ವಿಶ್ವದ ವೃದ್ಧ ನಾಯಕರು ಮುಂದಿನ ಜನಾಂಗವನ್ನು ಅತಂತ್ರಗೊಳಿಸುತ್ತಿದ್ದಾರೆ

KannadaprabhaNewsNetwork |  
Published : Apr 03, 2026, 01:15 AM IST
4 | Kannada Prabha

ಸಾರಾಂಶ

ಯುದ್ಧ, ಹತ್ಯೆ ಅವಿವೇಕಿಗಳಿಗೆ ಶೌರ್ಯವಾಗಿದೆ. ಸಾಮಾಜಿಕ ಬದುಕು ಬೀದಿಗೆ ಬರುವಂತಿದ್ದು, ಮಾನವೀಯತೆ ಸತ್ತಂತಿದೆ. ಪ್ರಪಂಚದ ಎಲ್ಲ ದೇಶಗಳಲ್ಲಿರುವ ಕಿಡಿಗೇಡಿತನ ವೃದ್ಧ ನಾಯಕರಿಂದಲೇ ಅಶಾಂತಿ ನಿರ್ಮಾಣವಾಗಿದೆ. ಎಲ್ಲವನ್ನೂ ಸರ್ವ ನಾಶಗೊಳಿಸಿ, ಪ್ರಪಂಚದ ವಿನಾಶಕ್ಕೆ ಮುಂದಾಗುತಿದ್ದಾರೆ.

ಕನ್ನಡಪ್ರಭ ವಾರ್ತೆ ಮೈಸೂರು

ಯುದ್ಧ, ಹತ್ಯೆ ಮೂಲಕ ವಿಶ್ವದ ಮುಂದಿನ ಜನಾಂಗವನ್ನು ಅತಂತ್ರಗೊಳಿಸುವ ಹುನ್ನಾರದಲ್ಲಿ ಅನೇಕ ವೃದ್ಧ ನಾಯಕರು ಇದ್ದಾರೆ ಎಂದು ಲೇಖಕಿ ಎಚ್‌.ಎಸ್‌.ಅನುಪಮಾ ಕಳವಳ ವ್ಯಕ್ತಪಡಿಸಿದರು.

ನಗರದ ಮಹಾರಾಜ ಕಾಲೇಜು ಜೂನಿಯರ್ ಬಿ.ಎ ಸಭಾಂಗಣದಲ್ಲಿ ಅರಿವಿನ ಚಾವಡಿ, ಮೈಸೂರು ವಿಶ್ವವಿದ್ಯಾನಿಲಯ ಸಂಶೋಧಕರ ಸಂಘ, ದಲಿತ ವಿದ್ಯಾರ್ಥಿ ಒಕ್ಕೂಟ, ಉಳುಮೆ ಪ್ರತಿಷ್ಠಾನ ವತಿಯಿಂದ ಹಮ್ಮಿಕೊಂಡಿದ್ದ ಯುವಜನತೆ ನಮ್ಮ ನಾಳೆಯ ಭರವಸೆ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿ, ಯುದ್ಧ, ಹತ್ಯೆ ಅವಿವೇಕಿಗಳಿಗೆ ಶೌರ್ಯವಾಗಿದೆ. ಸಾಮಾಜಿಕ ಬದುಕು ಬೀದಿಗೆ ಬರುವಂತಿದ್ದು, ಮಾನವೀಯತೆ ಸತ್ತಂತಿದೆ. ಪ್ರಪಂಚದ ಎಲ್ಲ ದೇಶಗಳಲ್ಲಿರುವ ಕಿಡಿಗೇಡಿತನ ವೃದ್ಧ ನಾಯಕರಿಂದಲೇ ಅಶಾಂತಿ ನಿರ್ಮಾಣವಾಗಿದೆ. ಎಲ್ಲವನ್ನೂ ಸರ್ವ ನಾಶಗೊಳಿಸಿ, ಪ್ರಪಂಚದ ವಿನಾಶಕ್ಕೆ ಮುಂದಾಗುತಿದ್ದಾರೆ ಎಂದರು.

ಅಕ್ಕ ಮಹಾದೇವಿ, ಬುದ್ಧ, ಬಸವ, ಅಶೋಕ, ಸಾವಿತ್ರಿ ಬಾಯಿಫುಲೆ, ವಿವೇಕನಾಂದ, ಭಗತ್‌ ಸಿಂಗ್, ಗಾಂಧಿ, ಡಾ.ಬಿ.ಆರ್. ಅಂಬೇಡ್ಕರ್ ಇವರೆಲ್ಲ ಯುವಕರಿದ್ದಾಗಲೇ ಸಮಾಜದಲ್ಲಿ ಹೊಸದೊಂದು ಕ್ರಾಂತಿಗೆ ಬುನಾದಿ ಹಾಕಿದರು. ಜಗತ್ತಿನಲ್ಲಿ ಉದಾತ್ತಾ ಚಿಂತನೆ, ಲೋಕದೃಷ್ಟಿ ಆಲೋಚನೆ ಹುಟ್ಟಿದ್ದು, ಪ್ರಶ್ನಿಸುವ ಗುಣ ಹುಟ್ಟು ಹಾಕಿದ್ದು ಕೂಡ ಯುವ ಮನಸ್ಸುಗಳಲ್ಲಿ ಎಂದರು.

ಯುವ ಜನಾಂಗವು ಸರಿದಾರಿ ತೋರುವ ಹರಿಕಾರರಾಗಬೇಕು. ಆದರೆ ದೇಶ ರೂಪಿಸುವ ಮಕ್ಕಳನ್ನು ಅಸಂಘಟಿತ ಕೆಲಸಕ್ಕೆ ದೂಡಲಾಗುತ್ತಿದೆ. ಇದು ಪ್ರಜಾಪ್ರಭುತ್ವದ ಲೋಪ. ಹೊಸ ಯೋಚನೆ, ಚಿಂತನೆಗಳಿಗೆ ಅವಕಾಶವಿಲ್ಲದ ಸಮಾಜ, ಪ್ರಭುದ್ಧವಾಗಲೂ ಸಾಧ್ಯವಿಲ್ಲ ಎಂದು ಅವರು ಅಭಿಪ್ರಾಯಪಟ್ಟರು.

ಉತ್ತಮ ಸಮಾಜ ನಿರ್ಮಾಣದ ಭರವಸೆಯು ಯುವಕರ ದೃಷ್ಟಿಕೋನದಲ್ಲಿದೆ. ದೀರ್ಘಕಾಲಿನ ಮತ್ತು ಭವಿಷ್ಯದ ಚಿಂತನೆಯ ಗುರಿ ಅವರಿಗಿದೆ. ಇದರಿಂದಲೇ ಯುವಕರ ಚಿಂತೆನೆ ವಿಭಿನ್ನವಾದದ್ದು. ಹೊಸತನನ್ನು ಯೋಚಿಸು, ಪ್ರಶ್ನಿಸುವ ಗುಣ, ಅಂತರಾಳದಲ್ಲಿ ವಿಶಿಷ್ಟ ಕನಸನ್ನು ಬಿತ್ತಬಲ್ಲದು. ಇಂತಹ ಗುಣಗಳು ಸಮಾಜಕ್ಕೆ ಅಗತ್ಯವಾಗಿದೆ. ಇವತ್ತಿನ ತಂತ್ರಜ್ಞಾನದ ಬಳಕೆಯೂ, ವಿಭಿನ್ನ ಚಿಂತನೆಗೆ ಸಹಕಾರಿಯಾಗಲಿದೆ. ಲೋಕ ಹಿತ ಕಾಪಾಡಿ, ಜಗತ್ತನ್ನು ಬದಲಾವಣೆ ಕಡೆಗೆ ಕೊಂಡೊಯ್ಯಬೇಕು. ಆ ದಕ್ಷತೆ ಯುವಕರಲ್ಲಿದೆ ಎಂದರು.

ಇವತ್ತಿನ ಯುವ ಸಮೂಹವನ್ನು ದಾರಿತಪ್ಪಿಸುವ ಕೆಲಸ ಮಾಡಲಾಗುತ್ತಿದೆ. ಸುಳ್ಳು ಇತಿಹಾಸಗಳು ಬಿತ್ತರವಾಗುತ್ತಿವೆ. ಆಧ್ಯಾತ್ಮತೆಯ ಕಡೆಗೆ ಸೆಳೆಯುವ ಹುನ್ನಾರ ನಡೆಯುತ್ತಿದೆ. ಇಂತಹ ಬೂಸಗಳನ್ನು ತೊರೆದು ಹೊಸ ಚಿಂತನೆಗೆ ಒಡ್ಡಿಕೊಳ್ಳುವುದು ಅನಿವಾರ್ಯ. ಇವತ್ತು ಪ್ರಕೃತಿ ಅನ್ಯಾಯಕ್ಕೆ ಒಳಗಾಗಿದೆ, ಗಾಳಿ, ನೆಲ, ಜಲ ವಿಷಮಯವಾಗುತ್ತಿದೆ. ಶಸ್ತ್ರಸ್ತ್ರಾಗಳು ಆರ್ಭಟಿಸುತ್ತಿವೆ. ಸ್ಪೋಟಕಗಳು ವಿನಾಶಕ್ಕೆ ಹಾತೊರೆಯುತ್ತಿವೆ ಎಂದು ಅವರು ಕಿಡಿಕಾರಿದರು.

ಸಮಾಜವನ್ನು ದಿಕ್ಕುತಪ್ಪಿಸುವಲ್ಲಿ ನಾಯಕರು ನಮ್ಮ ಮುಂದಿದ್ದಾರೆ. ಇವೆಲ್ಲವನ್ನೂ ದಾಟಿದಾಗ ಯುವಕರು ಬುದ್ಧ, ಅಂಬೇಡ್ಕರ್, ಬಸವ, ಗಾಂಧಿ ಆಗುವ ಸಾಧ್ಯತೆ ಇದೆ. ಪ್ರತಿ ಹೊಸ ತಲೆಮಾರು ದೇಶ ಕಟ್ಟುವಿಕೆಗೆ ಭರವಸೆಯಾಬೇಕು. ಭಾರತದಲ್ಲಿ ಶೇ. 50ರಷ್ಟು ಯುವಕರಿದ್ದಾರೆ ಎಂದರು.

ಮಹಾರಾಜ ಕಾಲೇಜು ಪ್ರಾಂಶುಪಾಲ ಪ್ರೊ.ವಿ ಷಣ್ಮುಗಂ, ಪ್ರಾಧ್ಯಾಪಕಿ ಡಾ.ಎಂ. ಮಂಜುಳಾ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಚಳ್ಳಕೆರೆ ಅದ್ಧೂರಿ ಲಕ್ಷ್ಮೀರಂಗನಾಥ ಸ್ವಾಮಿ ರಥೋತ್ಸವ
ವಚನಕಾರ ಕ್ಷಿತಿಜದ ಉಜ್ವಲ ನಕ್ಷತ್ರ ಅಕ್ಕ: ಪ್ರಾಧ್ಯಾಪಕಿ ಡಾ.ಗಾಯತ್ರಿ