ಕನ್ನಡಪ್ರಭ ವಾರ್ತೆ ಗುಳೇದಗುಡ್ಡ
ಜುಲೈ 14ರಂದು ಗುಳೇದಗುಡ್ಡ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿತ್ತು. ಹಿಟಾಚಿ ವಾಹನದ ಎರಡು ಡಿಸ್ಟ್ರೇಗಳು ಹಾಗೂ ಒಂದು ಕಂಟ್ರೋಲ್ ಬೋರ್ಡ್ ಸೇರಿದಂತೆ ಅಂದಾಜು ₹12 ಲಕ್ಷ ಮೌಲ್ಯದ ಸಾಮಗ್ರಿಗಳನ್ನು ಕಳ್ಳರು ಕಳವು ಮಾಡಿದ್ದರು.
ಪ್ರಕರಣದ ತನಿಖೆ ಕೈಗೊಂಡ ಪೊಲೀಸರು ನಿರಂತರ ಕಾರ್ಯಾಚರಣೆ ನಡೆಸಿ ಆಂಧ್ರಪ್ರದೇಶ ರಾಜ್ಯದ ಅನಕಪಲ್ಲಿ ಜಿಲ್ಲೆಯ ಜಗನಾಧಪುರಂ ಗ್ರಾಮದ ಶೇಖರ ತಂದೆ ಮೊದಿನಾಯ್ಡು ರೆಡ್ಡಿ (28) ಹಾಗೂ ವಡಾದಿ ಗ್ರಾಮದ ಹೇಮಸಾಯಿ ತಂದೆ ರಾಜು ತೋರಾತಿ (22) ಎಂಬುವವರನ್ನು ಬಂಧಿಸಿದ್ದಾರೆ. ಆರೋಪಿಗಳಿಂದ ಕಳುವಾಗಿದ್ದ ಸಂಪೂರ್ಣ ಸಾಮಗ್ರಿಯನ್ನು ವಶಪಡಿಸಿಕೊಂಡಿದ್ದಾರೆ.ಬಾಗಲಕೋಟೆ ಜಿಲ್ಲಾ ಪೊಲೀಸ್ ಅಧೀಕ್ಷಕರು, ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಹಾಗೂ ಹುನಗುಂದ ಡಿವೈಎಸ್ಪಿ ಅವರ ಮಾರ್ಗದರ್ಶನದಲ್ಲಿ ಬದಾಮಿ ವೃತ್ತದ ಸಿಪಿಐ ಕರಿಯಪ್ಪ ಬನ್ನೆ ಅವರ ನೇತೃತ್ವದಲ್ಲಿ ಗುಳೇದಗುಡ್ಡ ಠಾಣೆಯ ಪಿಎಸ್ಐ ಬಿ.ಬಿ. ಕೊಳ್ಳಿ ಹಾಗೂ ಸಿಬ್ಬಂದಿಗಳಾದ ಎಸ್.ಐ. ಬಿಳೇಕುದರಿ, ಎಂ.ಎಸ್. ಭಾವಿಕಟ್ಟಿ, ವಿಜಯ್ ಎಚ್. ತುಂಬದ, ಬಿ.ಎಂ. ಮೊಘಲನ್ನವರ, ಎಸ್.ಎಸ್. ಮೇಟಿ ಮತ್ತು ಜಿಲ್ಲಾ ಪೊಲೀಸ್ ಕಾರ್ಯಾಲಯದ ತಾಂತ್ರಿಕ ವಿಭಾಗದ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.