ಜೆಎಸ್‌ಎಸ್ ರಂಗೋತ್ಸವ-೨೪ಕ್ಕೆ ಚಾಲನೆ । ಪಬ್ಲಿಕ್ ಶಾಲೆಯ ಮಕ್ಕಳಿಂದ ಮಾಧ್ಯಮ ವ್ಯಾಯೋಗ ನಾಟಕ
ಜೀವನದ ಎಲ್ಲಾ ಅಯಾಮದ ಮೌಲ್ಯಗಳನ್ನು ಕಲಿಸಿ, ಬದುಕಿನ ಶೈಲಿಯನ್ನೇ ಬದಲಿಸುವ ಏಕೈಕ ವಿಶ್ವವಿದ್ಯಾನಿಲು ರಂಗಭೂಮಿ ಎಂದು ರಂಗಭೂಮಿ ಹಾಗೂ ಚಲನಚಿತ್ರ ನಟ ಮಂಡ್ಯ ರಮೇಶ್ ಹೇಳಿದರು.
ಜೆಎಸ್‌ಎಸ್ ಮಹಾವಿದ್ಯಾಪೀಠ, ಜೆಎಸ್‌ಎಸ್ ಕಲಾ ಮಂಟಪ ಮೈಸೂರು ಮತ್ತು ಜೆಎಸ್‌ಎಸ್ ಶಿಕ್ಷಣ ಸಂಸ್ಥೆಗಳ ವತಿಯಿಂದ ನಗರದ ಡಾ. ರಾಜ್‌ಕುಮಾರ್ ರಂಗಮಂದಿರದಲ್ಲಿ ಹಮ್ಮಿಕೊಂಡಿದ್ದ ಮೂರು ದಿನಗಳ ರಂಗೋತ್ಸವ-2024ನ್ನು ಉದ್ಘಾಟಿಸಿ ಮಾತನಾಡಿದರು.ಇಂತಹ ರಂಗ ಶಿಕ್ಷಣವನ್ನು ಜೆಎಸ್‌ಎಸ್ ವಿದ್ಯಾಪೀಠ ಮಾಡುತ್ತಿರುವುದು ನಮ್ಮ ಪುಣ್ಯ, ಪ್ರತಿಭಾನ್ವೇಷನೆಗೆ ಸೂಕ್ತ ವೇದಿಕೆಯನ್ನು ಕಲ್ಪಿಸಿಕೊಟ್ಟಿದೆ, ಜೀವನ ಶೈಲಿಯ ಬದಲಾವಣೆಯಲ್ಲಿ ರಂಗಶಿಕ್ಷಣ ಅತ್ಯಂತ ಪ್ರಮುಖ ಸ್ಥಾನವನ್ನು ವಹಿಸುತ್ತದೆ ಎಂದರು.
ಧರ್ಮ ನಿರಪೇಕ್ಷಿತೆ, ಜಾತ್ಯತೀತ ರಂಗ ಇದ್ದರೆ ಅದು ರಂಗಭೂಮಿ, ಇಲ್ಲಿ ಎಲ್ಲಾ ತರಹದ ಎಲ್ಲಾ ಧರ್ಮಗಳನ್ನು ಪಾತ್ರಗಳನ್ನು ಮಾಡಿ ಅದರ ಮೌಲ್ಯವನ್ನು ತಿಳಿಸುವುದರ ಜತೆಗೆ ೧೨ನೇ ಶತಮಾನದಲ್ಲಿ ಬಸವಣ್ಣ ಮತ್ತು ಶರಣರು ಕಂಡ ಒಟ್ಟಾಗಿ ಹೋಗುವ ಸಮಾನತೆಯನ್ನು ಕಲಿಸುತ್ತದೆ ಎಂದರು.
ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಎನ್.ಮುನಿರಾಜು ಮಾತನಾಡಿ, ರಂಗಭೂಮಿ ಧೈರ್ಯವನ್ನು ತುಂಬುತ್ತದೆ, ರಂಗಭೂಮಿಯಲ್ಲಿ ತಾನು ಬೆಳೆಯುವುದರ ಜತೆ ಇತರರನ್ನು ಬೆಳಸಬಹದು, ಮೂರು ದಿನಗಳ ಈ ರಂಗೋತ್ಸವದಲ್ಲಿ ಪಾಲ್ಗೊಳ್ಳಿ, ನಾಟಕಗಳನ್ನು ನೋಡಿ, ಅದರ ಬಗ್ಗೆ ಚರ್ಚಿಸಿ, ನಾಟಕದಲ್ಲಿನ ಒಳ್ಳೆಯ ಅಂಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ ಎಂದರು.
ಸಹಾಯಕ ಪ್ರಾಧ್ಯಾಪಕಿ ಡಾ.ಎ.ಆರ್.ಸುಷ್ಮಾ ಸ್ವಾಗತಿಸಿ, ಜಮುನಾ ವಂದಿಸಿದರು. ಕೆ.ಎಸ್.ಅರುಣಾಶ್ರೀ ನಿರೂಪಿಸಿದರು. ಮೈಸೂರು ಜೆಎಸ್‌ಎಸ್ ಪಬ್ಲಿಕ್ ಶಾಲೆಯ ವಿದ್ಯಾರ್ಥಿಗಳಿಂದ ಮಾಧ್ಯಮ ವ್ಯಾಯೋಗ ನಾಟಕ ಪ್ರದರ್ಶನಗೊಂಡಿತು.