ರಾಜ್ಯದಲ್ಲಿ ಹದಿನೈದು ವರ್ಷಗಳ ಬಳಿಕ ನಕ್ಸಲ್ ಚಟುವಟಿಕೆ ಇಷ್ಟು ಬಹಿರಂಗವಾಗಿ ಕಾಣಿಸಿಕೊಳ್ಳುವುದಕ್ಕೆ ಕಾರಣವೇನು? ಅಥವಾ ಕಾರಣ ಯಾರು? ಎಂದು ಸುನಿಲ್ ಕುಮಾರ್ ಪ್ರಶ್ನಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಕಾರ್ಕಳ
ನಕ್ಸಲ್ ನಿಗ್ರಹ ಪಡೆಯ ಪೊಲೀಸರು ಕುಖ್ಯಾತ ನಕ್ಸಲ್ ವಿಕ್ರಂ ಗೌಡನನ್ನು ಎನ್‌ಕೌಂಟರ್‌ನಲ್ಲಿ ಹತ್ಯೆ ಮಾಡಿದ್ದಾರೆ. ಪೊಲೀಸರ ಕಾರ್ಯಶೈಲಿಯನ್ನು ನಾನು ಪ್ರಶಂಸಿಸುತ್ತೇನೆ. ಜೀವದ ಹಂಗು ತೊರೆದು ದೇಶ ವಿರೋಧಿ ಶಕ್ತಿಗಳನ್ನು ಯಾವುದೇ ಮುಲಾಜಿಗೆ ಒಳಗಾಗದೇ ಹತ್ತಿಕ್ಕಿದ ಪೊಲೀಸರ ಕಾರ್ಯ ವೈಖರಿ ಅಭಿನಂದನೀಯ ಎಂದು ಶಾಸಕ ಸುನಿಲ್ ಕುಮಾರ್ ತಿಳಿಸಿದ್ದಾರೆ.ಆದರೆ ಈ ಘಟನೆಯ ಬಳಿಕ ಕೆಲ ಪ್ರಶ್ನೆಗಳು ಉಳಿದಿವೆ. ರಾಜ್ಯದಲ್ಲಿ ಹದಿನೈದು ವರ್ಷಗಳ ಬಳಿಕ ನಕ್ಸಲ್ ಚಟುವಟಿಕೆ ಇಷ್ಟು ಬಹಿರಂಗವಾಗಿ ಕಾಣಿಸಿಕೊಳ್ಳುವುದಕ್ಕೆ ಕಾರಣವೇನು? ಅಥವಾ ಕಾರಣ ಯಾರು?ರಾಜ್ಯ ಸರ್ಕಾರ, ಅದರಲ್ಲೂ ವಿಶೇಷವಾಗಿ ಸಿಎಂ ಸಿದ್ದರಾಮಯ್ಯ ಅವರು ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ನಗರ ನಕ್ಸಲರ ಬಗ್ಗೆ ತೋರುತ್ತಿರುವ ವಿಶೇಷ ಪ್ರೀತಿ ಇದಕ್ಕೆ ಪ್ರೇರಣೆಯಲ್ಲವೇ?ಸಿದ್ದರಾಮಯ್ಯನವರೇ ದೇಶವಿರೋಧಿ ಹಾಗೂ ಬುಡಮೇಲು ಕೃತ್ಯಕ್ಕೆ ನೆರವಾಗುವವರಿಗೆ ಆದರ್ಶದ ನೆಪದಲ್ಲಿ ಬೆಂಬಲ ರಕ್ಷಣೆ ಬೇಡ. ಇದು ಪಶ್ಚಿಮಘಟ್ಟದ ತನ್ಮೂಲಕ ರಾಜ್ಯದ ಶಾಂತಿ- ನೆಮ್ಮದಿ ಕೆಡಿಸಲಿದೆ. ಹೀಗಾಗಿ ನಕ್ಸಲ್ ನಿಗ್ರಹ ಕಾರ್ಯಾಚರಣೆಯನ್ನು ಇನ್ನಷ್ಟು ಬಲಗೊಳಿಸಿ. ಎಎನ್ಎಫ್‌ಗೆ ಹೆಚ್ಚಿನ ಸಿಬ್ಬಂದಿ ನಿಯೋಜಿಸಿ. ನಕ್ಸಲ್ ಚಟುವಟಿಕೆ ಹತ್ತಿಕ್ಕಿ. ಜತೆಗೆ ಪಶ್ಚಿಮಘಟ್ಟ ಭಾಗದಲ್ಲಿ ಅಭಿವೃದ್ಧಿ ಕಾರ್ಯವನ್ನೂ ಚುರುಕುಗೊಳಿಸಿ ಎಂದು ಸುನಿಲ್ ಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.