ಕನ್ನಡಪ್ರಭ ವಾರ್ತೆ ಚೇಳೂರು ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಹಭಾಗಿತ್ವದಲ್ಲಿ ಮಹತ್ವಾಕಾಂಕ್ಷಿ ಯೋಜನೆಯಾದ ಜಲಜೀವನ್ ಮಿಷನ್ ಯೋಜನೆ ನಿರೀಕ್ಷೆಯಂತೆ ರಾಶ್ಚೇರುವು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಜಾರಿಯಾಗುತ್ತಿಲ್ಲ ಎಂಬುದು ಇಲ್ಲಿಯ ಜನತೆಯ ಆರೋಪವಾಗಿದೆ.
ಇದರಿಂದಾಗಿ ವೃದ್ಧರು, ಕುರಿ ಮೇಕೆ, ದನಕರುಗಳನ್ನು, ದ್ವಿಚಕ್ರ ವಾಹನಗಳ ಸುಗಮ ಸಂಚಾರಕ್ಕೆ ಅನಾನುಕೂಲವಾಗಿದ್ದು, ಅಧಿಕಾರಿಗಳು ಕೂಡಲೆ ಕಾಮಗಾರಿಯನ್ನು ತ್ವರಿತವಾಗಿ ಮುಗಿಸುವಂತೆ ಸೂಚನೆ ನೀಡಬೇಕು. ಈ ಕುರಿತು ಸ್ಥಳೀಯ ಗ್ರಾಮ ಪಂಚಾಯಿತಿ ಸದಸ್ಯರಿಗೆ ವಿವರಿಸಿ ಪೈಪ್ ಹಾಕಲು ಮನವಿ ಮಾಡಿದ್ದರೂ ಯಾವುದೇ ಪ್ರಯೋಜನ ಆಗಲಿಲ್ಲ ಎಂದು ದೂರಿದ್ದಾರೆ.
ಇದರಿಂದ ಮನೆಗಳ ಮುಂದೆ ಪೈಪ್ ಅಳವಡಿಕೆಗೆ ತೆಗೆದಿರುವ ಕಾಲುವೆ ಗುಂಡಿಯನ್ನು ತಾವೇ ಮಣ್ಣಿನಿಂದ ಮುಚ್ಚಿ ಹಾಕಿದ್ದೆವೆ ಎನ್ನುತ್ತಾರೆ ಗ್ರಾಮದ ಮಹಿಳೆಯರು. ಗುತ್ತಿಗೆದಾರರ ನಿರ್ಲಕ್ಷ್ಯವೋ, ಅಧಿಕಾರಿಗಳ ಬೇಜವಾಬ್ದಾರಿಯಿಂದಲೋ ಮನೆಗಳ ಮುಂದೆ ಇರುವ ಕಾಲುವೆಯನ್ನು ಮುಚ್ಚಿದ್ದು ಈಗಲೂ ಮೊಣಕಾಲುದ್ಧ ಗುಂಡಿಗಳು ಬಿದ್ದಿವೆ ಇದರಿಂದ ನಳಗಳ ನೀರು ಮನೆಯವರು ಉಪಯೋಗಿಸುವ ನೀರು ಗುಂಡಿಗಳಲ್ಲಿ ನಿಂತು ಅದರಿಂದ ಸೊಳ್ಳೆಗಳ ಕಾಟ ವಿಪರೀತವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು,ಗ್ರಾಮಕ್ಕೆ ಭೇಟಿ ನೀಡಿ
ರಾಶ್ಚೇರುವು ಗ್ರಾಪಂ ವ್ಯಾಪ್ತಿಯಲ್ಲಿ ಜಲಜೀವನ್ ಮೀಷನ್ ಕಾಮಗಾರಿ ನಡೆಯುತ್ತಿರುವುದನ್ನು ತಮ್ಮ ಗಮಕ್ಕೆ ತಂದಿಲ್ಲ. ಈ ಕುರಿತು ಗ್ರಾಮಗಳಲ್ಲಿನ ಸಮಸ್ಯೆಗಳನ್ನು ಬಗೆಹರಿಸಲು ಅಧಿಕಾರಿಗಳಿಗೆ ಹಾಗೂ ಗುತ್ತಿಗೆದಾರರಿಗೆ ಮನವಿ ಮಾಡಿದರೂ ಸ್ಪಂದಿಸುತ್ತಿಲ್ಲ.- ರೆವತಾ ಶ್ರೀನಿವಾಸ್. ರಾಶ್ಚೇರುವು ಗ್ರಾಂ.ಪ.ಅದ್ಯಕ್ಷ್ಯ.