ಮನಃ ತಪಸ್ವಿ- ಸುಲಭ ಗ್ರಹಿಕೆಗೆ ದಕ್ಕುವ ಡಾ.ಆರ್‌. ನಾಗೇಶ್‌ ಅವರ ಕವನಗಳು

KannadaprabhaNewsNetwork |  
Published : Oct 24, 2025, 01:00 AM IST
30 | Kannada Prabha

ಸಾರಾಂಶ

ಇವು ಬದುಕಿನ ಆಳವಾದ ಚಿಂತನೆ, ಸೃಷ್ಟಿಯ ರಹಸ್ಯ, ವಿಧಿಯ ಕೈವಾಡ, ಕಾಲದ ಕ್ರೂರತೆ ಕುರಿತ ಕವನಗಳಿವೆ

ಕನ್ನಡಪ್ರಭ ವಾರ್ತೆ ಮೈಸೂರುಮೈಸೂರು ವಿಶ್ವವಿದ್ಯಾನಿಲಯ ಸಂಜೆ ಕಾಲೇಜಿನ ಕನ್ನಡ ಸ್ನಾತಕೋತ್ತರ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿರುವ ಡಾ.ಆರ್‌. ನಾಗೇಶ್‌ ಅವರ ಚೊಚ್ಚಲ ಕವನ ಸಂಕಲನ- ಮನಃ ತಪಸ್ಪಿ.ಇದರಲ್ಲಿ 118 ಕವನಗಳಿವೆ. ಕವಿಯ ಪ್ರಕಾರ ಕಂಡಿದ್ದು, ಕೇಳಿದ್ದು, ಓದಿದ್ದು, ಅವರ ಪರಿಧಿಗೆ ಬಂದ ವಿಷಯ, ವಸ್ತು, ಕಾಡಿದ ನೆನಪುಗಳು, ಅನುಭವಿಸಿದ್ದಕ್ಕೆ ಕಾವು ನೀಡಿ, ಕವನಗಳನ್ನಾಗಿಸಿದ್ದಾರೆ. ಪ್ರಕೃತಿಯ ಬಣ್ಣನೆ, ಪ್ರೀತಿ, ದುಃಖದ ಸಾಮಾಜಿಕ ಘಟನೆಗಳು, ಬದುಕಿನ ಜಂಜಾಟ, ಏಳು-ಬೀಳುಇವು ಬದುಕಿನ ಆಳವಾದ ಚಿಂತನೆ, ಸೃಷ್ಟಿಯ ರಹಸ್ಯ, ವಿಧಿಯ ಕೈವಾಡ, ಕಾಲದ ಕ್ರೂರತೆ ಕುರಿತ ಕವನಗಳಿವೆ. ಜಾತಿಯತೆ, ಅಸ್ಪೃಶ್ಯತೆ, ಕೋಮುವಾದ, ಜಾಗತೀಕರಣದ ಪರಿಣಾಮಗಳು ಕುರಿತು ಕವನಗಳನ್ನು ರಚಿಸಿದ್ದಾರೆ. ದಿನಪತ್ರಿಕೆಗಳು, ಟಿವಿಗಳನ್ನು ಕೂಡ ಬಿಟ್ಟಿಲ್ಲ!. ಅರ್ಥ ಹಾಗೂ ತರ್ಕ ಬದ್ಧವಾದ ಕವನ ರಚಿಸುವ ಮೂಲಕ ಪ್ರಸ್ತುತ ಮುದ್ರಣ, ದೃಶ್ಯ ಮಾಧ್ಯಮಗಳು ಹೇಗಿವೆ? ಎಂಬುದನ್ನು ಪರಿಚಯಿಸಿದ್ದಾರೆ.ಕಾಣದ ಕೈಗಳು, ಮುಗಿಯದ ಧಾರಾವಾಹಿಗಳುಕಾಣಬಹುದಾಗಿದೆ, ಅತ್ತೆ- ಸೊಸೆಯ ಕಾದಾಟಇಬ್ಬರ ಹೆಂಡಿರ ಮುದ್ದಿನ ಒಲವಿನ ಗಂಡ...ಹೀಗೆ ಸಾಗುತ್ತದೆ ಡಾ.ಆರ್. ನಾಗೇಶ್‌ ಅವರ ಕವನ. ಲಯ, ಪ್ರಾಸಗಳಿಗೆ ಸೀಮಿತವಾಗದೇ ಓದುಗರ ಹೃದಯ ತಲುಪುವ, ಭಾವನೆಗಳನ್ನು ಸುಂದರವಾಗಿಸುವ, ಕಲ್ಪನೆಗಳಿಗೆ ಬಣ್ಣ ಹಚ್ಚುವ ಕೆಲಸ ಮಾಡಿದ್ದಾರೆ. ಕೆಲವು ಚುಟುಕುಗಳಂತಿವೆ. ಅಂದರೆ ಎಲ್ಲಾ ಕವಿತೆಗಳು ಒಂದರಿಂದ ನಾಲ್ಕು ಪ್ಯಾರಾಗಳಲ್ಲಿ ಮುಕ್ತಾಯವಾಗುತ್ತದೆ. ಸರಳ ಹಾಗೂ ಸುಂದರವಾಗಿವೆ. ಓದುಗರಿಗೆ ಸುಲಭವಾಗಿ ಅರ್ಥವಾಗುತ್ತವೆ. ಎರಡಕ್ಷರ ಕಲಿಸಿದಾತ ಗುರು ಎಂಬುದರಿಂದ ಹಿಡಿದು ಅಯೋಧ್ಯೆಯಲ್ಲಿ ಬಾಲರಾಮನ ವಿಗ್ರಹ ಕೆತ್ತಿದ ಮೈಸೂರಿನ ಶಿಲ್ಪಿ ಅರುಣ್‌ ಯೋಗಿರಾಜ್‌ವರೆಗೆ, ನೆರಮನೆಯಾಕೆಯ ಕಿರಿಕಿರಿಯಿಂದ ಹಿಡಿದು, ಮೈಸೂರು, ಸಂಜೆ ಕಾಲೇಜು,. ಸಂಕ್ರಾಂತ್ರಿ, ಯುಗಾದಿ ಹಬ್ಬದವರೆಗೆ ಕವನಗಳಿವೆ. ಕವಿಯು ಆಧುನಿಕ ಕಾಲಕ್ಕೆ ತಕ್ಕಂತೆ ಅಪ್‌ಡೇಟ್‌ ಆಗಿದ್ದಾರೆ ಎಂಬುದಕ್ಕೆ ಫೇಸ್‌ ಬುಕ್‌ ಬಗ್ಗೆ ಇರುವ ಕವನ ಗಮನಿಸಬಹುದು.ಈ ಕೃತಿಯನ್ನು ಮೈಸೂರಿನ ದೀಪಕ್‌ ಪ್ರಕಾಶನ ಪ್ರಕಟಿಸಿದೆ. ಹನುಮಂತಪ್ಪ ಬನ್ನಿ ಮುನ್ನುಡಿ ಬರೆದಿದ್ದಾರೆ. ಆಸಕ್ತರು ಡಾ.ಆರ್‌. ನಾಗೇಶ್‌, ಮೊ. 95351 61811 ಸಂಪರ್ಕಿಸಬಹುದು.

PREV

Recommended Stories

ವಾಲ್ಮೀಕಿಗೆ ದೇವರ ಪಟ್ಟ ಕೊಡದಿರುವುದು ದುರಂತ: ಡಾ.ಗೋಪಾಲ
ಚರ್ಚ್‌ನಲ್ಲಿ ನಡೆದಿರುವುದು ಆತ್ಮಹತ್ಯೆಯಲ್ಲ, ಕೊಲೆ: ಆರೋಪ