ಕನ್ನಡಪ್ರಭ ವಾರ್ತೆ ಇಳಕಲ್ಲ
ಇಳಕಲ್ಲ ನಗರದ ಸುವರ್ಣ ರಂಗಮಂದಿರದಲ್ಲಿ ನಾಟ್ಯ ರಾಣಿ ಕಲಾ ಸಂಘ ಇಳಕಲ್ಲ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಹ ಯೋಗದಲ್ಲಿ ೨೦೨೬ನೇ ಸಾಲಿನ ಗಿರಿಜನ ಉಪಯೋಜನೆ ಅಡಿಯಲ್ಲಿ ಸಾಂಸ್ಕೃತಿಕ ಸಂಭ್ರಮ, ನೃತ್ಯ, ರಂಗ ಗೀತೆ, ಜಾನಪದ ಗೀತೆ, ಜೋಗತಿ ನೃತ್ಯ, ಭಾವಗೀತೆ ಹಾಗೂ ನಾಟಕಗಳ ಪ್ರದರ್ಶನ ಹಾಗೂ ಸನ್ಮಾನ ಸಮಾರಂಭವನ್ನು ತಮಟೆ ಬಾರಿಸುವುದರ ಮೂಲಕ ಉದ್ಘಾಟಿಸಿ ಮಾತನಾಡಿ, ಅವನತಿಯಲ್ಲಿರುವ ರಂಗ ಕಲೆ ಮತ್ತು ನಾಟಕ ಕಲೆಯನ್ನು ಉಮಾ ಬಾರಿಗಿಡದ ಅವರು ಚಿಕ್ಕ ಮಕ್ಕಳಿಗೆ ಅಚ್ಚ ಕನ್ನಡದಲ್ಲಿ ಸಂಭಾಷಣೆ ಕಲಿಸಿ ಅವರಿಂದ ನಾಟಕ ಪ್ರದರ್ಶನ ಮಾಡುತ್ತಿರುವುದು ಬಹಳ ಸಾಹಸದ ಕೆಲಸ ಇವರ ಕಾರ್ಯಕ್ಕೆ ಅಭಿನಂದನೆ ಸಲ್ಲಿಸಲೇಬೇಕು ಎಂದು ತಿಳಿಸಿ, ನಾಟಕ ಕಲಾ ಸೇವೆ ಮಾಡುವ ನಿಮಗೆ ಸರಕಾರದಿಂದ ಸಿಗುವ ಎಲ್ಲ ಸೌಲಭ್ಯಗಳನ್ನು ಶಾಸಕರಿಗೆ ಹೇಳಿ ಮಾಡಿಸಿಕೊಡುವುದಾಗಿ ತಿಳಿಸಿದರು.
ಮುಖ್ಯ ಅತಿಥಿಗಳಾದ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಸಂಗಣ್ಣ ಗದ್ದಿ ಮಾತನಾಡಿ, ಅಳಿಸಿ ಹೋಗುವ ರಂಗ ಕಲೆಯನ್ನು ಇಳಕಲ್ಲಿನಲ್ಲಿ ಸ್ನೇಹರಂಗ, ಉಮಾ ಬಾರಿಗಿಡದ, ಮಹಾಂತೇಶ ಗಜೇಂದ್ರಗಡ ಅವರು ಉಳಿಸಿ ಬೆಳೆಸಲು ಪ್ರಯತ್ನಸುತ್ತಿದ್ದಾರೆ. ಇಳಕಲ್ಲ ನಗರದ ಬಾಲಕರಿಗೆ ರಂಗ ಕಲೆಯ ತರಬೇತಿ ನೀಡಿ ಅವರಿಂದ ನಾಟಕ ಪ್ರದರ್ಶನ ಮಾಡಿಸುತ್ತಿರುವುದು ಹೆಮ್ಮೆಯ ಸಂಗತಿ ಎಂದರು.ಸ್ನೇಹರಂಗ ಸಂಸ್ತೆಯ ಅಧ್ಯಕ್ಷ ಬಸವರಾಜ ಮಠದ, ಪತ್ರಕರ್ತ ಮಹಾಂತೇಶ ಗೋರಜನಾಳ, ಸುಲೇಮಾನ ಚೋಪದಾರ ಇತರರು ಉಪಸ್ತಿತರಿದ್ದರು. ಇದೇ ವೇಳೆ ವೇದಿಕೆ ಮೇಲಿನ ಗಣ್ಯರು ಹಾಗೂ ಸಂತೋಷ ಚಿತ್ರಗಾರ, ಮಹಾಂತೇಶ, ಕವಿತಾ, ಮತ್ತು ಬಸಯ್ಯ ಜವಳಗೇರಿ ಅವರನ್ನು ಸತ್ಕರಿಸಲಾಯಿತು. ಕಾರತಿಕ ಕೊಪ್ಪರದ ಸ್ವಾಗತಿಸಿದರು. ಜ್ಯೋತಿ ಚಲವಾದಿ, ಕಸ್ತೂರಿ ಮೇರ್ಹವಾಡೆ ಪ್ರಾರ್ಥಿಸಿದರು. ನಾಟ್ಯರಾಣಿ ಕಲಾ ಸಂಘದ ಅಧ್ಯಕ್ಷೆ ಉಮಾರಾಣಿ ಬಾರಿಗಿಡದ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿನಾಯಕ ದೂಪದ ನಿರೂಪಿಸಿದರು. ಉಮೇಶ ಟೆಂಕಸಾಲಿ ವಂದಿಸಿದರು. ಹಿರಿಯ ರಂಗ ಕರ್ಮಿ ಮಹಾಂತೇಶ ಗಜೇಂದ್ರಗಡ ಹಾಗು ಉಮಾ ಬಾರಿಗಿಡದ ನಿರ್ದೇಶನದಲ್ಲಿ ಮಕ್ಕಳಿಂದ ನಾಟಕ ಪ್ರದರ್ಶನ ನಡೆಯಿತು.