ಗುರುಭವನದಲ್ಲಿ ಬೀರೂರು ಶೈಕ್ಷಣಿಕ ವಲಯದ ಶಿಕ್ಷಕರಿಗೆ ಜನಪದ ಸಂವಾದ, ಸಹಪಠ್ಯ ಚಟುವಟಿಕೆಗಳ ಸ್ಪರ್ಧೆ
ಯಾವ ಕೆಲಸವನ್ನು ಮಾಡಬೇಕಾದರೂ ಸಹ ಆಸಕ್ತಿ ಮತ್ತು ಶಿಸ್ತಿನಿಂದ ಮಾಡಬೇಕು. ಶಿಕ್ಷಕರೆಂದರೆ ವಿದ್ಯೆಗೆ ಜನ್ಮದಾತರು. ಶಿಕ್ಷಕರು ಮೂಲ ಶಿಕ್ಷಣದ ಗುರಿ ಮರೆಯಬಾರದು. ಪೋಷಕರ ಖಾಸಗಿ ಶಾಲೆಗಳ ವ್ಯಾಮೋಹದಿಂದ ಸರ್ಕಾರಿ ಶಾಲೆಗಳು ಮುಚ್ಚುತ್ತಿರುವುದು ವಿಪರ್ಯಾಸ. ಗ್ರಾಮೀಣ ಭಾಗದ ನನ್ನಂತವರನ್ನು ಸಹ ಕಲೆ ಮೂಲಕ ಗುರುತಿಸಿರುವುದು ಹೆಮ್ಮೆ ತಂದಿದೆ ಎಂದರು.ಪ್ರೌಢಶಾಲೆ ಶಿಕ್ಷಕರ ಸಂಘದ ಅಧ್ಯಕ್ಷ ಕೆ.ಸಿ.ಉಮಕಾಂತ್ ಮಾತನಾಡಿ, ಶಿಕ್ಷಕರು ಪಠ್ಯದ ವಿಷಯಗಳ ಜೊತೆಗೆ ಪತ್ಯೇತರ ಚಟುವಟಿಕೆಗಳನ್ನು ಬೋಧಿಸಬೇಕು. ಸಹಪಠ್ಯ ಚಟುವಟಿಕೆಗಳು ಕಲಿಕೆಗೆ ಪೂರಕ. ಪ್ರತಿಭಾವಂತ ಮಕ್ಕಳನ್ನು ಗುರ್ತಿಸಿ, ಅವರಿಗೆ ಮತ್ತಷ್ಟು ಕಲಿಕೆಗೆ ಅವಕಾಶ ನೀಡಬಹುದು ಎಂದರು.ಜಿಲ್ಲಾ ಪ್ರಾಥಮಿಕ ಶಿಕ್ಷಕರ ಸಂಘದ ಉಪಾಧ್ಯಕ್ಷ ಬಿ.ಜೆ.ಜಗದೀಶ್ ಮಾತನಾಡಿ, ಶಿಕ್ಷಕರು ಪಠ್ಯ ವಿಷಯದ ಜೊತೆಗೆ ಪತ್ಯೇತರ ಚಟುವಟಿಕೆಗಳನ್ನು ಕಲಿಯಬೇಕು. ಶಿಕ್ಷಕರನ್ನು ಉತ್ತೇಜಿಸಲು ಇಂತಹ ಚಟುವಟಿಕೆ ಸಹಕಾರಿ. ಶಿಕ್ಷಕರಲ್ಲಿನ ಪ್ರತಿಭೆಗಳನ್ನು ಹೊರ ಹೊಮ್ಮಿಸಲು ಶಾಲಾ ಶಿಕ್ಷಣ ಇಲಾಖೆ ಸಹ ಪಠ್ಯ ಚಟುವಟಿಕೆಗಳ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ. ಪ್ರತಿಯೊಬ್ಬರು ಭಾಗಿ ಯಾಗಬೇಕು ಎಂದು ಕರೆ ನೀಡಿದರು.ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಬಸಪ್ಪ ಮಾತನಾಡಿ, ಶಿಕ್ಷಕರಲ್ಲಿ ಪ್ರತಿಭಾನ್ವಿತ ಆಸಕ್ತಿ ಉಳ್ಳ ಶಿಕ್ಷಕರಿಗೆ ಈ ಸಹ ಪಠ್ಯೇತರ ಚಟುವಟಿಕೆಗಳ ಸ್ಪರ್ಧಾ ಕಾರ್ಯಕ್ರಮ ಉತ್ತಮ ವೇದಿಕೆಯಾಗಿದ್ದು, ಇದರ ಸದುಪಯೋಗಪಡೆಯಿರಿ ಎಂದರು.ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎನ್.ಬಿ.ಮಂಜುನಾಥ್ ಮಾತನಾಡಿ, ಜಾನಪದ ಸಾಹಿತ್ಯವನ್ನು ಜೀವಂತವಾಗಿ ಉಳಿಸಿ ಬೆಳೆಸುವ ಕಾರ್ಯ ಮಾಡುತ್ತಿರುವ ತಾಲೂಕಿನ ಮಗುಳಿ ಲಕ್ಷ್ಮಿದೇವಮ್ಮನವರ ಕಾರ್ಯ ಶ್ಲಾಘನೀಯ. ಶಿಕ್ಷಕರು ಮಕ್ಕಳಿಗೆ ಜಾನಪದ ಕಲೆ ಹೇಳಿಕೊಡಬೇಕೆಂದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಿಇಒ ಚೋಪ್ದಾರ್ ವಹಿಸಿದ್ದರು, ಬಿಆರ್ ಸಿ ಶೇಖರಪ್ಪ, ಮುರಳಿಧರ್, ಪ್ರಶಾಂತ್, ಮರುಳಸಿದ್ದಪ್ಪ ಮಾತನಾಡಿದರು.ವೇದಿಕೆಯಲ್ಲಿ ಮೋಹನ್ ರಾಜ್, ಆರ್.ಟಿ.ಅಶೋಕ್, ಸಿದ್ದಪ್ಪ, ಮಹಾದೇವ್, ಯಮುನ, ಗೀತಾ, ಮೈಲಾರಪ್ಪ, ಉಮಾ ಮಹೇಶ್, ಶಶಿಕುಮಾರ್, ಕುಸುಮಾ, ರವಿಕುಮಾರ್, ಜಯದೇವಪ್ಪ, ಕವಿತಾ ಆನಂದ್, ಗಂಗಪ್ಪ, ಸುರೇಶ್ ಗವಾಯಿ ಸೇರಿದಂತೆ ನೂರಾರು ಶಿಕ್ಷಕರು ಪಾಲ್ಗೊಂಡಿದ್ದರು.12 ಬೀರೂರು 1ಬೀರೂರಿನ ಗುರುಭವನದಲ್ಲಿ ಶುಕ್ರವಾರ ಬೀರೂರು ಶೈಕ್ಷಣಿಕ ವಲಯದ ಶಿಕ್ಷಕರ ಸಂಘ ಹಮ್ಮಿಕೊಂಡಿದ್ದ ಜನಪದ ಸಂವಾದ ಮತ್ತು ಸಹಪಠ್ಯ ಚಟುವಟಿಕೆಗಳ ಸ್ಪರ್ಧಾ ಕಾರ್ಯಕ್ರಮವನ್ನು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತೆ ಮುಗಳಿ ಲಕ್ಷ್ಮಿದೇವಮ್ಮ ಉದ್ಘಾಟಿಸಿದರು. ಬಿಇಒ ಚೋಪ್ದಾರ್, ಬಿ.ಜೆ.ಜಗದೀಶ್, ಉಮಾಕಾಂತ್, ಬಸಪ್ಪ, ಶೇಖರಪ್ಪ ಸೇರಿದಂತೆ ಮತ್ತಿತರಿದ್ದರು.