ಬೆಳಗಾವಿ ಶಾಂತಾಯಿ ವೃದ್ಧಾಶ್ರಮದ ಕಾರ್ಯ ಶ್ಲಾಘನೀಯ: ಶಿವಾಜಿರಾವ್ ಶಿಂಧೆ

KannadaprabhaNewsNetwork |  
Published : Oct 01, 2024, 01:33 AM IST
ಸವದತ್ತಿಯ ಶ್ರೀ ರಾಮಲಿಂಗೇಶ್ವರ ದೇವಸ್ಥಾನದಲ್ಲಿ ಶ್ರೀ ರಾಮಲಿಂಗೇಶ್ವರ ಅರ್ಬನ್ ಸೌಹಾರ್ದ ಸಹಕಾರಿ ಸಂಘ ಮತ್ತು ಎಸ್.ಬಿ.ಸಿ ಬಾಳೋಜಿ ಫೌಂಡೇಶನ್ ಆಶ್ರಯದಲ್ಲಿ ಶಾಂತಾಯಿ ಆಶ್ರಮದ ಶಾಂತಾಬಾಯಿ ಪಾಟೀಲ ಹಾಗೂ ವಿಜಯ ಮೋರೆ ಅವರನ್ನು ಸನ್ಮಾನಿಸಿ ಗೌರವಸಲಾಯಿತು. | Kannada Prabha

ಸಾರಾಂಶ

ಸಮಾಜದಲ್ಲಿ ವಯಸ್ಸಾದ ನಂತರ ಅವರ ಪಾಲನೆ, ಪೋಷಣೆ ಮಾಡಲು ಯಾರೂ ಇಲ್ಲದವರನ್ನು ಗುರುತಿಸಿ ಹೊಸ ಬದುಕು ನೀಡಿ ಪೋಷಣೆ ಮಾಡುತ್ತಿರುವ ಬೆಳಗಾವಿಯ ಶಾಂತಾಯಿ ವೃದ್ಧಾಶ್ರಮದ ಕಾರ್ಯ ಶ್ಲಾಘನೀಯವಾಗಿದೆ ಎಂದು ಸವದತ್ತಿ ತಾಲೂಕು ಮರಾಠ ಸಮಾಜದ ಅಧ್ಯಕ್ಷ ಶಿವಾಜಿರಾವ್ ಶಿಂಧೆ ಹೇಳಿದರು.

ಕನ್ನಡಪ್ರಭ ವಾರ್ತೆ ಸವದತ್ತಿ

ಸಮಾಜದಲ್ಲಿ ವಯಸ್ಸಾದ ನಂತರ ಅವರ ಪಾಲನೆ, ಪೋಷಣೆ ಮಾಡಲು ಯಾರೂ ಇಲ್ಲದವರನ್ನು ಗುರುತಿಸಿ ಹೊಸ ಬದುಕು ನೀಡಿ ಪೋಷಣೆ ಮಾಡುತ್ತಿರುವ ಬೆಳಗಾವಿಯ ಶಾಂತಾಯಿ ವೃದ್ಧಾಶ್ರಮದ ಕಾರ್ಯ ಶ್ಲಾಘನೀಯವಾಗಿದೆ ಎಂದು ಸವದತ್ತಿ ತಾಲೂಕು ಮರಾಠ ಸಮಾಜದ ಅಧ್ಯಕ್ಷ ಶಿವಾಜಿರಾವ್ ಶಿಂಧೆ ಹೇಳಿದರು.

ಪಟ್ಟಣದ ಶ್ರೀ ರಾಮಲಿಂಗೇಶ್ವರ ದೇವಸ್ಥಾನದಲ್ಲಿ ಶ್ರೀ ರಾಮಲಿಂಗೇಶ್ವರ ಅರ್ಬನ್ ಸೌಹಾರ್ದ ಸಹಕಾರಿ ಸಂಘ ಮತ್ತು ಎಸ್.ಬಿ.ಸಿ ಬಾಳೋಜಿ ಫೌಂಡೇಶನ್ ಆಶ್ರಯದಲ್ಲಿ ಶಾಂತಾಯಿ ಆಶ್ರಮದ ಹಿರಿಯ ಜೀವಿಗಳಿಗೆ ಹಮ್ಮಿಕೊಂಡ ಸನ್ಮಾನ ಮತ್ತು ಮಹಾಪ್ರಸಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ರಾಜ್ಯ ಮತ್ತು ಹೊರರಾಜ್ಯದಲ್ಲಿ ಎಲ್ಲಿಯೂ ಜೀವನ ನಡೆಸಲು ಸಾಧ್ಯವೇ ಇಲ್ಲ ಎಂಬಂತಹ ಪರಿಸ್ಥಿತಿಯಲ್ಲಿದ್ದವರನ್ನು ಆಶ್ರಮಕ್ಕೆ ಕರೆತಂದು ಅವರಿಗೆ ನಿತ್ಯ ಉಪಚಾರ ಮಾಡಿ ಹೊಸ ಬದುಕು ನಿರ್ಮಿಸಿರುವುದು ಪುಣ್ಯದ ಕಾರ್ಯ ಎಂದರು.

ಶಾಂತಾಯಿ ಆಶ್ರಮದ ಕಾರ್ಯಾಧ್ಯಕ್ಷ ಹಾಗೂ ಬೆಳಗಾವಿ ಮಹಾನಗರ ಪಾಲಿಕೆ ಮಾಜಿ ಮಹಾಪೌರ ವಿಜಯ ಮೋರೆ ಮಾತನಾಡಿ, ಬೆಳಗಾವಿಯ ಶಾಂತಾಯಿ ಆಶ್ರಮದಲ್ಲಿ 25 ವರ್ಷಗಳಿಂದ 50ಕ್ಕೂ ಅಧಿಕ ಜನರನ್ನು ಪೋಷಣೆ ಮಾಡುತ್ತಿದ್ದು, ಇಲ್ಲಿಗೆ ಆಗಮಿಸಿರುವ ಎಲ್ಲರ ಸೇವೆ ಮಾಡುವುದು ಖುಷಿ ನೀಡುತ್ತಿದೆ ಎಂದ ಅವರು, ನಮ್ಮ ಆಶ್ರಮದ ಎಲ್ಲ ಅಜ್ಜ-ಅಜ್ಜಿಯರನ್ನು ಎಸ್.ಬಿ.ಸಿ ಬಾಳೋಜಿ ಫೌಂಡೇಶನ್‌ದವರು ಸವದತ್ತಿಗೆ ಕರೆಸಿ ಅವರಿಗೆ ಯಲ್ಲಮ್ಮ ತಾಯಿ ಮತ್ತು ರಾಮಲಿಂಗೇಶ್ವರ ದೇವರ ದರ್ಶನ ಮಾಡಿಸುವುದರ ಜೊತೆಗೆ ಉತ್ತಮ ಉಪಚಾರ ಮಾಡಿ ಮಹಾಪ್ರಸಾದ ಮಾಡಿಸಿರುವುದು ಖುಷಿ ತಂದಿದೆ ಎಂದರು.

ಶ್ರೀ ರಾಮಲಿಂಗೇಶ್ವರ ಅರ್ಬನ್ ಸೌಹಾರ್ದ ಸಂಘ ಹಾಗೂ ಎಸ್.ಬಿ.ಸಿ ಬಾಳೋಜಿ ಫೌಂಡೇಶನ್‌ ಅಧ್ಯಕ್ಷ ಪುಂಡಲೀಕ ಬಾಳೋಜಿ ಮಾತನಾಡಿದರು.

ಶಾಂತಾಯಿ ಆಶ್ರಮದ ಶಾಂತಾತಾಯಿ ಹಾಗೂ ವಿಜಯ ಮೋರೆಯ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಯಶೋಧಾ ಬಾಳೋಜಿ, ಮಲ್ಲೇಶ ರಾಜನಾಳ, ಶಿವಾನಂದ ತಾರೀಹಾಳ, ವಿ.ಜೆ. ಪವಾರ, ಅಂದುಸಿಂಗ್ ರಜಪೂತ, ಲಕ್ಷ್ಮಣ ಕಿಟದಾಳ, ಮಂಜುನಾಥ ಡಬಕೆ, ಅಣ್ಣಪ್ಪ ಪವಾರ, ರವಿ ಗಿರಿಜನ್ನವರ, ಸುರೇಶ ಬಾಳೋಜಿ, ಗೋಪಾಲ ಪಾಸಲಕರ, ರಾವ್‌ಸಾಹೇಬ ಜಾಮದಾರ, ಶ್ರೀನಿವಾಸ ಗದಗ, ರೇಖಾ ಬಾಳೋಜಿ, ವಿಠ್ಠಲ ಜಾಮದಾರ, ಪ್ರಶಾಂತ ಪವಾರ, ಸುಜಾತ ಬಾಳೋಜಿ, ಆನಂದ ಶಿಂಧೆ, ಸಂತೋಷ ಜಾಧವ ಹಾಗೂ ರಾಮಲಿಂಗೇಶ್ವರ ದೇವಸ್ಥಾನ ಅಭಿವೃದ್ಧಿ ಸಮಿತಿ ಹಾಗೂ ಅರ್ಬನ್ ಸೌಹಾರ್ದ ಸಂಘದ ಆಡಳಿತ ಮಂಡಳಿಯವರು ಇದ್ದರು.

PREV

Recommended Stories

ರೈತರ ಅನುಕೂಲಕ್ಕೆ ಶ್ರಮಿಸಿದ್ದ ದಿ.ಸಿದ್ದು ನ್ಯಾಮಗೌಡ
ಮುಧೋಳದಲ್ಲಿ ಮುಷ್ಕರಕ್ಕೆ ನೋ ರಿಸ್ಪಾನ್ಸ್‌