ದಸರಾ ಕಾವ್ಯ ಸಂಭ್ರಮ ಕಾರ್ಯಕ್ರಮ ಉದ್ಘಾಟನೆ
ಪ್ಯಾಲೆಸ್ತೇನ್, ಉಕ್ರೇನ್, ಮಣಿಪುರದಲ್ಲಿನ ಹಿಂಸೆಯಿಂದ ಅನಾವರಣ
ಕನ್ನಡಪ್ರಭ ವಾರ್ತೆ ಕೊಪ್ಪಳ
ನಗರದ ಸಾಹಿತ್ಯ ಭವನದಲ್ಲಿ ಕೊಪ್ಪಳ ವಿಶ್ವವಿದ್ಯಾಲಯದಿಂದ ಹಮ್ಮಿಕೊಂಡಿದ್ದ ದಸರಾ ಕಾವ್ಯ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಜಗತ್ತಿನಲ್ಲಿರುವ ತಲ್ಲಣಗಳಿಗೆ ಸ್ಪಂದಿಸಬೇಕಾಗಿದೆ. ಅಂಥ ಸಾಹಿತ್ಯದ ಅಗತ್ಯವಿದೆ. ಇದನ್ನು ತಡೆಯುವ ದಿಸೆಯಲ್ಲಿ ಪ್ರಯತ್ನಗಳಾಗಬೇಕಾಗಿದೆ ಎಂದರು.ಕೊಪ್ಪಳ ದಸರಾ ಕಾವ್ಯ ಸಂಭ್ರಮ, ಮೈಸೂರು ದಸರಾ ಇದ್ಯಾವುದು ಸಂಭ್ರಮದಿಂದ ಆಗಬೇಕಾಗಿರುವುದಲ್ಲ. ಹಿಂಸೆಯನ್ನು ವಿರೋಧಿಸಿ, ಶಾಂತಿಯನ್ನು ಬೋಧಿಸುವಂತಾಗಬೇಕು. ಅಂಥ ಕಾಲಘಟ್ಟದಲ್ಲಿ ನಾವಿದ್ದೇವೆ. ಸಿನೆಮಾಗಳು ಸಂಸ್ಕೃತಿಯನ್ನ ಹಾಳು ಮಾಡಿವೆ. ಸಾಹಿತ್ಯ, ಸಂಸ್ಕೃತಿ ಎಂದರೇ ಕೇವಲ ತೆವಲಿಗಾಗಿ ಅಲ್ಲ, ಅದು ಸಾಮಾಜಿಕ ಜವಾಬ್ದಾರಿಯಾಗಿದೆ. ಹೊಣೆಗಾರಿಕೆ ಇರದ ಸಾಹಿತ್ಯ ಸಾಹಿತ್ಯವೇ ಅಲ್ಲ. ಪ್ಯಾಲೆಸ್ತೀನ್ ಹಿಂಸೆ, ಉಕ್ರೇನ್ ಯುದ್ಧದ ಹಾನಿ ಹಾಗೂ ಮಣಿಪುರದಲ್ಲಿ ನಡೆಯುತ್ತಿರುವ ಜನಾಂಗೀಯ ದ್ವೇಷ ಅತ್ಯಂತ ಕಳವಳಕಾರಿಯಾಗಿದೆ. ಇದೆಲ್ಲಕೂ ಪರಿಹಾರಬೇಕಾಗಿದೆ ಎಂದು ಹೇಳಿದರು.
ಕಲಬುರಗಿಯ ರಂಗಾಯಣ ನಿರ್ದೇಶಕಿ ಡಾ. ಸುಜಾತಾ ಜಂಗಮಶೆಟ್ಟಿ ಮಾತನಾಡಿ, ಸದ್ಯದ ಸ್ಥಿತಿಯಲ್ಲಿ ನೈತಿಕತೆಯ ಕುರಿತು ಮಾತನಾಡುವುದು ಕಷ್ಟಕರವಾಗುತ್ತದೆ ಎಂದರು.
ವಿಜಯನಗರ ವಿವಿ ಕುಲಸಚಿವ ಎಸ್.ಎನ್. ರುದ್ರೇಶ, ಕೃಷ್ಣದೇವರಾಯ ವಿವಿಯ ಕುಲಪತಿ ಎಂ. ಮನಿರಾಜು ಮಾತನಾಡಿದರು.ಕೊಪ್ಪಳ ವಿವಿ ಕುಲಪತಿ ಪ್ರೊ. ಬಿ.ಕೆ. ರವಿ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಸಾಹಿತಿ ಅಲ್ಲಮಪ್ರಭು ಬೆಟ್ಟದೂರು ಇದ್ದರು. ಕೊಪ್ಪಳ ವಿವಿ ಕುಲಸಚಿವ ಕೆ.ವಿ. ಪ್ರಸಾದ ಸ್ವಾಗತಿಸಿದರು. ವರ್ಷಿನಿ ಹಾಗೂ ಸಂಗಡಿಗರು ಪ್ರಾರ್ಥಿಸಿದರು. ಡಾ. ಪಾರ್ವತಿ ಕಾರ್ಯಕ್ರಮ ನಿರೂಪಿಸಿದರು.