ಮೊಹರಂ ಪದಗಳು ಭಾವೈಕ್ಯತೆಯ ಪ್ರತೀಕ

KannadaprabhaNewsNetwork |  
Published : Mar 24, 2026, 02:45 AM IST
ಮೊಹರಂ ಪದಗಳು ಭಾವೈಕ್ಯತೆಯ ಪ್ರತೀಕವಾಗಿವೆ: ಹಾಸಿಂಪೀರ ವಾಲಿಕಾರ. | Kannada Prabha

ಸಾರಾಂಶ

ಮೊಹರಂ ಪದಗಳು ಭಾವೈಕ್ಯತೆಯ ಪ್ರತೀಕವಾಗಿವೆ. ಎಲ್ಲ ಧಮಿ೯ಯರು ಶ್ರದ್ಧೆ ಮತ್ತು ಭಕ್ತಿಯಿಂದ ಹಿಂದೂ ಮುಸಲ್ಮಾನರೆಂಬ ಭೇದವಿಲ್ಲದೇ ಈ ಹಬ್ಬವನ್ನು ಆಚರಿಸುತ್ತಾರೆ. ಇದು ಇಂದಿಗೂ ಕನಾ೯ಟಕದಾದ್ಯಂತ ಈ ಪರಂಪರೆ ನಡೆಯುತ್ತಿರುವುದು ಅತ್ಯಂತ ಶ್ಲಾಘನೀಯ ಎಂದು ವಿಜಯಪುರ ಕಸಾಪ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲಿಕಾರ ಹೇಳಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಮೊಹರಂ ಪದಗಳು ಭಾವೈಕ್ಯತೆಯ ಪ್ರತೀಕವಾಗಿವೆ. ಎಲ್ಲ ಧಮಿ೯ಯರು ಶ್ರದ್ಧೆ ಮತ್ತು ಭಕ್ತಿಯಿಂದ ಹಿಂದೂ ಮುಸಲ್ಮಾನರೆಂಬ ಭೇದವಿಲ್ಲದೇ ಈ ಹಬ್ಬವನ್ನು ಆಚರಿಸುತ್ತಾರೆ. ಇದು ಇಂದಿಗೂ ಕನಾ೯ಟಕದಾದ್ಯಂತ ಈ ಪರಂಪರೆ ನಡೆಯುತ್ತಿರುವುದು ಅತ್ಯಂತ ಶ್ಲಾಘನೀಯ ಎಂದು ವಿಜಯಪುರ ಕಸಾಪ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲಿಕಾರ ಹೇಳಿದರು.

ಕನಮಡಿ ಗ್ರಾಮದ ಗೂಳಿ ಬಸವೇಶ್ವರ ದೇವಾಲಯದ ಸಭಾಂಗಣದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ವಿಜಯಪುರ ತಾಲೂಕು ಘಟಕ ತಿಕೋಟಾ ಹಾಗೂ ಕನಮಡಿ ಗ್ರಾಮದ ಹಿರಿಯರು, ಯುವಕರ ಬಳಗದ ಆಶ್ರಯದಲ್ಲಿ ಅಸ್ಲಮ್ ಮುಲ್ಲಾ ರಚಿಸಿದ ಅಕಾಯ ಭಕ್ತಿಯ ಮೊಹರಂ ಪದಗಳು ಗ್ರಂಥ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಗ್ರಾಮದ ಎಲ್ಲ ಸಮುದಾಯದವರೂ ಒಟ್ಟಾಗಿ ಅಲಾವಿ ಕುಣಿತ, ಹುಲಿವೇಷ, ರಿಯಾಯತ್‌ ಪದಗಳ ಹೆಜ್ಜೆಯ ಕುಣಿತ, ಗುಂಪು ನೃತ್ಯಗಳಂತಹ ಅನೇಕ ಕಲೆಗಳನ್ನು ಸಾವಿರಾರು ವಷ೯ಗಳಿಂದ ಉಳಿಸಿಕೊಂಡು ಬಂದಿದ್ದಾರೆ. ಪ್ರವಾದಿ ಮಹಮ್ಮದ್‌ ಅವರ ಮೊಮ್ಮಗ ಹಜರತ್‌ ಇಮಾಮ್‌ ಹಸನ್‌-ಹುಸೇನ್‌ ಅವರ ತ್ಯಾಗ ಮತ್ತು ಕಬ೯ಲಾ ಯುದ್ಧದಲ್ಲಿನ ಹುತಾತ್ಮತೆಯನ್ನು ಸ್ಮರಿಸುವ ಶೋಕದ ದಿನವೇ ಮೊಹರಂ ಆಚರಣೆ. ಅಸ್ಲಮ್ ಮುಲ್ಲಾ ಅವರ ಈ ಗ್ರಂಥ ರಿವಾಯತ್‌, ಲಾವಣಿ, ಜಾನಪದ ಶೈಲಿಯ ಪದಗಳನ್ನು ಸಂಗ್ರಹಿಸಿದ್ದು, ಸಾಹಿತ್ಯ ಕ್ಷೇತ್ರಕ್ಕೆ ಅಪರೂಪದ ಗ್ರಂಥವಾಗಿದೆ ಎಂದರು. ಕಕಮರಿಯ ಸದ್ಗುರು ರಾಯಲಿಂಗೇಶ್ವರ ಸಂಸ್ಥಾನ ಮಠದ ಅಭಿನವ ಗುರುಲಿಂಗ ಜಂಗಮ ಮಹಾರಾಜರು ಮಾತನಾಡಿ, ಮೊಹರಂ ಇಸ್ಲಾಂ ಧಮ೯ದ ಮೊದಲನೇ ತಿಂಗಳು. ಮೊಹರಂ 10 ದಿನಗಳವರೆಗೆ ಆಚರಿಸುತ್ತಾರೆ. ಉತ್ತರ ಕರ್ನಾಟಕದ ವಿವಿಧ ಭಾಗಗಳಿಂದ ಮೌಖಿಕ ಮೊಹರಂ ಹಾಡುಗಳನ್ನು ಸಂಗ್ರಹಿಸಲಾಗಿದೆ. ಅಸ್ಲಮ್ ಮುಲ್ಲಾ ಕಕಮರಿ ಪ್ರೌಢಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದ್ದಾರೆ. ಅವರ ಪ್ರತಿಭೆಗೆ ಗ್ರಾಮದವರು ಪ್ರೋತ್ಸಾಹ ನೀಡಿದ್ದು, ಅತ್ಯಂತ ಶ್ಲಾಘನೀಯ ಕಾರ್ಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.ಹಿರಿಯ ಪ್ರವಚನಕಾರ ಬಾಬುರಾವ ಮಹಾರಾಜರು, ಹೊನವಾಡ ಮಾತನಾಡಿ, ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಈ ಕೃತಿ ತುಂಬ ಉಪಯುಕ್ತ ಕೊಡುಗೆ ನೀಡುತ್ತದೆ. ಬಹಳ ಶ್ರಮಪಟ್ಟು ಓದಿನೊಂದಿಗೆ ಜಾನಪದ ಸಾಹಿತ್ಯದ ಆಸಕ್ತಿಯಿಂದ ಈ ಗ್ರಂಥ ರಚಿಸಿರುವುದು ಅತ್ಯಂತ ಸಂತೋಷದ ವಿಚಾರ ಎಂದರು. ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಚನ್ನಯ್ಯ ಮಠಪತಿ ಆಶಯ ನುಡಿಗಳನ್ನಾಡಿದರು. ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ತಿಕೋಟಾ ಅಧ್ಯಕ್ಷ ಸಿದ್ರಾಮಯ್ಯ ಲಕ್ಕುಂಡಿಮಠ ಹಾಗೂ ಸಾಹಿತಿಗಳು ಮತ್ತು ಶಿಕ್ಷಕ ಎಂ.ಕೆ.ಶೇಖ ಮಾತನಾಡಿ, ಕನ್ನಡ ಪುಸ್ತಕ ಪ್ರಾಧಿಕಾರಕ್ಕೆ ಅಕಾಯ ಭಕ್ತಿಯ ಮೊಹರಂ ಪದಗಳು ಗ್ರಂಥ ಆಯ್ಕೆಯಾಗುವ ಗುಣಮಟ್ಟ ಹೊಂದಿದೆ ಎಂದರು.ಸಭೆಯ ಅಧ್ಯಕ್ಷತೆ ಪಿ.ಕೆ.ಪಿ.ಎಸ್‌ ಅಧ್ಯಕ್ಷ ಪ್ರಶಾಂತಗೌಡ ಪಾಟೀಲ ವಹಿಸಿ ಮಾತನಾಡಿದರು. ಕೃತಿಯ ಸಂಪಾದಕ ಅಸ್ಲಮ್ ಮುಲ್ಲಾ ಪ್ರಾಸ್ತಾವಿಕವಾಗಿ ಮಾತನಾಡಿದರು. ಲಾಲಸಾಬ್‌ ಮುಲ್ಲಾ, ವಿಜಯಕುಮಾರ ತುಂಗಳ, ಶಿವಪುತ್ರ ಅವಟಿ, ಸಿದ್ದು ಬಾಬಾನಗರ, ಶಂಕರಗೌಡ ಬಿರಾದಾರ,

ವೀರೇಶ ಸಿಂಧೂರ, ಸಿದ್ದು ಕುಂಬಾರ, ಪರಗೊಂಡ ಬಿರಾದಾರ, ಉಮರಲಿ ಮುಜಾವರ, ಕುತುಬುದ್ದೀನ್‌ ಮುಲ್ಲಾ, ಭೀಮಪ್ಪ ಕೋಳಿ, ಬಸಪ್ಪ ಅವಟಿ, ಚನ್ನಪ್ಪ ಬಾಳಿಗೇರಿ, ಬಾಬು ಕೋಳಿ, ಅಶೋಕ ಶಿರಾಡೋಣ, ಶಮನಸಾಬ ಮುಲ್ಲಾ, ಅಕ್ಬರ ಅತ್ತಾರ, ಬಸವರಾಜ ಚಡಚಣ, ಹುಸೇನಸಾಬ್‌ ಕೊಕಟನೂರ, ಅಬ್ದುಲರಜಾಕ್‌ ತಿಕೋಟಿ, ಪೀರಬಾಷಾ ಚೋಪದಾರ, ನೂರಅಹಮ್ಮದ್‌ ಮುಲ್ಲಾ, ಹಯ್ಯುಮ ಚೋಪದಾರ ಉಪಸ್ಥಿತರಿದ್ದರು.ಬಿ.ಕೆ.ನಾಟೀಕಾರ, ಮಾಂತೇಶ ಫಡಾಲೋಟಿ, ಶಿವಲಿಂಗ ಕಲ್ಯಾಣಿ, ಸಂತೋಷ ಕೋಳಿ ಮಂತಾದವರು ಕಾರ್ಯಕ್ರಮ ನಿರ್ವಹಿಸಿದರು. ವಿವಿಧ ಕಲಾತಂಡಗಳೊಂದಿಗೆ ಮೆರವಣಿಗೆಯ ಮೂಲಕ ಅತಿಥಿಗಳಿಗೆ ಸ್ವಾಗತಿಸಿಕೊಳ್ಳಲಾಯಿತು. ಕಲಾವಿದರು ಮೊಹರಂ ಪದಗಳನ್ನು ಹಾಡಿ ರಂಜಿಸಿದರು. ಗ್ರಾಮದ ಎಲ್ಲ ಸಮುದಾಯದವರೂ ಒಟ್ಟಾಗಿ ಅಲಾವಿ ಕುಣಿತ, ಹುಲಿವೇಷ, ರಿಯಾಯತ್‌ ಪದಗಳ ಹೆಜ್ಜೆಯ ಕುಣಿತ, ಗುಂಪು ನೃತ್ಯಗಳಂತಹ ಅನೇಕ ಕಲೆಗಳನ್ನು ಸಾವಿರಾರು ವಷ೯ಗಳಿಂದ ಉಳಿಸಿಕೊಂಡು ಬಂದಿದ್ದಾರೆ. ಪ್ರವಾದಿ ಮಹಮ್ಮದ್‌ ಅವರ ಮೊಮ್ಮಗ ಹಜರತ್‌ ಇಮಾಮ್‌ ಹಸನ್‌-ಹುಸೇನ್‌ ಅವರ ತ್ಯಾಗ ಮತ್ತು ಕಬ೯ಲಾ ಯುದ್ಧದಲ್ಲಿನ ಹುತಾತ್ಮತೆಯನ್ನು ಸ್ಮರಿಸುವ ಶೋಕದ ದಿನವೇ ಮೊಹರಂ ಆಚರಣೆ. ಅಸ್ಲಮ್ ಮುಲ್ಲಾ ಅವರ ಈ ಗ್ರಂಥ ರಿವಾಯತ್‌, ಲಾವಣಿ, ಜಾನಪದ ಶೈಲಿಯ ಪದಗಳನ್ನು ಸಂಗ್ರಹಿಸಿದ್ದು, ಸಾಹಿತ್ಯ ಕ್ಷೇತ್ರಕ್ಕೆ ಅಪರೂಪದ ಗ್ರಂಥವಾಗಿದೆ.

-ಹಾಸಿಂಪೀರ ವಾಲಿಕಾರ,

ಅಧ್ಯಕ್ಷರು, ಕಸಾಪ ವಿಜಯಪುರ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಆತಂಕವಿಲ್ಲದೆ ಪರೀಕ್ಷೆ ಬರೆಯಲು ಸೂಕ್ತ ವಾತಾವರಣ ಕಲ್ಪಿಸಿ
ಬಿಜೆಪಿ ಅಪಪ್ರಚಾರಕ್ಕೆ ಜನರು ಮಣೆ ಹಾಕಲ್ಲ: ಮುಖ್ಯಮಂತ್ರಿ ಸಿದ್ದರಾಮಯ್ಯ