ಕನ್ನಡಪ್ರಭ ವಾರ್ತೆ ಶನಿವಾರಸಂತೆ
ತೆರಳುವ ಮಾರ್ಗ ಮಧ್ಯೆ ಶನಿವಾರಸಂತೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಧರ್ಮಸ್ಥಳ ಪುಣ್ಯ ಸ್ಥಳ ಈ ದೇವಾಲಯದ ಬಗ್ಗೆ ಯಾರೇ ಷಡ್ಯಂತ್ರ ನಡೆಸಿದರು ಅದು ನಡೆಯುವುದಿಲ್ಲ. ಈ ಚಿನ್ನಯ್ಯನ ಹಿಂದೆ ಯಾರು ಯಾರು ಇದ್ದಾರೆ ಎಂದು ತನಿಖೆ ಮುಂದುವರಿಯಬೇಕು. ಎಸ್ ಐ ಟಿ ರಚನೆ ಮಾಡುವವರೆಗೆ ಯಾರು ಮಾತನಾಡಿಲ್ಲ ಎಂಬ ಆರೋಪ ಮಾಡುತ್ತಿದ್ದಾರೆ. ಆದರೆ ಈ ರಚನೆ ಮಾಡಿದ್ದರಿಂದ ಎಲ್ಲಾ ಸತ್ಯಾ ಸತ್ಯತೆ ಹೊರ ಬರುತ್ತಿದೆ ಎಂದು ಹೇಳಿದರು.
ನಾನು ಧರ್ಮಸ್ಥಳದ ಭಕ್ತ. ಹಾಗೂ ಒಬ್ಬ ಜನಪ್ರತಿನಿಧಿಯಾಗಿ ಈ ಪುಣ್ಯ ಕ್ಷೇತ್ರಕ್ಕೆ ಹೋಗುತ್ತಿದ್ದೇನೆ. ಸರ್ಕಾರದ ಕಣ್ಣು ತೆರೆಸುವ ಕೆಲಸ ಮಾಡುತ್ತಿದ್ದೇವೆ ಎಂದರು.ಈ ಸಂದರ್ಭದಲ್ಲಿ ಶನಿವಾರಸಂತೆ ಜೆಡಿಎಸ್ ಪ್ರಮುಖರಾದ ಹರೀಶ್, ಮೋಹನ್ ಧರ್ಮಪ್ಪ, ಮಹಮ್ಮದ್ ಮುಂತಾದವರಿದ್ದರು.