ಅಪಪ್ರಚಾರವಲ್ಲ ಸತ್ಯ ಹೊರ ಬರಬೇಕು: ನಟ ಅಹಿಂಸಾ ಚೇತನ್‌

KannadaprabhaNewsNetwork |  
Published : Aug 17, 2025, 01:33 AM IST

ಸಾರಾಂಶ

ಚಿಕ್ಕಮಗಳೂರುಧರ್ಮಸ್ಥಳದ ವಿಚಾರದಲ್ಲಿ ಸತ್ಯ ಹೊರ ಬರಬೇಕು. ಅಪಪ್ರಚಾರ ವಾಗಬಾರದು. ಎಷ್ಟೋ ದಶಕಗಳ ಕಾಲ ಭಯದ ವಾತಾವರಣ ವಿತ್ತು. ಪಾಯಿಂಟ್ 6 ಹಾಗೂ 11ರಲ್ಲಿ ಅಸ್ತಿಪಂಜರ ಸಿಕ್ಕಿದೆ ಎನ್ನಲಾಗುತ್ತಿದೆ. ಇದರಲ್ಲಿ ಎಷ್ಟರ ಮಟ್ಟಿಗೆ ಸತ್ಯ ಇದೆ. ಪ್ರಕರಣದಲ್ಲಿ ಏನೇನು ಇದೆ ಎನ್ನುವುದು ತನಿಖೆಯಲ್ಲಿ ತಿಳಿಯುತ್ತದೆ ಎಂದು ನಟ ಅಹಿಂಸಾ ಚೇತನ್ ಹೇಳಿದರು.

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ಧರ್ಮಸ್ಥಳದ ವಿಚಾರದಲ್ಲಿ ಸತ್ಯ ಹೊರ ಬರಬೇಕು. ಅಪಪ್ರಚಾರ ವಾಗಬಾರದು. ಎಷ್ಟೋ ದಶಕಗಳ ಕಾಲ ಭಯದ ವಾತಾವರಣ ವಿತ್ತು. ಪಾಯಿಂಟ್ 6 ಹಾಗೂ 11ರಲ್ಲಿ ಅಸ್ತಿಪಂಜರ ಸಿಕ್ಕಿದೆ ಎನ್ನಲಾಗುತ್ತಿದೆ. ಇದರಲ್ಲಿ ಎಷ್ಟರ ಮಟ್ಟಿಗೆ ಸತ್ಯ ಇದೆ. ಪ್ರಕರಣದಲ್ಲಿ ಏನೇನು ಇದೆ ಎನ್ನುವುದು ತನಿಖೆಯಲ್ಲಿ ತಿಳಿಯುತ್ತದೆ ಎಂದು ನಟ ಅಹಿಂಸಾ ಚೇತನ್ ಹೇಳಿದರು.

ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಸ್ಐಟಿ ತಂಡದ ಮೇಲೆ ನಂಬಿಕೆ ಇದೆ. ಹಾಗಾಗಿಯೇ ದೂರುದಾರರು ಬರುತ್ತಿದ್ದಾರೆ. ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖೆ ಮುಂದುವರಿಯಬೇಕು. ಪವರ್ ಫುಲ್ ಇರುವವರ ಪರ ವಾಗಿ ಪ್ರಕರಣ ಮುಚ್ಚಿ ಹಾಕುವ ಪ್ರಶ್ನೆ ಬರಬಾರದು ಎಂದು ಹೇಳಿದರು.

ಡಿ.ಕೆ.ಶಿವಕುಮಾರ್ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಅಧಿಕಾರದಲ್ಲಿರುವವರು ಸತ್ಯದ ಪರ ಇರಬೇಕು. ಡಿ.ಕೆ.ಶಿವಕುಮಾರ್ ಹೇಳಿಕೆ ಖಂಡಿಸುತ್ತೇವೆ. ಬಿಜೆಪಿ ಶಾಸಕರು ಸದನದಲ್ಲಿ ಧಮಕಿ ಹಾಕುವ ರೀತಿ ನಡೆದುಕೊಳ್ಳುತ್ತಿದ್ದಾರೆ. ಇದು ಅವರಲ್ಲಿನ ಕಾಳಜಿ ಕೊರತೆ ಮತ್ತು ಪ್ರಜಾಪ್ರಭುತ್ವದ ಮೇಲಿನ ಗೌರವದ ಕೊರತೆ ಎದ್ದು ತೋರಿಸುತ್ತಿದೆ ಎಂದರು.

ಧರ್ಮಸ್ಥಳಕ್ಕೆ ಬಿಜೆಪಿ ಶಾಸಕರ ಕಾರ್ ರ್‍ಯಾಲಿ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಪ್ರಜಾಪ್ರಭುತ್ವದಡಿ ಯಾರು ಬೇಕಾದರೂ ಹೋರಾಟ ಮಾಡಬಹುದು. ಅಸಹಜ ಸಾವಿನ ಬಗ್ಗೆ ಸತ್ಯ ಹೊರಬರಬೇಕು ಎನ್ನುವ ಹಲವು ಜನ ಹಾಗೂ ಆರ್‌ಎಸ್‌ಎಸ್‌ ನಲ್ಲಿರುವವರು ನಮ್ಮ ಜೊತೆ ಇದ್ದಾರೆ. ನಮ್ಮೊಂದಿಗೆ ಎಡಪಂಥೀಯರು ಮಧ್ಯಪಂಥೀಯರು ಇದ್ದಾರೆ. ನಾವು ಸಿದ್ಧಾಂತ ಮೀರಿ ನಿಂತಿದ್ದೇವೆ. ಬಿಜೆಪಿಯವರು ಪ್ರತಿಭಟನೆ ಯಾವ ರೀತಿ ಮಾಡುತ್ತಾರೆಯೋ ಅದು ಅವರ ಇಷ್ಟ. ಧಮಕಿ ಹಾಕಿ ಎಲ್ಲರನ್ನು ಬೆದರಿ ಸುತ್ತೇವೆ ಎನ್ನುವುದು ಸಂವಿಧಾನಕ್ಕೆ ವಿರೋಧ. ಇಂಥವರನ್ನು ಮುಂದಿನ ಚುನಾವಣೆಯಲ್ಲಿ ಜನ ಗೆಲ್ಲಿಸಬಾರದು ಎಂದು ಕರೆ ನೀಡಿದರು.ನ್ಯಾಯಾಲಯದ ಮೇಲೆ ನಂಬಿಕೆ ಹೆಚ್ಚಿದೆ:

ಯಾರು ಎಷ್ಟೇ ಪ್ರಭಾವಿಯಾದರೂ ತಪ್ಪು ಮಾಡಿದರೆ ಕ್ರಮ ಆಗುತ್ತದೆ ಎನ್ನುವುದಕ್ಕೆ ನಟ ದರ್ಶನ್ ಬೇಲ್ ರದ್ದು ಪ್ರಕರಣವೇ ಉದಾಹರಣೆ. ಈ ಪ್ರಕರಣದಿಂದ ನ್ಯಾಯಾಲಯದ ಮೇಲೆ ನಂಬಿಕೆ ಹೆಚ್ಚಾಗಿದೆ ಎಂದು ಅಹಿಂಸಾ ಚೇತನ್ ತಿಳಿಸಿದರು.

ಪ್ರಜಾಪ್ರಭುತ್ವ ಹಾಗೂ ಕಾನೂನಿನಡಿ ನಾವೆಲ್ಲರೂ ಸಮಾನರು. ಎಷ್ಟೇ ಪ್ರಭಾವಿಗಳಾದರೂ ತಪ್ಪು ಮಾಡಿದಾಗ ಶಿಕ್ಷೆ ಅನುಭವಿಸಲೇಬೇಕು ಎಂದರು.

ದರ್ಶನ್ ಅಭಿಮಾನಿಗಳು ಎಂದು ಹೇಳಿಕೊಂಡ ಕೆಲವರು ನಿಂದನಾತ್ಮಕ ಮಾತುಗಳನ್ನು ಆಡುವ ವಿಚಾರ ಗಮನಕ್ಕೆ ಬಂದಿದೆ. ದರ್ಶನ್ ಅವರ ಎಲ್ಲ ಅಭಿಮಾನಿಗಳು ಈ ರೀತಿ ಮಾಡುತ್ತಾ ಇದ್ದಾರೆ ಎಂದು ಹೇಳಲು ಆಗುವುದಿಲ್ಲ. ಕೆಲವರಲ್ಲಿ ಬೇರೆ ಬೇರೆ ಮನಸ್ಥಿತಿ ಸಿದ್ಧಾಂತಗಳು ಇರುತ್ತವೆ. ಟೀಕೆ ಟಿಪ್ಪಣಿಗಳು ಇರಬೇಕು. ಆದರೆ ನಿಂದನಾತ್ಮಕ ಮಾತುಗಳಿಗೆ ಕಡಿವಾಣ ಹಾಕ ಬೇಕಾಗಿದೆ ಎಂದರು.

ನಟಿ ರಮ್ಯಾ ವಿಚಾರದಲ್ಲಿ ತಪ್ಪಿತಸ್ಥರನ್ನು ಬಂಧಿಸಿ ಪೊಲೀಸರು ಕ್ರಮ ಕೈಗೊಂಡಿದ್ದಾರೆ. ಇದು ಮುಂದಿನ ದಿನಗಳಲ್ಲಿ ನಿಂದನಾತ್ಮಕವಾಗಿ ಮಾತನಾಡುವವರಿಗೆ ಎಚ್ಚರವಾಗಬೇಕು ಎಂದು ತಿಳಿಸಿದರು.

PREV

Recommended Stories

ಧರ್ಮಸ್ಥಳ ಗ್ರಾಮ ಕೇಸ್‌ ರೀತಿ ಶ್ವಾನ ಮೂಳೆ ಪತ್ತೆಗೆ ಎಸ್‌ಐಟಿ?
ಎಸ್ಸೆಸ್ಸೆಲ್ಸಿ- ಪಿಯು : ಈ ವರ್ಷವೂ 3 ಪರೀಕ್ಷೆ ಉದ್ದೇಶ ಫೇಲ್‌