ಕನ್ನಡಪ್ರಭ ವಾರ್ತೆ ಕಾಗವಾಡ
ಶನಿವಾರ ತಡ ರಾತ್ರಿ ಕರ್ನಾಟಕದ ಖಿಳೇಗಾಂವ, ಅನಂತರಪುರ ಹಾಗೂ ಮಹಾರಾಷ್ಟ್ರದ ರಾಂಜನಿ ಗ್ರಾಮದಲ್ಲಿ ಮನೆ ಹಾಗೂ ಶ್ರೀಗಂಧ ಕಳ್ಳತನಕ್ಕೆ ಯತ್ನಿಸುತ್ತಿದ್ದ ಐವರು ಕಳ್ಳರನ್ನು ಗ್ರಾಮಸ್ಥರು ಹಿಡಿದು ಹಿಗ್ಗಾಮುಗ್ಗ ಥಳಿಸಿ ಕವಟೆಮಹಾಂಕಾಳ ಪೊಲೀಸರಿಗೆ ಒಪ್ಪಿಸಿದ್ದಾರೆ. ಮಹಾರಾಷ್ಟ್ರದ ಕವಟೆಮಹಾಂಕಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಸುಮಾರು ದಿನಗಳಿಂದ ಕರ್ನಾಟಕ ಗಡಿಯಲ್ಲಿ ಕಳ್ಳತನ ಪ್ರಖರಣಗಳು ಹೆಚ್ಚಾಗುತ್ತಿದ್ದು, ಕಳ್ಳರು ಪೊಲೀಸರಿಗೆ ಚೆಳ್ಳೆಹಣ್ಣು ತಿನ್ನಿಸಿ ಎಸ್ಕೇಪ್ ಆಗುತ್ತಿದ್ದಾರೆ. ಇದರಿಂದ ಗಡಿಗ್ರಾಮಗಳ ಜನರಲ್ಲಿ ಭಯ ಆವರಿಸಿದೆ.