ಶಿವಾ ಫೌಂಡೇಶನ್‌ ಸಂಸ್ಥೆಯವರ ಕಾರ್ಯ ಶ್ಲಾಘನೀಯ

KannadaprabhaNewsNetwork |  
Published : Jun 27, 2025, 12:48 AM IST
ಮೂಡಲಗಿ | Kannada Prabha

ಸಾರಾಂಶ

ಶೈಕ್ಷಣಿಕ ಕಾರ್ಯಕ್ರಮಗಳಿಗೆ ಹಾಗೂ ನಿರ್ಗತಿಕ ಅನಾಥ ಮಕ್ಕಳಿಗೆ ಕಲಿಕೋಪಕರಣಗಳನ್ನು ಒದಗಿಸುವ ಶಿವಾ ಫೌಂಡೇಶನ್‌ ಸಂಸ್ಥೆಯವರ ಕಾರ್ಯ ಶ್ಲಾಘನೀಯ ಎಂದು ತುಕ್ಕಾನಟ್ಟಿ ಗ್ರಾಮ ಪಂಚಾಯತಿ ಅಧ್ಯಕ್ಷೆ ಗಾಯತ್ರಿ ಬಾಗೇವಾಡಿ ಹೇಳಿದರು.

ಕನ್ನಡಪ್ರಭ ವಾರ್ತೆ ಮೂಡಲಗಿ

ಶೈಕ್ಷಣಿಕ ಕಾರ್ಯಕ್ರಮಗಳಿಗೆ ಹಾಗೂ ನಿರ್ಗತಿಕ ಅನಾಥ ಮಕ್ಕಳಿಗೆ ಕಲಿಕೋಪಕರಣಗಳನ್ನು ಒದಗಿಸುವ ಶಿವಾ ಫೌಂಡೇಶನ್‌ ಸಂಸ್ಥೆಯವರ ಕಾರ್ಯ ಶ್ಲಾಘನೀಯ ಎಂದು ತುಕ್ಕಾನಟ್ಟಿ ಗ್ರಾಮ ಪಂಚಾಯತಿ ಅಧ್ಯಕ್ಷೆ ಗಾಯತ್ರಿ ಬಾಗೇವಾಡಿ ಹೇಳಿದರು.

ತಾಲೂಕಿನ ತುಕ್ಕಾನಟ್ಟಿಯ ಸರ್ಕಾರಿ ಮಾದರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಮ್ಯಾಜಿಕ್ ಬಾಕ್ಸ್‌ ಕಾರ್ಯಕ್ರಮದಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳ ಹಾಜರಾತಿ ಹೆಚ್ಚಿಸುವ ಸಂಕಲ್ಪದೊಂದಿಗೆ ಜಾರಿಯಲ್ಲಿರುವ ಈ ಮ್ಯಾಜಿಕ್ ಬಾಕ್ಸ್ ಕಾರ್ಯಕ್ಕೆ ಒಂದು ವರ್ಷಕ್ಕೆ ಬೇಕಾಗುವಷ್ಟು ಕಲಿಕೋಪಕರಣಗಳನ್ನು ಪೂರೈಸಿದ ಗೋಕಾಕ ಶಿವ ಫೌಂಡೇಶನ್‌ ಸಂಸ್ಥೆಯ ಕಾರ್ಯ ಅನುಕರಣೀಯ ಎಂದರು. ಗೋಕಾಕ ಶಿವಾ ಫೌಂಡೇಶನ್‌ ಸಂಸ್ಥೆಯ ಕಾರ್ಯನಿವಾಹಕ ಅಧಿಕಾರಿ ಶಾನೂರ ಹಿರೇಹೊಳಿ ಮಾತನಾಡಿ, ನಮ್ಮ ಶಿವಾ ಫೌಂಡೇಶನ್‌ ಸಂಸ್ಥೆಯಲ್ಲಿ ಸುಮಾರು 45 ಮಕ್ಕಳು ವಾಸಿಸುತ್ತಿದ್ದು, ಅವರ ಕಲಿಕೆಗಾಗಿ ಹಾಗೂ ಬದುಕಿಗೆ ಬೇಕಾಗುವ ವಸ್ತುಗಳನ್ನು ಸಲಕರಣೆಗಳನ್ನು ಸಮಾಜದ ವಿವಿಧ ಕ್ಷೇತ್ರಗಳಲ್ಲಿಯ ದಾನಿಗಳು ಸಹಾಯ ಮಾಡುತ್ತಿದ್ದು, ಅವುಗಳಲ್ಲಿಯೇ ನಮ್ಮ ಸಂಸ್ಥೆಯವರು ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವ ಬಡ ಹಾಗೂ ಅನಾಥ ಮಕ್ಕಳಿಗೆ ಸಹಾಯ ಮಾಡುತ್ತಿದ್ದೇವೆ. ಈ ಫಲಾನುಭವಿ ವಿದ್ಯಾರ್ಥಿಗಳು ಇದರ ಉಪಯೋಗವನ್ನು ಪಡೆದು ಕಲಿಕೆಯಲ್ಲಿ ಉತ್ತಮ ಪ್ರಗತಿ ಸಾಧಿಸಬೇಕು. ಈಗಾಗಲೇ ಈ ಶಾಲೆಗೆ 620 ನೋಟಬುಕ್ 500 ಪೆನ್‌ಗಳನ್ನು ನೀಡಲಾಗಿದೆ ಎಂದು ತಿಳಿಸಿದರು.ಶಾಲೆಯ ಮುಖ್ಯ ಶಿಕ್ಷಕ ಎ.ವಿ.ಗಿರೆಣ್ಣವರ ಮಾತನಾಡಿ, ಮ್ಯಾಜಿಕ್ ಬಾಕ್ಸ್‌ ಎಂಬ ವಿನೂತನ ಕಾರ್ಯಕ್ರಮವನ್ನು ಕಳೆದ 7-8 ವರ್ಷಗಳಿಂದ ಜಾರಿಯಲ್ಲಿ ತಂದಿದ್ದು, ಪ್ರತಿದಿನ ಪ್ರಾರ್ಥನಾ ವೇಳೆ ಇಬ್ಬರು ಅದೃಷ್ಟಶಾಲಿಗಳಿಗೆ ಬಹುಮಾನ ನೀಡಲಾಗುತ್ತದೆ. ಇದು ಪ್ರಾರ್ಥನಾ ಸಮಯದಲ್ಲಿ ಹಾಜರಾತಿ ಹೆಚ್ಚಿಸುವ ನಿಟ್ಟಿನಲ್ಲಿ ಒಂದು ಪ್ರಯತ್ನ ಅದಕ್ಕೆ ಒಂದು ವರ್ಷಕ್ಕೆ ಆಗುವಷ್ಟು ಬಹುಮಾನಗಳನ್ನು ಮತ್ತು ಸುಮಾರು 800 ಮಕ್ಕಳಲ್ಲಿ 75 ಬಡ ವಿದ್ಯಾರ್ಥಿಗಳಿಗೆ ನೋಟಬುಕ್ ಮತ್ತು ಪೆನ್‌ಗಳನ್ನು ಶಿವಾ ಫೌಂಡೇಶನ್ ಸಂಸ್ಥೆಯವರು ನೀಡಿದ್ದಾರೆ. ಅಲ್ಲದೇ ನಮ್ಮ ಶಾಲೆಯ ಗುರುಮಾತೆ ವಿಮಲಾಕ್ಷಿ ತೋರಗಲ್ ಅವರು ಕೂಡ ವಿದ್ಯಾರ್ಥಿಗಳಿಗೆ ಕಲಿಕಾ ಸಾಮಗ್ರಿಗಳನ್ನು ನೀಡಿದ್ದಾರೆ ಎಂದರು.ಕಾರ್ಯಕ್ರಮದಲ್ಲಿ ಶಿಕ್ಷಕರಾದ ಮಹಾದೇವ ಗೋಮಾಡಿ, ವಿಮಲಾಕ್ಷಿ ತೋರಗಲ, ಲಕ್ಷ್ಮೀ ಹೆಬ್ಬಾಳ, ಪುಷ್ಪಾ ಭರಮದೆ, ರೂಪಾ ಹೂಲಿಕಟ್ಟಿ, ಬಸವರಾಜ ನಾಯ್ಕ, ಪ್ರಿಯಾಂಕಾ ಡಿ.ಕೆ, ಸೋಮಶೆಖರ ವೈ.ಆರ್, ಚನ್ನಬಸಪ್ಪ ಸೀರಿ, ಸುಜಾತಾ ಕೋಳಿ, ಭಾಗೀರಥಿ ಕಳ್ಳಿಗುದ್ದಿ, ಎಂ.ಎಲ್.ಖಾನಗೌಡ್ರ, ವಾಸಂತಿ ಬೋರಗುಂಡಿ, ಯಮುನಾ ಹಮ್ಮನವರ, ಶಿವಲೀಲಾ ಹಣಮನ್ನವರ, ಖಾತೂನ್ ನದಾಫ, ಹೊಳೆಪ್ಪ ಗದಾಡಿ, ಅನ್ನಪೂರ್ಣಾ ಹುಲಕುಂದ, ಪವಿತ್ರಾ ಬಡಿಗೇರ ಪಾಲ್ಗೊಂಡಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಹಕಾರದಿಂದ ಸಮೃದ್ಧಿ - ಸಹಕಾರ ಭಾರತಿಯಿಂದ ಸಹಕಾರ ಕ್ಷೇತ್ರದ ಬಲವರ್ಧನೆ
ದ್ವೇಷಭಾಷಣ ಬಿಲ್‌ಗೆ ಸಹಿ ಬೇಡ : ಗೌರ್ನರ್‌ಗೆ ಬಿಜೆಪಿ