ಕನ್ನಡಪ್ರಭ ವಾರ್ತೆ ಹಿರಿಯೂರು
ಸಂವಹನ ಕೌಶಲವನ್ನು ನಟನಾ ಕೌಶಲವನ್ನು ಶಿಕ್ಷಕರು ತಮ್ಮ ಬೋಧನೆಯಲ್ಲಿ ಬಳಸಿಕೊಂಡಾಗ ಭೋಧನೆ ಪರಿಣಾಮಕಾರಿಯಾಗಲು ಸಾಧ್ಯವಾಗುತ್ತದೆ. ಪ್ರಶಿಕ್ಷಣಾರ್ಥಿಗಳು ರಂಗ ಚಟುವಟಿಕೆಗಳಲ್ಲಿ ಹೆಚ್ಚು ತೊಡಗಿಸಿಕೊಳ್ಳುವುದರಿಂದ ಸಾಹಿತ್ಯಕ ಅಭಿರುಚಿಯನ್ನ ಸಾಂಸ್ಕೃತಿಕ ಮೌಲ್ಯಗಳನ್ನು ಹೊಂದಲು ಸಹಾಯವಾಗುತ್ತದೆ. ಪ್ರಶಿಕ್ಷಣಾರ್ಥಿಗಳು ತರಬೇತಿ ಅವಧಿಯಲ್ಲಿಯೇ ವಿವಿಧ ಆಯಾಮಗಳನ್ನು ಅಳವಡಿಸಿಕೊಂಡು ಉತ್ತಮ ಶಿಕ್ಷಕರಾಗಲು ಪ್ರಯತ್ನಿಸಬೇಕು. ವಿಷಾದದ ಸಂಗತಿ ಎಂದರೆ ಈ ವಿಶಿಷ್ಠ ಪುರಾತನ ಕಲೆಗಳಿಂದ ವಿದ್ಯಾರ್ಥಿಗಳು ಯುವಕರು ವಿಮುಖರಾಗುತ್ತಿರುವುದು ಬೇಸರದ ಸಂಗತಿಯಾಗಿದೆ. ವಿದ್ಯಾರ್ಥಿಗಳ ಸರ್ವತೋಮುಖ ಪ್ರಗತಿಗೆ ಮಾನವನನ್ನು ನಿಜಮಾನವನ್ನಾಗಿಸುವಿಕೆಯಲ್ಲಿ ಸಮಾಜವನ್ನು ಪರಿವರ್ತಿಸುವಲ್ಲಿ ನಾಟಕಗಳು ಯಶಸ್ವಿ ಪಾತ್ರ ನಿರ್ವಹಿಸುವ ಸಾಮಾಜಿಕ ಮಾಧ್ಯಮಗಳಾಗಿವೆ ಎಂದರು.
ಸಂಪನ್ಮೂಲ ವ್ಯಕ್ತಿ, ರಂಗಕರ್ಮಿ ಕೆ.ಪಿ.ಎಂ.ಗಣೇಶಯ್ಯನವರು ರಂಗಭೂಮಿಯ ಬಗ್ಗೆ ತಿಳಿಸುತ್ತಾ ಅಲ್ಲಿನ ನವರಸಗಳ ಬಗ್ಗೆ,ಶಿಕ್ಷಕರಿಗೆ ಆಂಗಿಕ ಭಾವದ ಜೊತೆಗೆ ವಾಕ್ಚಾತುರ್ಯ, ಅಭಿನಯದ ರೂಪಗಳನ್ನು ಪರಿಚಯಿಸಿದರು.ಈ ಸಂದರ್ಭದಲ್ಲಿ ಸಂಸ್ಥೆಯ ಕಾರ್ಯದರ್ಶಿ ಡಾ. ಅವಿನಾಶ್, ಉಪನ್ಯಾಸಕರಾದ ರವಿಕುಮಾರ್ ಎಚ್.ಅರುಣಾಕುಮಾರಿ, ನಾಗೇಶ್, ಜೆ.ಆರ್.ಮಾರುತೇಶ್, ನಿಂಗರಾಜ್, ಪಿ.ಕೂಡಲಸಂಗಮ, ವಿ. ರಂಗಸ್ವಾಮಿ ಮುಂತಾದವರು ಉಪಸ್ಥಿತರಿದ್ದರು.