ಅಧ್ಯಯನಶೀಲತೆ ಗಾಂಧಿ ಆದರ್ಶ: ಪ್ರಸಾದ್ ರಕ್ಷಿದಿ

KannadaprabhaNewsNetwork |  
Published : Jun 05, 2026, 03:00 AM IST
‘ಲೋಕ ಗೆಂದಿನ ಗಾಂಧಿಯೆರ್’ ದ್ವಿತೀಯ ಮುದ್ರಣ ಬಿಡುಗಡೆ ಕಾರ್ಯಕ್ರಮ ನಡೆಯಿತು | Kannada Prabha

ಸಾರಾಂಶ

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮತ್ತು ಮಹಾತ್ಮ ಗಾಂಧಿ ಶಾಂತಿ ಪ್ರತಿಷ್ಠಾನ ಜಂಟಿಯಾಗಿ ನಗರದ ಬಾವುಟ ಗುಡ್ಡೆಯ ಪ್ರತಿಷ್ಠಾನದ ಸಭಾಂಗಣದಲ್ಲಿ ಆಯೋಜಿಸಿದ ‘ಲೋಕ ಗೆಂದಿನ ಗಾಂಧಿಯೆರ್’ ಪುಸ್ತಕದ ಎರಡನೇಯ ಮುದ್ರಣದ ಕೃತಿ ಬಿಡುಗಡೆ ಹಾಗೂ ಮಹಾತ್ಮರ ಮನನ ಸರಣಿ ಕಾರ್ಯಕ್ರಮ

ಮಂಗಳೂರು: ಅನುಭವದ, ಅಧ್ಯಯನದ ಮತ್ತು ಆವಿಷ್ಕಾರ ಮನೋಭಾವದ ಕಾರಣದಿಂದಾಗಿಯೇ ಗಾಂಧಿ ಅವರು ಸತ್ಯದ ಹುಡುಕಾಟವನ್ನು ನಿರಂತರವಾಗಿ ನಡೆಸಿದ್ದರು. ಈ ಕಾರಣಕ್ಕಾಗಿ ಗಾಂಧಿ ಎಲ್ಲಾ ಕಾಲದಲ್ಲೂ ಆದರ್ಶವಾಗುತ್ತಾರೆ ಮತ್ತು ಅಗತ್ಯವಾಗುತ್ತಾರೆ ಎಂದು ರಂಗಕರ್ಮಿ ಪ್ರಸಾದ್ ರಕ್ಷಿದಿ ಹೇಳಿದರು.

ಅವರು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮತ್ತು ಮಹಾತ್ಮ ಗಾಂಧಿ ಶಾಂತಿ ಪ್ರತಿಷ್ಠಾನ ಜಂಟಿಯಾಗಿ ನಗರದ ಬಾವುಟ ಗುಡ್ಡೆಯ ಪ್ರತಿಷ್ಠಾನದ ಸಭಾಂಗಣದಲ್ಲಿ ಆಯೋಜಿಸಿದ ‘ಲೋಕ ಗೆಂದಿನ ಗಾಂಧಿಯೆರ್’ ಪುಸ್ತಕದ ಎರಡನೇಯ ಮುದ್ರಣದ ಕೃತಿ ಬಿಡುಗಡೆ ಹಾಗೂ ಮಹಾತ್ಮರ ಮನನ ಸರಣಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಡಾ. ಉದಯ ಕುಮಾರ್ ಇರ್ವತ್ತೂರು ಅವರು ಬರೆದ ‘ಲೋಕ ಗೆಂದಿನ ಗಾಂಧಿಯೆರ್’ ಪುಸ್ತಕದ ಪುನರ್ ಮುದ್ರಣದ ಕೃತಿಯನ್ನು ತುಳು ಅಕಾಡೆಮಿಯ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್ ಅವರು ಬಿಡುಗಡೆಗೊಳಿಸಿದರು. ಗಾಂಧಿ ಚಿಂತನಾ ಸಂವಾದ ಕಾರ್ಯಕ್ರಮವನ್ನು ಲೇಖಕ ಅರವಿಂದ ಚೊಕ್ಕಾಡಿ ನಡೆಸಿಕೊಟ್ಟರು. ಪ್ರತಿಷ್ಠಾನದ ಉಪಾಧ್ಯಕ್ಷ ಬಿ.ಪ್ರಭಾಕರ ಶ್ರೀಯಾನ್ ಅಧ್ಯಕ್ಷತೆ ವಹಿಸಿದ್ದರು. ತುಳು ಸಾಹಿತ್ಯ

ಅಕಾಡೆಮಿಯ ಸದಸ್ಯ ಸಂಚಾಲಕ ಉದ್ಯಾವರ ನಾಗೇಶ್ ಕುಮಾರ್ ಇದ್ದರು.ಗಾಂಧಿ ಪ್ರತಿಷ್ಠಾನದ ಕಾರ್ಯದರ್ಶಿ ಡಾ.ಇಸ್ಮಾಯಿಲ್ ಎನ್. ಸ್ವಾಗತಿಸಿದರು. ಪ್ರತಿಷ್ಠಾನದ ಜೊತೆ ಕಾರ್ಯದರ್ಶಿ

ಕಲ್ಲೂರು ನಾಗೇಶ್ ನಿರ್ವಹಿಸಿದರು. ಪ್ರೇಮ್ ಕುಮಾರ್ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಆರು ಜನ ಹತ್ಯೆ: ಮತ್ತೆ 6 ಆರೋಪಿಗಳ ಸೆರೆ
ನ್ಯಾಯಾಧೀಕರಣದ ತೀರ್ಪಿನ ಬಗ್ಗೆ 8ಕ್ಕೆ ವಿಚಾರ ಸಂಕಿರಣ