ರಾಣಿಬೆನ್ನೂರು: ಧರ್ಮಾಚರಣೆಯಲ್ಲಿಯೇ ಮನುಷ್ಯನ ಸಾರ್ಥಕತೆಯಿದೆ ಎಂದು ಹೊನ್ನಾಳಿ ಹಿರೇಕಲ್ಮಠದ ಡಾ. ಒಡೆಯರ ಚೆನ್ನಮಲ್ಲಿಕಾರ್ಜುನ ಶಿವಾಚಾರ್ಯರು ನುಡಿದರು. ಇಲ್ಲಿನ ಮೃತ್ಯುಂಜಯ ನಗರದ ಚೆನ್ನೇಶ್ವರ ಮಠದಲ್ಲಿ ಸ್ಥಳೀಯ ಹೊನ್ನಾಳಿ ಚೆನ್ನಮಲ್ಲಿಕಾರ್ಜುನ ಸಂಸ್ಕೃತಿ ಪ್ರಸಾರ ಪರಿಷತ್ ವತಿಯಿಂದ ಜ್ಞಾನವಾಹಿನಿ ಮಾಸಿಕ ಧರ್ಮಸಭೆಯ ಸಾನ್ನಿಧ್ಯ ವಹಿಸಿ ಮಾತನಾಡಿದರು. ಹೊನ್ನಾಳಿ ಬಿಜೆಪಿ ಕಾರ್ಯದರ್ಶಿ ಶಾಂತರಾಜ ಪಾಟೀಲ ಉಪನ್ಯಾಸ ನೀಡಿ, ಮಾನವನ ಕಾಯಕ ಕರ್ಮಗಳಿಗೆ ಧರ್ಮವೇ ಮೂಲ. ಜನ್ಮಜನ್ಮಾಂತರದ ಕರ್ಮಾಚರಣೆಗಳು ನಮ್ಮನ್ನು ಈ ಸ್ಥಿತಿಗೆ ತಂದಿವೆ. ನಮ್ಮ ಹಿರಿಯರು ಆಚರಿಸಿಕೊಂಡು ಬಂದಿರುವ ಹಬ್ಬ ಹರಿದಿನಗಳಲ್ಲಿಯೇ ಧರ್ಮ ಅಡಗಿದೆ. ಅವುಗಳನ್ನು ಸರಿಯಾಗಿ ಅರ್ಥೈಸಿಕೊಂಡು ಮುಂದಿನ ಪೀಳಿಗೆಗೆ ಪರಿಚಯಿಸಬೇಕಾಗಿದೆ ಎಂದರು. ಈ ವೇಳೆ ವೇದ ಜ್ಯೋತಿಷ್ಯ ಭಾಸ್ಕರ ಪ್ರಶಸ್ತಿ ಪುರಸ್ಕೃತ ಕೋಟೆಮಲ್ಲೂರಿನ ಶಿವಲಿಂಗರಾಧ್ಯಶಾಸ್ತ್ರಿಗಳಿಗೆ ಜ್ಞಾನ ಸಿಂಧು ಬಿರುದು ಪ್ರದಾನ ಮಾಡಲಾಯಿತು. ಶ್ರೀಮಠದ ಉಪಾಧ್ಯಕ್ಷ ಬಸವರಾಜಣ್ಣ ಪಟ್ಟಣಶೆಟ್ಟಿ, ಕಾರ್ಯದರ್ಶಿ ಅಮೃತಗೌಡ ಹಿರೇಮಠ, ಜಗದೀಶ ಮಳಿಮಠ, ರಾಜಶೇಖರ ಹಿರೇಮಠ, ಬಸವರಾಜಪ್ಪ ಕುರುವತ್ತಿ, ಬಿದ್ದಾಡೆಪ್ಪ ಚಕ್ರಸಾಲಿ, ಎಸ್.ಜಿ. ಹಿರೇಮಠ, ನಿರ್ಮಲಾ, ಮೃತ್ಯುಂಜಯ ಆರಾಧ್ಯಮಠ, ಮಲ್ಲೇಶ ಎಮ್ಮಿ, ಕವಿತಾ, ಕೊಟ್ರೇಶ ಬುಡ್ಡಜ್ಜನವರ, ಕಸ್ತೂರಮ್ಮ ಪಾಟೀಲ, ಉಮೇಶ ಗುಂಡಗಟ್ಟಿ, ಸೋಮನಾಥ ಹಿರೇಮಠ, ಮೃತ್ಯುಂಜಯ ಪಾಟೀಲ, ಹಾಲಸಿದ್ದಯ್ಯ ಶಾಸ್ತ್ರಿ, ಗಾಯಿತ್ರಮ್ಮ ಕುರವತ್ತಿ, ಶಕುಂತಲಮ್ಮ ಹಾಗೂ ತಾಲೂಕು ವೀರಶೈವ ಜಂಗಮ ಪುರೋಹಿತ ಮತ್ತು ಅರ್ಚಕರ ಸಂಘ, ದಾನೇಶ್ವರಿ ಜಾಗೃತಿ ಅಕ್ಕನ ಬಳಗ ಹಾಗೂ ಕದಳಿ ವೇದಿಕೆಯ ಸರ್ವ ಪದಾಧಿಕಾರಿಗಳು ಉಪಸ್ಥಿತರಿದ್ದರು.ನೀರು ಸರಬರಾಜು ವ್ಯತ್ಯಯ