ಕನ್ನಡಪ್ರಭ ವಾರ್ತೆ, ಶಿಕಾರಿಪುರ
ಪಟ್ಟಣದ ಶಿವಗಿರಿ ಮರಾಠ ಸಮಾಜ ವತಿಯಿಂದ ನಿರ್ಮಿಸಲಾದ ಶ್ರೀ ತುಳಜಾಭವಾನಿ ದೇವಸ್ಥಾನ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ದೇವರು ಎಲ್ಲರಿಗೂ ಮಂಗಲ ಕರುಣಿಸಲಿ. ಶ್ರೀಮಠದ ಆವರಣದಲ್ಲಿ ಶ್ರೀ ಭವಾನಿ ಶಂಕರ, ಬೃಹತ್ ನಾಗರಕಟ್ಟೆ ನಿರ್ಮಿಸಿದ್ದು ಭಕ್ತರಿಗೆ ಅನುಕೂಲ ಕಲ್ಪಿಸಿದಂತಾಗಿದೆ. ಶಿವಾಜಿ ಮಹಾರಾಜರಲ್ಲಿ ಇದ್ದ ಶಕ್ತಿ ತೋರಿಸಿ, ಹಿಂದೂವೀ ಸ್ವರಾಜ್ಯ ನಿರ್ಮಾಣಕ್ಕೆ ಪ್ರೇರೇಪಿಸಿದ ತುಳಜಾಭವಾನಿ ದೇವಸ್ಥಾನ ಇಲ್ಲಿನ ಭಕ್ತರಿಗೂ ಆದರ್ಶ ಜೀವನ ಕಲ್ಪಿಸುವಂತಾಗಲಿ ಎಂದು ಹಾರೈಸಿದರು.
ಸಂಸದ ಬಿ.ವೈ.ರಾಘವೇಂದ್ರ ಮಾತನಾಡಿ, ಶ್ರೀ ತುಳಜಾಭವಾನಿ ಭವ್ಯ ದೇವಸ್ಥಾನ ಈ ಭಾಗದ ಸಾವಿರಾರು ಭಕ್ತರಿಗೆ ಅನುಕೂಲ ಕಲ್ಪಿಸುತ್ತದೆ. ಮಹಾರಾಷ್ಟ್ರದ ತುಳಜಾಪುರಕ್ಕೆ ಹೋಗಲು ಅಸಾಧ್ಯವಾದ ಭಕ್ತರಿಗೆ ಇಲ್ಲಿಯೇ ದೇವಿ ದರ್ಶನ ಲಭಿಸಲಿದೆ. ದೇವಸ್ಥಾನ ಆವರಣದಲ್ಲಿ ಸಿಸಿ ರಸ್ತೆ, ಚರಂಡಿ, ಸಮುದಾಯ ಭವನ, ದೇವಸ್ಥಾನ ನಿರ್ಮಾಣಕ್ಕಾಗಿ ಬಿ.ಎಸ್.ಯಡಿಯೂರಪ್ಪ ₹1 ಕೋಟಿಗೂ ಹೆಚ್ಚು ಅನುದಾನ ನೀಡಿದ್ದು, ಅದರ ಸದ್ಭಳಕೆ ಖುಷಿಯ ಸಂಗತಿ. ಶಿವಾಜಿಯಲ್ಲಿ ಇದ್ದ ಆದರ್ಶ ಗುಣಗಳು ಇಲ್ಲಿನ ಯುವಕರೂ ಅಳವಡಿಸಿಕೊಂಡರೆ ಸುಭದ್ರ ದೇಶ ಕಟ್ಟಬಹುದು ಎಂದರು.ಶ್ರೀ ತುಳುಜಾಭವಾನಿ ದೇವಸ್ಥಾನ ಉತ್ಸವ ಸಮಿತಿ ಅಧ್ಯಕ್ಷ ಗುರುರಾಜ್ ಜಗತಾಪ್ ಮಾತನಾಡಿ, ಇದೇ ತಿಂಗಳ 18 ರಂದು ಶ್ರೀ ಭವಾನಿಶಂಕರ ದೇವಸ್ಥಾನ ಉದ್ಘಾಟನೆಗೊಂಡಿದೆ, 23ರಂದು ನಾಗರಕಟ್ಟೆ ಅನಾವರಣ, ಫೆ.14ರಿಂದ 24 ರವರೆಗೆ ನಿತ್ಯಸಂಜೆ ಸಾಂಸ್ಕೃತಿಕ ಕಾರ್ಯಕ್ರಮ, ನಿತ್ಯ ಅನ್ನದಾನ ಕಾರ್ಯಕ್ರಮ ಸಂಪನ್ನಗೊಂಡಿದೆ. ಈ ದಿಸೆಯಲ್ಲಿ ಶ್ರಮಿಸಿದ ಸಮಾಜದ ಎಲ್ಲರಿಗೂ ಸಹಕಾರ ನೀಡಿರುವ ದಾನಿಗಳಿಗೂ ಭಕ್ತರಿಗೂ ಧನ್ಯವಾದ ಎಂದು ತಿಳಿಸಿದರು.
ಧಾರ್ಮಿಕ ಕಾರ್ಯಕ್ರಮ:
- - - -25ಕೆ.ಎಸ್.ಕೆಪಿ3: