ಕನ್ನಡಪ್ರಭ ವಾರ್ತೆ ಚಾಮರಾಜನಗರ
ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರು ಬೌದ್ಧ ಧಮ್ಮ ಸ್ವೀಕರಿಸಿದ ಮೇಲೆ ಭಾರತದಲ್ಲಿ ಬೌದ್ಧ ಧಮ್ಮ ಕ್ರಾಂತಿ ಉಂಟು ಮಾಡಿದೆ. ರಾಜ್ಯದ ೧೨೭ ಬೌದ್ಧ ವಿಹಾರಗಳು ಹಾಗೂ ಅನೇಕ ಸಂಘಟನೆಗಳು ಬುದ್ಧ ಜಯಂತಿ ಆಚರಿಸುತ್ತಾರೆ. ವಿಶ್ವದ ಬೆಳಕು, ಪ್ರೀತಿ, ಕರುಣೆ, ಮೈತ್ರಿ ಭೋಧಿಸಿ ವಿಶ್ವಕ್ಕೆ ಮಾದರಿಯಾದವರು ಬುದ್ಧ. ದೇಶದ ಶೋಷಿತ ಸಮುದಾಯಗಳ ಮಾನಸಿಕ ವಿಮೋಚನೆಗೆ ಧಮ್ಮ ಮಾರ್ಗವಾಗಿದೆ ಎಂದರು. ಭಾರತೀಯ ಬೌದ್ಧ ಮಹಾಸಭಾದ ತಾಲೂಕು ಅಧ್ಯಕ್ಷ ಎಂ.ಸಿದ್ದರಾಜು ವೇದಿಕೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಮಂಜುನಾಥ ಪ್ರಸನ್ನ ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಷಾರ್ಚನೆ ಮಾಡಿದರು. ಭಾರತೀಯ ಬೌದ್ಧ ಮಹಾಸಭಾ ಜಿಲ್ಲಾ ಖಜಾಂಚಿ ಡಿ.ಸೋಮಣ್ಣ ಪ್ರಾಸ್ತಾವಿಕ ಭಾಷಣ ಮಾಡಿದರು.
ಕಾರ್ಯಕ್ರಮದಲ್ಲಿ ಮಹಾಸಭಾದ ಜಿಲ್ಲಾಧ್ಯಕ್ಷ ಆರ್.ಬಸವರಾಜು, ಸಂಸ್ಕಾರ ವಿಭಾಗದ ಉಪಾಧ್ಯಕ್ಷ ಪುಟ್ಟಸ್ವಾಮಿ, ಪ್ರವಾಸ ಮತ್ತು ಪ್ರಚಾರ ಸಮಿತಿ ಉಪಾಧ್ಯಕ್ಷ ಉಮೇಶ್ ಕುದರ್, ಮಹಿಳಾ ವಿಭಾಗದ ಉಪಾಧ್ಯಕ್ಷೆ ನಾಗಶಿಲ್ಪ, ಎಸ್‌ಸಿ, ಎಸ್‌ಟಿ ಸರ್ಕಾರಿ ನೌಕರರ ಸಮನ್ವಯ ಸಮಿತಿ ಅಧ್ಯಕ್ಷ ಎ.ಶಿವಣ್ಣ, ಸಿದ್ದಾರ್ಥ ಪರಿಶಿಷ್ಠ ಜಾತಿ ಸರ್ಕಾರಿ ನೌಕರರ ಕ್ಷೇಮಾಭಿವೃಧ್ದಿ ಸಂಘದ ಅಧ್ಯಕ್ಷ ಸಿದ್ದರಾಜು, ರಮಾಬಾಯಿ ಸಂಘ ಅಧ್ಯಕ್ಷ ಪುಷ್ಪಮರಿಸ್ವಾಮಿ, ಬುದ್ಧ ನಗರ ನಾಗರೀಕ ಹಿತರಕ್ಷಣಾ ಸಮಿತಿ ಅಧ್ಯಕ್ಷ ಮಹದೇವಯ್ಯ, ಕೆಇಬಿ ಸಹಾಯಕ ಇಂಜಿನಿಯರ್ ಸಿದ್ದರಾಜಪ್ಪ, ವಕೀಲರಾದ ನಾಗರಾಜು, ನಾಗಣ್ಣ, ಯಜಮಾನ ಬಸವಣ್ಣ ಹಾಗೂ ಬುದ್ಧನ ಉಪಾಸಕರು, ಅನುಯಾಯಿಗಳು ಭಾಗವಹಿಸಿದ್ದರು.