ಗ್ರಾಮೀಣ ಪ್ರದೇಶದಲ್ಲಿ ರಂಗಭೂಮಿ ಕಲೆ ಹೆಚ್ಚಾಗಿ ಪ್ರದರ್ಶನಗೊಳ್ಳಬೇಕು: ಡಿ.ಕೃಷ್ಣೇಗೌಡ

KannadaprabhaNewsNetwork |  
Published : Sep 17, 2025, 01:05 AM IST
16ಕೆಎಂಎನ್ ಡಿ12 | Kannada Prabha

ಸಾರಾಂಶ

ಚಲನಚಿತ್ರದಲ್ಲಿ ದೃಶ್ಯ ಮತ್ತು ನಟನೆಯಲ್ಲಿ ಏನಾದರೂ ಲೋಪದೋಷಗಳಾದಲ್ಲಿ ಅದನ್ನು ಸರಿಪಡಿಸಬಹುದು. ಆದರೆ, ರಂಗಭೂಮಿ ಪ್ರದರ್ಶನವನ್ನು ತಿರುಚಲು ಯಾವುದೇ ಅವಕಾಶವಿಲ್ಲ. ಇಂತಹ ನೈಜ ಕಲೆಯನ್ನು ಉಳಿಸಲು ಎಲ್ಲರೂ ಮುಂದಾಗಬೇಕಿದೆ.

ಕನ್ನಡಪ್ರಭ ವಾರ್ತೆ ಮಳವಳ್ಳಿ

ಮಾನವೀಯ ಮೌಲ್ಯವನ್ನು ಕಲೆ ಮೂಲಕ ಪ್ರಸ್ತುತ ಪಡಿಸುವ ರಂಗಭೂಮಿ ಕಲೆ ಗ್ರಾಮೀಣ ಪ್ರದೇಶದಲ್ಲಿ ಹೆಚ್ಚಾಗಿ ಪ್ರದರ್ಶನಗೊಳ್ಳಬೇಕು ಎಂದು ಮನ್ಮುಲ್ ನಿರ್ದೇಶಕ ಡಿ.ಕೃಷ್ಣೇಗೌಡ ತಿಳಿಸಿದರು.

ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಮಳವಳ್ಳಿ ಸುಂದರಮ್ಮ ಸ್ಮರಣಾರ್ಥ ಯೂನಿರ‍್ಸಲ್ ಸೇವಾ ಟ್ರಸ್ಟ್ ಸಹಯೋಗದೊಂದಿಗೆ ರಂಗ ಬಂಡಿ ಮಳವಳ್ಳಿ ವತಿಯಿಂದ ನಡೆದ 7 ದಿನದ ನಾಟಕೋತ್ಸವದ ಸಮಾರೋಪ ಸಮಾರಂಭದಲ್ಲಿ ಆಯೋಜಕರಾದ ಟಿ.ಎಂ.ಪ್ರಕಾಶ್ ಹಾಗೂ ಮಧು ಮಳವಳ್ಳಿ ಅವರನ್ನು ಅಭಿನಂದಿಸಿ ಮಾತನಾಡಿದರು.

ಚಲನಚಿತ್ರದಲ್ಲಿ ದೃಶ್ಯ ಮತ್ತು ನಟನೆಯಲ್ಲಿ ಏನಾದರೂ ಲೋಪದೋಷಗಳಾದಲ್ಲಿ ಅದನ್ನು ಸರಿಪಡಿಸಬಹುದು. ಆದರೆ, ರಂಗಭೂಮಿ ಪ್ರದರ್ಶನವನ್ನು ತಿರುಚಲು ಯಾವುದೇ ಅವಕಾಶವಿಲ್ಲ. ಇಂತಹ ನೈಜ ಕಲೆಯನ್ನು ಉಳಿಸಲು ಎಲ್ಲರೂ ಮುಂದಾಗಬೇಕಿದೆ ಎಂದರು.

ಟಿಎಪಿಸಿಎಂಎಸ್ ನಿರ್ದೇಶಕ ಕೆ.ಜೆ.ದೇವರಾಜು ಮಾತನಾಡಿ, ಮಳವಳ್ಳಿ ತನ್ನದೇ ಆದ ಇತಿಹಾಸವನ್ನು ಹೊಂದಿದೆ. ಇಂತಹ ಭೂಮಿಯಲ್ಲಿ ಇತಿಹಾಸ ತಿಳಿಸುವ ಸಿದ್ದಪ್ಪಾಜಿ ಸೇರಿದಂತೆ ಹಲವು ಕಥೆಗಳನ್ನು ಒಳಗೊಂಡ ರಂಗಭೂಮಿ ಕಲೆ ಪ್ರದರ್ಶನಗೊಳ್ಳುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದರು.

ಒಂದು ವಾರಗಳ ಕಾಲ ಸಾರ್ವಜನಿಕರಿಗೆ ಮನರಂಜನೆ ನೀಡಿದ ಕಲಾವಿದರಿಗೆ ಹಾಗೂ ಕಾರ್ಯಕ್ರಮ ಆಯೋಜಕರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಇಂತಹ ಕಾರ್ಯಕ್ರಮಗಳು ನಡೆಯಲಿ ಎಂದು ಆಶಿಸಿದರು.

ಇದೇ ವೇಳೆ ಯೂನಿರ‍್ಸಲ್ ಸೇವಾ ಟ್ರಸ್ಟ್ ಪ್ರಧಾನ ಕರ‍್ಯರ‍್ಶಿ ಟಿ.ಎಂ.ಪ್ರಕಾಶ್, ರಂಗ ಬಂಡಿ ಮಳವಳ್ಳಿ ಮಧು ಅವರನ್ನು ನಿವೃತ್ತ ಮುಖ್ಯಶಿಕ್ಷಕ ದೇವರಾಜು ಕೊದೆನಕೊಪ್ಪಲು ಅಭಿನಂದಿಸಿದರು. ಕಾರ್ಯಕ್ರಮದಲ್ಲಿ ಸಂಪೂರ್ಣ ಸಾವಯವ ಕೃಷಿಕರ ಸಂಘದ ಅಧ್ಯಕ್ಷ ಎಂ.ಎನ್.ಮಹೇಶ್ ಕುಮಾರ್, ರೈತ ಮುಖಂಡ ಎನ್.ಎಲ್.ಭರತ್ ರಾಜ್, ಲಯನ್ಸ್ ಸಂಸ್ಥೆ ಟಿ.ಆರ್.ಸೋಮೇಗೌಡ, ಮುಖಂಡರಾದ ಪುಟ್ಟರಾಜು, ಸುರೇಶ್, ಎಂ.ಎನ್.ಜಯರಾಜು ಪಾಲ್ಗೊಂಡಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

500 ನಾಯಿಗಳಿಗೆ ಚಿಕನ್‌ ರೈಸ್ ನೀಡಲು ವರ್ಷಕ್ಕೆ 1.83 ಕೋಟಿ
ಯಲಹಂಕದಲ್ಲಿ ‘ಚೀನಾದ ಹ್ಯಾಂಗ್‌ಝೌ’ ಮಾದರಿ ರೈಲು ನಿಲ್ದಾಣ