ವ್ಯಸನಮುಕ್ತ ಸಮಾಜ ನಿರ್ಮಾಣಕ್ಕೆ ಯುವಕರು ಮುಂದಾಗಬೇಕು-ಕಾಗಿನೆಲೆ ಶ್ರೀ

KannadaprabhaNewsNetwork |  
Published : Nov 07, 2025, 02:30 AM IST
ಮ | Kannada Prabha

ಸಾರಾಂಶ

ವ್ಯಸನ ಮುಕ್ತ ಸಮಾಜ ನಿರ್ಮಾಣಕ್ಕೆ ದುಶ್ಚಟಗಳ ಭಿಕ್ಷೆ ಎಂಬ ಆಂದೋಲನವನ್ನು ಶ್ರೀ ಗುರು ರೇವಣಸಿದ್ದೇಶ್ವರರು ಜೋಳಿಗೆ ಹಿಡಿದು ಆರಂಭಿಸಿದ್ದು ಎಲ್ಲರ ತಮ್ಮನ್ನ ಬದಲಾವಣೆ ಮಾಡಿಕೊಳ್ಳುವ ಮೂಲಕ ಸುಂದರ ಸಮಾಜ ನಿರ್ಮಾಣಕ್ಕೆ ಕೈಜೋಡಿಸುವಂತೆ ಕಾಗಿನೆಲೆ ಕನಕಗುರುಪೀಠದ ನಿರಂಜನಾನಂದಪುರಿ ಶ್ರೀಗಳು ಹೇಳಿದರು.

ಬ್ಯಾಡಗಿ: ವ್ಯಸನ ಮುಕ್ತ ಸಮಾಜ ನಿರ್ಮಾಣಕ್ಕೆ ದುಶ್ಚಟಗಳ ಭಿಕ್ಷೆ ಎಂಬ ಆಂದೋಲನವನ್ನು ಶ್ರೀ ಗುರು ರೇವಣಸಿದ್ದೇಶ್ವರರು ಜೋಳಿಗೆ ಹಿಡಿದು ಆರಂಭಿಸಿದ್ದು ಎಲ್ಲರ ತಮ್ಮನ್ನ ಬದಲಾವಣೆ ಮಾಡಿಕೊಳ್ಳುವ ಮೂಲಕ ಸುಂದರ ಸಮಾಜ ನಿರ್ಮಾಣಕ್ಕೆ ಕೈಜೋಡಿಸುವಂತೆ ಕಾಗಿನೆಲೆ ಕನಕಗುರುಪೀಠದ ನಿರಂಜನಾನಂದಪುರಿ ಶ್ರೀಗಳು ಹೇಳಿದರು.

ತಾಲೂಕಿನ ಮಾಸಣಗಿ ಗ್ರಾಮದಲ್ಲಿ 538ನೇ ಕನಕ ಜಯಂತ್ಯುತ್ಸವ ಪ್ರಯುಕ್ತ ರೇವಣಸಿದ್ದೇಶ್ವರ ಜೋಳಿಗೆ ಹಾಗೂ ಸದ್ಭಾವನಾ ನಡೆಗೆ ಕಾರ್ಯಕ್ರಮದ ದಿವ್ಯ ಸಾನಿದ್ಯ ವಹಿಸಿ ಮಾತನಾಡಿದರು. ವ್ಯಸನ ಮುಕ್ತ ಸಮಾಜದ ನಿರ್ಮಾಣಕ್ಕೆ ವಿದ್ಯಾರ್ಥಿಗಳು ಮತ್ತು ಯುವಕರು ಮುಂದಾಗಬೇಕು. ಕುತೂಹಲಕ್ಕಾಗಿ ಯಾರೊಬ್ಬರೂ ಮಾದಕ ದ್ರವ್ಯ ಬಳಸಬಾರದು ಎಂದರು.

ಮಾನಸಿಕ ಅಸ್ವಸ್ಥರನ್ನು ಗುರುತಿಸಿ ಚಿಕಿತ್ಸೆ ನೀಡಿ ಸಮಾಜದ ಮುಖ್ಯವಾಹಿನಿಗೆ ತರುವಂತೆ ಮಾಡುವುದು ನಾಗರಿಕ ಸಮಾಜದ ಆದ್ಯ ಕರ್ತವ್ಯ ಆಗಬೇಕು. ವ್ಯಸನದಿಂದ ಖಿನ್ನತೆ ಒಳಗಾದರೇ ಅದು ಆ ವ್ಯಕ್ತಿಯ ಸಾಮರ್ಥ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ, ದುಶ್ಚಟ ಮತ್ತು ಮದ್ಯವ್ಯಸನದಿಂದ ಹಲವು ಕುಟುಂಬಗಳು ಅಪಾಯಕ್ಕೆ ಸಿಲುಕಿದ್ದು ಇದನ್ನರಿತು ವ್ಯಸನ ಮುಕ್ತ ಸಮಾಜ ನಿರ್ಮಾಣ ಮಾಡಲು ಕಾಗಿನೆಲೆ ಗುರುಪೀಠ ಅಡಿಪಾಯ ಹಾಕಲು ಮುಂದಾಗಿದೆ ಎಂದರು.

ಆಶೀರ್ವಚನ ನೀಡುತ್ತ ಮಾತನಾಡಿದ ರೇವಣಸಿದ್ದ ಶಾಂತವೀರಶ್ರೀಗಳು, ಬಡತನ ನಿರ್ಮೂಲನೆ, ಕೂಲಿ ಕಾರ್ಮಿಕರ ಸಂಸಾರಗಳಿಗೆ ಬದುಕು ರೂಪಿಸಿಕೊಳ್ಳುವ ಸ್ವಾವಲಂಬಿ ಯೋಜನೆಗಳ ಮೂಲಕ ಸುಖ ಸಂಸಾರ ನಡೆಸಬೇಕು. ಇಂದಿನ ಮಕ್ಕಳು ಚಿಕ್ಕ ವಯಸ್ಸಿನಲ್ಲೇ ದುಶ್ಚಟಗಳಿಗೆ ಬಲಿಯಾಗುತ್ತಿದ್ದು ಇಂತಹ ದುಶ್ಚಟಗಳಿಗೆ ಬಲಿಯಾಗದಂತೆ ಅವರಲ್ಲಿ ಅರಿವು ಮೂಡಿಸುವುದು ಬಹಳ ಮುಖ್ಯವಾಗಿದೆ ಎಂದರು.

ಈ ಸಂದರ್ಭದಲ್ಲಿ ಕುರುಬ ಸಮಾಜದ ಜಿಲ್ಲಾಧ್ಯಕ್ಷ ನಾಗರಾಜ ಆನವೇರಿ, ಚಿಕ್ಕಪ್ಪ ಹಾದಿಮನಿ, ಮಲ್ಲಿಕಾರ್ಜುನ ಕರಲಿಂಗಣ್ಣನವರ, ಬಸವರಾಜ ಬನ್ನಿಹಟ್ಟಿ, ಶಿವಪ್ಪ ಕುಮ್ಮೂರ, ನಿಂಗರಾಜ ಗಡ್ಡದವರ, ಯಲ್ಲಪ್ಪ ಗಡ್ಡದವರ, ಚಂದ್ರು ಮುಳಗುಂದ, ಮಲ್ಲಪ್ಪ ಕರ್ಜಗಿ, ನಿಂಗಪ್ಪ ಹೆಗ್ಗಣ್ಣನವರ, ಉಳಿವೆಪ್ಪ ಮುಳಗುಂದ, ನಾಗಪ್ಪ ಬನ್ನಿಹಟ್ಟಿ, ಚನ್ನಬಸಪ್ಪ ವೀರನಗೌಡ್ರ, ಮಹದೇವಪ್ಪ ಪಡಿಯಣ್ಣನವರ, ಸಂಜೀವಪ್ಪ ಹುಲಿಹಳ್ಳಿ, ಬಸಪ್ಪ ಕೆಂಪಲಿಂಗಣ್ಣನವರ, ಶಂಭಯ್ಯ ಹಿರೇಮಠ ಸೇರಿದಂತೆ ಇತರರಿದ್ದರು. ಮಂಜುನಾಥ ಹಾದಿಮನಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಭಾಷಣ ಮಾಡಿಕೊಂಡು ಹೋದವನಲ್ಲ, ಪಕ್ಷದ ಎಲ್ಲಾ ಕೆಲ್ಸ ಮಾಡಿದ್ದೇನೆ: ಡಿಕೆಶಿ
ರಾಗಾ-ವೈಷ್ಣವ್‌ ಉದ್ಯೋಗ ಸೃಷ್ಟಿ ‘ಕ್ರೆಡಿಟ್‌ ವಾರ್’