ಕನ್ನಡಪ್ರಭ ವಾರ್ತೆ ಮಂಡ್ಯ
ನಗರದ ಕೆರೆಯಂಗಳದಲ್ಲಿರುವ ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯ ಯುನಿಟ್-೧ರ ಸಭಾಂಗಣದಲ್ಲಿ ಪ್ರತಿಭಾಂಜಲಿ ಸುಗಮ ಸಂಗೀತ ಅಕಾಡೆಮಿ ಆಯೋಜಿಸಿದ್ದ ಪ್ರತಿಭಾಂಜಲಿ-೨೫ ವರ್ಷಗಳ ಸಂಭ್ರಮ ಸಂಚಿಕೆ-೨ರ ಪ್ರಯುಕ್ತ ಹೊಸ ತಲೆಮಾರಿಗೆ ವಚನಧಾರೆ ಮತ್ತು ಬಸವಣ್ಣ ಜಯಂತಿ ಉದ್ಘಾಟಿಸಿ ಮಾತನಾಡಿದರು.
ವಚನಗಳಲ್ಲಿ ಜೀವನ ಮೌಲ್ಯಗಳ ಸಾರವಿದೆ. ವಿದ್ಯಾರ್ಥಿಗಳು ದಿನಕ್ಕೊಂದು ವಚನ ಓದಿ-ಅರ್ಥೈಸಿಕೊಂಡರೆ ಜ್ಞಾನ ಹೆಚ್ಚುತ್ತದೆ. ಶರಣರು ಸಾರಿದ ವಚನಧಾರೆಯು ಸರ್ವಕಾಲಕ್ಕೂ ಪ್ರಸ್ತುತ ಎಂದು ನುಡಿದರು.ಇಂದು ನಾವು ೨೧ನೇ ಶತಮಾನದಲ್ಲಿದ್ದೇವೆ. ೧೨ನೇ ಶತಮಾನದಲ್ಲಿ ಜಗಜ್ಯೋತಿ ಬಸವಣ್ಣ ಮತ್ತು ಶಿವಶರಣರು ನೀಡಿದ ವಚನಗಳು ಸಂವಿಧಾನದ ಕಾನೂನುಗಳಾಗಿವೆ. ೧೨ ಸೂತ್ರಗಳ ವಚನ ಕಾನೂನಿನಲ್ಲಿದೆ. ಕೊಲಬೇಡ, ಕಳ್ಳತನ ಮಾಡಬೇಡ ಹೀಗೆ ಜನಪಾಠವಾಗಿದೆ ಎಂದು ಎಚ್ಚರಿಸಿದರು.
ಮಾದರ ಚನ್ನಯ್ಯ, ಜೇಡರದಾಸೀಮಯ್ಯ, ಬಸವಣ್ಣ ಮುಂತಾದ ಶರಣು ಸಮಸಮಾಜ ನಿರ್ಮಾಣ ಮಾಡಲು ಹೊರಟರು, ೨೪ಸಾವಿರಕ್ಕೂ ಹೆಚ್ಚು ವಚನಗಳಿವೆ, ೨೪೦ಕ್ಕೂ ಹೆಚ್ಚು ವಚನಕಾರರು ಸಿಗುತ್ತಾರೆ. ವಿದ್ಯಾರ್ಥಿಗಳು ವಚನ ಓದುವುದಿಂದ ಸಂಸ್ಕಾರ ಹಾಗೂ ಜೀವನದ ಮೌಲ್ಯ ಅರಿಯಬಹುದು ಎಂದು ಸಲಹೆ ನೀಡಿದರು.
ಮನೆ ಮನೆಗೆ ವಚನಗಳು ಕಾರ್ಯಕ್ರಮದಿಂದ ವಚನಗಳನ್ನು ಮನೆ ಮನೆಗೆ ತಲುಪಪಿಸಿದ ಕೀರ್ತಿ ಆಕಾಡೆಮಿಗೆ ಸಲ್ಲುತ್ತದೆ, ೨೫ವರ್ಷ ಸಂದಿರುವ ಈ ವರ್ಷದಿಂದ ೨೫ ಕಾರ್ಯಗಳನ್ನು ಸಮಾಜಕ್ಕೆ ಸಮರ್ಪಿಸುತ್ತಿದ್ದೇವೆ ಎಂದರು.
ಕಾರ್ಯಕ್ರಮದಲ್ಲಿ ನಿಲಯಪಾಲಕರಾದ ಯೋಗಿತಾ, ನಿವೃತ್ತ ಶಿಕ್ಷಣ ಅಧಿಕಾರಿ ಪಾಪಯ್ಯ, ಕಸಾಪ ದರಸಗುಪ್ಪೆ ಧನಂಜಯ್, ಗಾಯಕರು ಹಾಜರಿದ್ದರು.