ಜೋಡೆತ್ತಿನ ಕೃಷಿ ಉಳಿದರೆ ಮಾತ್ರ ಮಣ್ಣಿನ ಜೀವಂತಿಕೆ

KannadaprabhaNewsNetwork | Published : May 11, 2024 12:32 AM

ಸಾರಾಂಶ

ಪೂಜ್ಯ ಶ್ರೀ ಸಿದ್ದೇಶ್ವರ ಸ್ವಾಮೀಜಿ ಅವರು ಇಷ್ಟಪಡುವ ಕಾರ್ಯಕ್ರಮ ಇದಾಗಿದೆ. ಬಸವ ಜಯಂತಿಯ ದಿನದಂದು ಜೋಡೆತ್ತಿನ ಕುಟುಂಬದ ಮಹಿಳೆಯರಿಗೆ ಸನ್ಮಾನ ಮಾಡುತ್ತಿರುವುದು ಇತರೆ ಅನೇಕ ಸಂಸ್ಥೆಗಳಿಗೆ ಮಾದರಿಯಾಗಿದೆ. ಜೋಡೆತ್ತಿನ ಕೃಷಿ ಉಳಿದರೆ ಮಾತ್ರ ಮಣ್ಣಿನ ಜೀವಂತಿಕೆ ಹಾಗೂ ಪ್ರಕೃತಿಯ ಜೀವಂತಿಕೆ ಉಳಿಯುವುದು ಎಂದು ಜ್ಞಾನಯೋಗಾಶ್ರಮದ ಶ್ರೀ ಬಸವಲಿಂಗ ಸ್ವಾಮೀಜಿಗಳು ಹೇಳಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಪೂಜ್ಯ ಶ್ರೀ ಸಿದ್ದೇಶ್ವರ ಸ್ವಾಮೀಜಿ ಅವರು ಇಷ್ಟಪಡುವ ಕಾರ್ಯಕ್ರಮ ಇದಾಗಿದೆ. ಬಸವ ಜಯಂತಿಯ ದಿನದಂದು ಜೋಡೆತ್ತಿನ ಕುಟುಂಬದ ಮಹಿಳೆಯರಿಗೆ ಸನ್ಮಾನ ಮಾಡುತ್ತಿರುವುದು ಇತರೆ ಅನೇಕ ಸಂಸ್ಥೆಗಳಿಗೆ ಮಾದರಿಯಾಗಿದೆ. ಜೋಡೆತ್ತಿನ ಕೃಷಿ ಉಳಿದರೆ ಮಾತ್ರ ಮಣ್ಣಿನ ಜೀವಂತಿಕೆ ಹಾಗೂ ಪ್ರಕೃತಿಯ ಜೀವಂತಿಕೆ ಉಳಿಯುವುದು ಎಂದು ಜ್ಞಾನಯೋಗಾಶ್ರಮದ ಶ್ರೀ ಬಸವಲಿಂಗ ಸ್ವಾಮೀಜಿಗಳು ಹೇಳಿದರು.

ಶ್ರೀಸಿದ್ದೇಶ್ವರ ಅಕ್ಕನ ಬಳಗದಿಂದ ನಗರದ ಶ್ರೀ ಸಿದ್ದೇಶ್ವರ ಶಿವಾನುಭವ ಮಂಟಪದಲ್ಲಿ ಬಸವ ಜಯಂತಿ ಅಂಗವಾಗಿ ಆಯೋಜಿಸಲಾಗಿದ್ದ 108 ಜೋಡೆತ್ತಿನ ಮಹಿಳೆಯರಿಗೆ ಸನ್ಮಾನ ಹಾಗೂ ಉಡಿ ತುಂಬುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಶ್ರೀ ಸಿದ್ದೇಶ್ವರ ಸಂಸ್ಥೆಯ ಚೇರಮನ್‌ ಬಸಯ್ಯ ಹಿರೇಮಠ ಅವರು ಮಾತನಾಡಿ, ಬಸವ ಜಯಂತಿಯು ಕೃಷಿಕರ ಜಯಂತಿಯಾಗಿದೆ. ಹಾಗಾಗಿ ಬಸವ ಜಯಂತಿಯಂದು ಜೋಡೆತ್ತಿನ ಕೃಷಿ ಉಳಿಸುವ ಸಂದೇಶ ನೀಡುವ ಕಾರ್ಯಕ್ರಮ ಆಯೋಜನೆ‌ ಮಾಡಿರುವುದು ಅರ್ಥಪೂರ್ಣವಾಗಿದೆ. ಜೋಡೆತ್ತು ಹೊಂದಿದ ರೈತರು ಹಾಗೂ ಅವರ ಮಹತ್ವ ಅರಿತು ಅವರನ್ನು ಪ್ರೋತ್ಸಾಹಿಸಲು ಮುಂದೆ ಬರುವ ಜನರು ಮಾತ್ರ ನಿಜವಾದ ಶ್ರೀಮಂತರು ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.

ಇದೇ ಸಂದರ್ಭದಲ್ಲಿ ಶ್ರೀ ಸಿದ್ದೇಶ್ವರ ಸಂಸ್ಥೆಯ ಉಪಾಧ್ಯಕ್ಷ ಸಂಗನಗೌಡ ಸಜ್ಜನ ಅವರು ತಾಲೂಕಿನ ಕಗ್ಗೋಡದಲ್ಲಿರುವ ಗೋಶಾಲೆಯಿಂದ ರೈತರಿಗೆ ಉಚಿತವಾಗಿ ಹೋರಿಕರುಗಳನ್ನು ನೀಡಲಾಗುವುದು ಎಂದು ತಿಳಿಸಿದರು.

ಶ್ರೀ ಸಿದ್ದೇಶ್ವರ ಸ್ವಾಮೀಜಿ ಅವರ ಆಶಯದಂತೆ ಜೋಡೆತ್ತುಗಳ ಸಂತತಿ ಉಳಿಸಲು ಪ್ರಾರಂಭಿಸಿದ ನಂದಿ ಯಾತ್ರೆ ಅಭಿಯಾನ ನೇತೃತ್ವ ವಹಿಸಿದ ಜೋಡೆತ್ತಿನ ಕುಟುಂಬಗಳ ಮಹಳೆಯರನ್ನು ಸನ್ಮಾನಕ್ಕಾಗಿ ಅಯ್ಕೆ ಮಾಡಲಾಗಿತ್ತು. ಬಿಜ್ಜರಗಿ, ಕನಮಡಿ, ಬಾಬಾನಗರ, ಯತ್ನಾಳ, ವಡವಡಗಿ, ಹೆಗಡಿಹಾಳ, ಬಸವನ ಬಾಗೇವಾಡಿ, ಇಂಗಳೇಶ್ವರ, ನಂದ್ಯಾಳ, ಕನ್ನೊಳ್ಳಿ, ಭತಗುಣಕಿ, ಜಾಲಗೇರಿ, ಹಿಟ್ನಳ್ಳಿ ಹಾಗೂ ಇತರ ಗ್ರಾಮಗಳ ಜೋಡೆತ್ತಿನ ಮಹಿಳೆಯರು ಸನ್ಮಾನ ಸ್ವೀಕರಿಸಿದರು. ಎತ್ತುಗಳಿಗೆ ಬೇಕಾಗುವ ವಿವಿಧ ಸಾಮಗ್ರಿಗಳ ಕಿಟ್ ನ್ನು ವಿತರಿಸಲಾಯಿತು. ಅಕ್ಕನ ಬಳಗದ ಅಧ್ಯಕ್ಷೆ ಶೈಲಜಾ ಬಸನಗೌಡ ಪಾಟೀಲ ಯತ್ನಾಳ ಅವರ ನೇತೃತ್ವದಲ್ಲಿ ಸನ್ಮಾನ ಕಾರ್ಯಕ್ರಮ‌ ಜರುಗಿತು. ಕಾರ್ಯಕ್ರಮದಲ್ಲಿ ಅಕ್ಕನ ಬಳಗದ ಸದಸ್ಯರಾದ ರೇಣುಕಾ ಪಾಟೀಲ, ಅಂಬಿಕಾ ಕೊಪ್ಪದ, ಶಕುಂತಲಾ ಚಿಂತಾಮಣಿ, ಮಮತಾ‌ ಪರಗೊಂಡೆ, ಸಾವಿತ್ರಿ ಸಜ್ಜನ, ಸಾವಿತ್ರಿ‌ ಮಠ, ಅರವಿಂದ ಕವಲಗಿ, ವೀರಣ್ಣ ಸಜ್ಜನ, ಶ್ರೀಶೈಲ ಜಗಶೆಟ್ಟಿ, ಬಸವರಾಜ ಮಾಳಗೊಂಡ ಹಾಗೂ ಇತರರು ಭಾಗವಹಿಸಿದ್ದರು.

Share this article