ಪೋಸ್ಟ್ ಕೃಷ್ಣೇಗೌಡ, ಕೆಇಬಿ ಶಿವಣ್ಣ, ಆನಂದ್, ಸುಲೋಚನಾ, ಕರುಣಾ ಕೊಣನೂರು, ವಸಂತರಾಜು, ಭೈರಾಪುರ ಶಂಕರ್, ಐಸಿಎಲ್ ಇಂದ್ರಕುಮಾರ್, ಕಾವೇರಿ ಟೈಲರ್ ವಾಸು, ರಾಧಾ ಇದ್ದರು.

ಕೃಷಿಕ ಪ್ರಶಸ್ತಿಗೆ ರೈತರಿಂದ ಅರ್ಜಿ ಆಹ್ವಾನ

ಕೆ.ಆರ್.ಪೇಟೆ:ಆತ್ಮ ಯೋಜನೆಯಡಿ ರಾಜ್ಯ, ಜಿಲ್ಲಾ ಹಾಗೂ ತಾಲೂಕು ಮಟ್ಟದ ಶ್ರೇಷ್ಠ ಕೃಷಿಕ ಪ್ರಶಸ್ತಿ ಹಾಗೂ ಶ್ರೇಷ್ಠ ಆಸಕ್ತ ಗುಂಪುಗಳಿಗೆ ಪ್ರಶಸ್ತಿ ನೀಡಲು ಆಸಕ್ತ ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ.

ಕೃಷಿ ಹಾಗೂ ಕೃಷಿ ಸಂಬಂಧಿತ ಸಮಗ್ರ ಬೆಳೆ ಪದ್ಧತಿ, ಸಮಗ್ರ ನೀರು ನಿರ್ವಹಣೆ ಸಾವಯವ ಕೃಷಿ ಅಭಿವೃದ್ಧಿ, ವೈಜ್ಞಾನಿಕ ಯಂತ್ರೋಪಕರಣಗಳ ಬಳಕೆ, ತೋಟಗಾರಿಕೆ, ಹೈನುಗಾರಿಕೆ, ಕೋಳಿ ಸಾಕಾಣಿಕೆ, ಮೀನುಗಾರಿಕೆ, ರೇಷ್ಮೆ ಬೇಸಾಯ, ಹೈಟೆಕ್ ತಂತ್ರಜ್ಞಾನ ಅಳವಡಿಕೆ, ಕೃಷಿ ಸಂಸ್ಕರಣೆ ಅರಣ್ಯ ಕೃಷಿ, ಆಡು, ಕುರಿ, ಮೊಲ ಇತ್ಯಾದಿ ಸಾಕಾಣಿಕೆ ಚಟುವಟಿಕೆಗಳ ಕ್ಷೇತ್ರಗಳಲ್ಲಿ ವಿಶೇಷ ಸಾಧನೆ ಮಾಡಿರುವ ರೈತರು ಪ್ರಶಸ್ತಿಗಳಿಗೆ ಅರ್ಜಿ ಸಲ್ಲಿಸಬಹುದು.10 ರೈತರಿಗೆ ರಾಜ್ಯ ಮಟ್ಟದ ಉದಯೋನ್ಮುಖ ಕೃಷಿ ಪಂಡಿತ ಪ್ರಶಸ್ತಿಗೆ ತಲಾ 50 ಸಾವಿರ ರು., 10 ರೈತರಿಗೆ ಜಿಲ್ಲಾ ಮಟ್ಟದ ಶ್ರೇಷ್ಠ ಕೃಷಿಕ ಪ್ರಶಸ್ತಿಗೆ ತಲಾ 25 ಸಾವಿರ ರು., ತಾಲೂಕಿನ 5 ರೈತರಿಗೆ ತಾಲೂಕು ಮಟ್ಟದ ಶ್ರೇಷ್ಠ ಕೃಷಿಕ ಪ್ರಶಸ್ತಿಗೆ ತಲಾ 10 ಸಾವಿರ ರು.ನಗದು ನೀಡಲಾಗುವುದು.

ರೈತರ ಗುಂಪುಗಳಿಗೆ 2024-25ನೇ ಸಾಲಿನ ಶ್ರೇಷ್ಠ ಆಸಕ್ತ ಗುಂಪು ಪ್ರಶಸ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಜಿಲ್ಲೆಗೆ 5 ರೈತರ/ರೈತ ಮಹಿಳೆ ಗುಂಪುಗಳಿಗೆ ತಲಾ 20ಸಾವಿರ ರು. ನಗದು ಹಾಗೂ ಪ್ರಶಸ್ತಿ ನೀಡಲಾಗುವುದು ಎಂದು ತಿಳಿಸಿದ್ದಾರೆ.ಆಸಕ್ತ ರೈತರು ತಾಲೂಕಿನ ಸಹಾಯಕ ಕೃಷಿ ನಿರ್ದೇಶಕರ ಕಚೇರಿಗೆ ಭರ್ತಿ ಮಾಡಿದ ಅರ್ಜಿಗಳನ್ನು ಹೋಬಳಿಯ ರೈತ ಸಂಪರ್ಕ ಕೇಂದ್ರಗಳ ಮೂಲಕ ಆಗಸ್ಟ್ 23ರ ಸಂಜೆ 5 ಗಂಟೆಯೊಳಗೆ ತಲುಪಿಸುವಂತೆ ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಎಚ್.ಜೆ.ಸಂತೋಷ್ ಕುಮಾರ್ ತಿಳಿಸಿದ್ದಾರೆ.

Share this article