ನಶಿಸಿಸುತ್ತಿರುವ ಭಾರತೀಯ ಸಂಸ್ಕೃತಿ, ಸಂಪ್ರದಾಯಗಳು: ಅನುಪಮಾ ಧಾರವಾಡ

KannadaprabhaNewsNetwork |  
Published : Oct 19, 2026, 03:00 AM IST
ಫೋಟೋ-18-ಜಿಎಲ್ಡಿ1- ಗುಳೇದಗುಡ್ಡ ಪಟ್ಟಣದಲ್ಲಿ ಮುಕ್ತಾ ಅಶೋಕ್ ಹೆಗಡೆ ಅವರು ಹಮ್ಮಿಕೊಂಡ ದಸರಾ ಗೊಂಬೆಗಳ ಪ್ರದರ್ಶನವನ್ನು ಅನುಪಮಾ ಧಾರವಾಡ ಉದ್ಘಾಟಿಸಿದರು.  | Kannada Prabha

ಸಾರಾಂಶ

ಹಬ್ಬಗಳು ಭಾರತೀಯ ಸಂಸ್ಕೃತಿಯ ಪ್ರತೀಕವಾಗಿವೆ. ಆಚರಣೆ, ಸಂಪ್ರದಾಯ ಮತ್ತು ಜಾನಪದ ಕರಕುಶಲ ಕಲೆಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಮಹತ್ವದ ಕಾರ್ಯವಾಗಬೇಕು. ಅದನ್ನು ದಸರಾ ಗೊಂಬೆಗಳ ಪ್ರದರ್ಶನದ ಮೂಲಕ ಮುಕ್ತಾ ಅಶೋಕ ಹೆಗಡೆ ಮಾಡುತ್ತಿರುವುದು ಹೆಮ್ಮೆ ಪಡುವ ವಿಷಯವಾಗಿದೆ ಎಂದು ಇನ್ನರ್‌ವೀಲ್‌ ಕ್ಲಬ್ ಅಧ್ಯಕ್ಷೆ ಅನುಪಮಾ ಧಾರವಾಡ ಹೇಳಿದರು.

ಕನ್ನಡಪ್ರಭ ವಾರ್ತೆ ಗುಳೇದಗುಡ್ಡ

ಹಬ್ಬಗಳು ಭಾರತೀಯ ಸಂಸ್ಕೃತಿಯ ಪ್ರತೀಕವಾಗಿವೆ. ಆಚರಣೆ, ಸಂಪ್ರದಾಯ ಮತ್ತು ಜಾನಪದ ಕರಕುಶಲ ಕಲೆಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಮಹತ್ವದ ಕಾರ್ಯವಾಗಬೇಕು. ಅದನ್ನು ದಸರಾ ಗೊಂಬೆಗಳ ಪ್ರದರ್ಶನದ ಮೂಲಕ ಮುಕ್ತಾ ಅಶೋಕ ಹೆಗಡೆ ಮಾಡುತ್ತಿರುವುದು ಹೆಮ್ಮೆ ಪಡುವ ವಿಷಯವಾಗಿದೆ ಎಂದು ಇನ್ನರ್‌ವೀಲ್‌ ಕ್ಲಬ್ ಅಧ್ಯಕ್ಷೆ ಅನುಪಮಾ ಧಾರವಾಡ ಹೇಳಿದರು.

ಪಟ್ಟಣದ ಕರಕುಶಲ ಕಲಾವಿದೆ ಮುಕ್ತಾ ಅಶೋಕ ಹೆಗಡೆ ಅವರು ದಸರಾ ಹಬ್ಬದ ನಿಮಿತ್ತ ಭಾನುವಾರ ಹಮ್ಮಿಕೊಂಡ ದಸರಾ ಗೊಂಬೆಗಳ ಪ್ರದರ್ಶನ ಉದ್ಘಾಟಿಸಿ ಮಾತನಾಡಿ, ಆಧುನಿಕ ಈ ಕಾಲದಲ್ಲಿ ಆಚರಣೆಗಳು, ಸಂಸ್ಕೃತಿ, ಸಂಪ್ರದಾಯಗಳು ನಶಿಸಿ ಹೋಗುತ್ತಿವೆ. ಅವುಗಳನ್ನು ಉಳಿಸಿ ಬೆಳೆಸಬೇಕಾಗಿದೆ. ಗೊಂಬೆ ಪ್ರದರ್ಶನ ಒಂದು ವಿಶಿಷ್ಟ ಸಂಪ್ರದಾಯ. ರಾಜರ ಕಾಲದಿಂದಲೂ ಗೊಂಬೆಗಳನ್ನು ಕೂಡಿಸಿ ಆಚರಿಸುವ ಗೊಂಬೆ ಕೂಡಿಸುವ ಸಂಪ್ರದಾಯ, ಪ್ರದರ್ಶನ ಮುಂದಿನ ದಿನಗಳಲ್ಲಿ ಯುವ ಜನಾಂಗಕ್ಕೆ ಪರಿಚಯಿಸಬೇಕು ಎಂದರು.

ಲಾಯದಗುಂದಿ ಸರ್ಕಾರಿ ಶಾಲೆ ಶಿಕ್ಷಕಿ ವಿದ್ಯಾ ಕರಣಿ ಮುಖ್ಯ ಅತಿಥಿಗಳಾಗಿ ಮಾತನಾಡಿ, ಇಂದಿನ ದಿನಗಳಲ್ಲಿ ಭಾರತೀಯ ಕಲೆ, ಸಂಪ್ರದಾಯಗಳ ಅಭಿರುಚಿ ಮಕ್ಕಳಲ್ಲಿ ಕಡಿಮೆಯಾಗುತ್ತಿದೆ. ಟಿವಿ, ಮೊಬೈಲ್ ಬಳಕೆಯಿಂದ ನಮ್ಮ ಕಲೆ, ಸಂಪ್ರದಾಯಗಳು ಕೂಡ ನಶಿಸುತ್ತಿವೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.

ಇದೇ ವೇಳೆ ಎಲ್ಎಲ್ ಬಿ ಪದವಿ ಮುಗಿಸಿದ ರಾಠಿ ಮತ್ತು ಕಾವಡೆ ಶಾಲೆಯ ವಿದ್ಯಾರ್ಥಿನಿ ಮಧುಮತಿ ಉದ್ನೂರ ಅವರನ್ನು ಸನ್ಮಾನಿಸಲಾಯಿತು. ಕರಕುಶಲ ಕಲಾವಿದೆ ಮುಕ್ತಾ ಹೆಗಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಚೆನ್ನಮ್ಮ ಜವಳಿ, ಭಾಗ್ಯಾ ಉದ್ನೂರ, ಅಶೋಕ ಹೆಗಡೆ, ಮಲ್ಲಿಕಾರ್ಜುನ ರಾಜನಾಳ, ಗೀತಾ ಉದ್ನೂರ, ಸುಧಾ ಹುಟಗಿ, ಶಶಿಕಲಾ ತಿಪ್ಪಾ, ಕಾಳಮ್ಮ ಬಡಿಗೇರ, ಎಸ್.ಎ.ಮೋಮಿನ, ಬಸವರಾಜ ಜಿರಲಿ, ಶಬಾನಾ ಮಕಾನದಾರ ಸೇರಿದಂತೆ ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹೃದಯದ ಭಾಷೆಯೇ ನಿಜವಾದ ಸಾಹಿತ್ಯ: ಡಾ.ಶ್ರೀರಾಮ ಇಟ್ಟನ್ನವರ
ಮುಗಳುಗಡೆ ಸಂತ್ರಸ್ತರಿಗೆ 163 ಇ-ಖಾತಾ ಉತಾರ, ಹಕ್ಕುಪತ್ರ ವಿತರಣೆ