ಎಲೆಕ್ಟ್ರಿಕಲ್ ಸಾಮಗ್ರಿಗಳ ಕಳವು: ಮೂವರಿಗೆ ನ್ಯಾಯಾಂಗ ಬಂಧನ

KannadaprabhaNewsNetwork |  
Published : Aug 26, 2024, 01:33 AM IST
ಕ್ಯಾಪ್ಷನಃ25ಕೆಡಿವಿಜಿ39ಃಹರಿಹರ ತಾ.ಹನಗವಾಡಿಯ ಪೈಪ್ಸ್ ಸ್ಪಿಂಕ್ಲರ್ ಘಟಕದಲ್ಲಿ ಎಲೆಕ್ಟಿçಕಲ್ ಸಾಮಾಗ್ರಿಗಳ ಕಳ್ಳತನ ಮಾಡಿದ ಆರೋಪಿಗಳನ್ನು ಪೊಲೀಸರು ಬಂದಿಸಿ ಸಾಮಗ್ರಿ, ವಾಹನ, ಬೈಕ್‌ಗಳನ್ನು ವಶಪಡಿಸಿಕೊಂಡರು. | Kannada Prabha

ಸಾರಾಂಶ

ಹರಿಹರ ತಾಲೂಕಿನ ಹನಗವಾಡಿ ಕೈಗಾರಿಕಾ ಪ್ರದೇಶದಲ್ಲಿರುವ ಪೈಪ್ಸ್ ಮತ್ತು ಸ್ಪಿಂಕ್ಲರ್ ತಯಾರಿಕಾ ಘಟಕದಲ್ಲಿ ತಾಮ್ರದ ತಂತಿ ಮತ್ತು ಎಲೆಕ್ಟ್ರಿಕಲ್ ಸಾಮಗ್ರಿಗಳನ್ನು ಕಳವು ಮಾಡಿದ್ದ ಮೂವರನ್ನು ಬಂಧಿಸಿ ₹12 ಲಕ್ಷಕ್ಕೂ ಅಧಿಕ ಮೌಲ್ಯದ ಮಾಲನ್ನು ಹರಿಹರ ಗ್ರಾಮಾಂತರ ಠಾಣಾ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಕನ್ನಡಪ್ರಭ ವಾರ್ತೆ, ದಾವಣಗೆರೆ

ಹರಿಹರ ತಾಲೂಕಿನ ಹನಗವಾಡಿ ಕೈಗಾರಿಕಾ ಪ್ರದೇಶದಲ್ಲಿರುವ ಪೈಪ್ಸ್ ಮತ್ತು ಸ್ಪಿಂಕ್ಲರ್ ತಯಾರಿಕಾ ಘಟಕದಲ್ಲಿ ತಾಮ್ರದ ತಂತಿ ಮತ್ತು ಎಲೆಕ್ಟ್ರಿಕಲ್ ಸಾಮಗ್ರಿಗಳನ್ನು ಕಳವು ಮಾಡಿದ್ದ ಮೂವರನ್ನು ಬಂಧಿಸಿ ₹12 ಲಕ್ಷಕ್ಕೂ ಅಧಿಕ ಮೌಲ್ಯದ ಮಾಲನ್ನು ಹರಿಹರ ಗ್ರಾಮಾಂತರ ಠಾಣಾ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಹರಿಹರದ ನಿವಾಸಿಗಳಾದ ಸೈಯದ್ ನೂರುದ್ದೀನ್, ಮೊಹ್ಮದ್ ಆಸೀಫ್ ಮತ್ತು ಇರ್ಷದ್ ಬಂಧಿತರು. ಬಂಧಿತರಿಂದ ₹12 ಲಕ್ಷದ ಮೌಲ್ಯದ ತಾಮ್ರದ ತಂತಿ ಮತ್ತು ಎಲೆಕ್ಟ್ರಿಕಲ್‌ ಸಾಮಗ್ರಿಗಳು ಹಾಗೂ ಕೃತ್ಯಕ್ಕೆ ಬಳಸಿದ ಒಮಿನಿ ವಾಹನ ಮತ್ತು 2 ಬೈಕ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಹನಗವಾಡಿ ಇಂಡಸ್ಟ್ರಿಯಲ್ ಏರಿಯಾದಲ್ಲಿ ಇರುವ ಗ್ರೀನ್ ರಾಯಲ್ ಎಚ್‌ಡಿಪಿಇ ಪೈಪ್ಸ್ ಮತ್ತು ಡ್ರಿಪ್ ಹಾಗೂ ಸ್ಪಿಂಕ್ಲರ್ ತಯಾರಿಕಾ ಘಟಕದಲ್ಲಿ ಮಿಷನರಿಗೆ ಬಳಸಿದ್ದ ಪವರ್ ಸಪ್ಲೈ ಮತ್ತು ಕಾಪರ್ ಕೇಬಲ್ ಹಾಗೂ ಸಲಕರಣೆಗಳು ಕಳುವಾದ ಕುರಿತು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.

ಶ್ವಾನದಳದೊಂದಿಗೆ ದಾಳಿ:

ಈ ಹಿನ್ನೆಲೆ ಹೆಚ್ಚುವರಿ ಎಸ್‌ಪಿ ವಿಜಯ್ ಕುಮಾರ್ ಸಂತೋಷ, ಜಿ.ಮಂಜುನಾಥ, ಡಿವೈಎಸ್‌ಪಿ ಬಿ.ಎಸ್. ಬಸವರಾಜ ಮಾರ್ಗದರ್ಶನದಲ್ಲಿ ತನಿಖಾಧಿಕಾರಿ ಸುರೇಶ ಸಗರಿ ಹರಿಹರ ಗ್ರಾಮಾಂತರ ಪೊಲೀಸ್ ಠಾಣೆಯ ಪಿಎಸ್‌ಐ ಮಂಜುನಾಥ ಎಸ್. ಕುಪ್ಪೇಲೂರು ಸಿಬ್ಬಂದಿ ಸರಳ ತಿಪ್ಪೇಸ್ವಾಮಿ, ನಾಗರಾಜ. ರಾಮಚಂದ್ರಪ್ಪ, ಕರಿಯಪ್ಪ, ರಮೇಶ, ದಾದಾಪೀರ್, ನೀಲಮೂರ್ತಿ, ಸತೀಶ, ಲಿಂಗರಾಜ, ಅರ್ಜುನ ರಾಯಲ್, ಅನಿಲ್ ಕುಮಾರ್ ನಾಯ್ಕ, ರಿಜ್ವಾನ್ ನಾಸೂರ್, ಗಂಗಾಧರ, ಪ್ರಸನ್ನಕಾಂತ, ಸುರೇಶ, ಅರ್ಜುನ್ ನಂದ್ಯಾಲ, ಋಷಿರಾಜ, ನಾಗರಾಜ, ರಾಮಾಂಜನೇಯ, ಸತೀಶ, ದ್ವಾರಕೇಶ, ಹನುಮಂತ, ಸಿದ್ದಪ್ಪ ಮುರುಳಿ ಇತರ ಸಿಬ್ಬಂದಿಯನ್ನು ಒಳಗೊಂಡ ತಂಡ ಪೊಲೀಸ್ ಶ್ವಾನದೊಂದಿಗೆ ದಾಳಿ ನಡೆಸಿ, ಆರೋಪಿಗಳನ್ನು ಬಂಧಿಸಿ, ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ₹8 ಲಕ್ಷ ಮೌಲ್ಯದ ತಾಮ್ರದ ತಂತಿ ಮತ್ತು ಎಲೆಕ್ಟ್ರಿಕಲ್ ಸಾಮಗ್ರಿಗಳು ಹಾಗೂ ಕೃತ್ಯಕ್ಕೆ ಬಳಸಿದ ಒಟ್ಟು ಸುಮಾರು ₹4 ಲಕ್ಷ ಮೌಲ್ಯದ ಒಮಿನಿ ಮತ್ತು 2 ಬೈಕುಗಳನ್ನು ವಶಕ್ಕೆ ವಶಪಡಿಸಿಕೊಳ್ಳಲಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!