ಕನಕಪುರ:ಕಳ್ಳತನ ಮಾಡಲು ನಡೆಸಿದ ಯತ್ನ ವಿಫಲವಾಗಿ ಕದೀಮ ಸ್ಥಳದಲ್ಲೇ ದ್ವಿಚಕ್ರ ವಾಹನ ಬಿಟ್ಟು ಪರಾರಿಯಾಗಿರುವ ಘಟನೆ ನಗರದ ವಿವೇಕಾನಂದ ನಗರ ಬಡಾವಣೆಯಲ್ಲಿ ನಡೆದಿದೆ.
ಕಳೆದ 8 ತಿಂಗಳ ಹಿಂದೆ ಇದೇ ಮನೆಯಲ್ಲಿ ಯಾರೂ ಇಲ್ಲದಿರುವಾಗ ಕಳ್ಳತನ ನಡೆದಿತ್ತು, ಕಲೀಲ್ ಅವರು ಠಾಣೆಯಲ್ಲಿ ದೂರು ಕೂಡ ದಾಖಲಿಸಿದ್ದರು. ಆದರೆ ಪೊಲೀಸರು ಕಳ್ಳತನ ಮಾಡಿದ ಕದೀಮನನ್ನು ಪತ್ತೆ ಹಚ್ಚಿರಲಿಲ್ಲ. ಈಗ ಮತ್ತೆ ಅದೇ ಮನೆಯಲ್ಲಿ ಕಳ್ಳತನ ಯತ್ನ ನಡೆದಿದ್ದು, 8 ತಿಂಗಳ ಹಿಂದೆ ಕಳ್ಳತನ ಮಾಡಿದ್ದ ಕದೀಮನೆ ಈಗಲೂ ಕಳ್ಳತನದ ಯತ್ನನಡೆಸಿರಬಹುದು ಎಂಬ ಅನುಮಾನ ವ್ಯಕ್ತವಾಗಿದೆ. ಬುಧವಾರ ರಾತ್ರಿ ಕಳ್ಳತನ ಮಾಡಲು ಬಂದಿದ್ದ ಕದೀಮ ಮೊದಲನೇ ಮಹಡಿಯಿಂದ ಕೆಳಗೆ ಜಿಗಿದು ದ್ವಿಚಕ್ರ ವಾಹನವನ್ನು ಸ್ಥಳದಲ್ಲಿ ಬಿಟ್ಟು ಪರಾರಿಯಾಗಿದ್ದು, ಈ ಬಗ್ಗೆ ಕೂಡಲೇ ಪೊಲೀಸರಿಗೆ ಮಾಹಿತಿಯನ್ನು ನೀಡಿದರೂ ಸಹ ಪೊಲೀಸರು ಯಾವುದೇ ಕ್ರಮಕೈಗೊಂಡಿಲ್ಲ ಎಂದು ಕಲೀಲ್ ತಿಳಿಸಿದ್ದಾರೆ.
---ಬುಧವಾರ ರಾತ್ರಿ ಕಳ್ಳತನದ ವಿಫಲ ಯತ್ನ ನಡೆದಿರುವ ವಿವೇಕಾನಂದ ನಗರದ ನಾಲ್ಕನೇ ರಸ್ತೆಯಲ್ಲಿರುವ ಕಲೀಲ್ ಅವರ ಮನೆ.