ತಂತ್ರಜ್ಞಾನದ ಜತೆ ಇಂಗ್ಲಿಷ್ ಭಾಷೆ ಕೌಶಲ್ಯ ಇದ್ದರೆ ವಿಪುಲ ಉದ್ಯೋಗ ಅವಕಾಶ; ಪ್ರಾಧ್ಯಾಪಕ ಗೋವಿಂದರಾಜು

KannadaprabhaNewsNetwork |  
Published : May 16, 2025, 01:51 AM IST
60 | Kannada Prabha

ಸಾರಾಂಶ

ಹೊಸ ಯುಗದ ಆವಿಷ್ಕಾರವಾದ ಕೃತಕ ಬುದ್ಧಿ ಮತ್ತೆ ಆಧಾರಿತ ಚಾಟ್ ಜಿಪಿಟಿಯಂತಹ ಮುಂದುವರಿದ ತಂತ್ರಜ್ಞಾನವು ಉದ್ಯೋಗ ಕ್ಷೇತ್ರದಲ್ಲಿ ಸವಾಲುಗಳನ್ನು ಒಡ್ದುತ್ತಿವೆ. ಹಾಗಾಗಿ, ಕಲೆ, ವಾಣಿಜ್ಯ ಮತ್ತು ವಿಜ್ಞಾನ ಅಥವಾ ಯಾವುದೇ ವಿಭಾಗದ ವಿದ್ಯಾರ್ಥಿಗಳು ತಂತ್ರಜ್ಞಾನದ ಜತೆಗೆ ಇಂಗ್ಲಿಷ್ ಭಾಷೆ ಸಂವಹನ ಕೌಶಲ್ಯವನ್ನು ಹೆಚ್ಚು ಮಾಡಿಕೊಳ್ಳುವಂತೆ ಸಲಹೆ ನೀಡಿದರು.

ಕನ್ನಡಪ್ರಭ ವಾರ್ತೆ ಕೆ.ಆರ್‌. ನಗರ

ತಂತ್ರಜ್ಞಾನದ ಕುರಿತು ಅರಿವಿನ ಜತೆಗೆ ಇಂಗ್ಲಿಷ್ ಭಾಷೆ ಕೌಶಲ್ಯ ವೃದ್ಧಿಸಿಕೊಂಡರೆ ಹೇರಳ ಉದ್ಯೋಗ ಅವಕಾಶ ಸಿಗಲಿವೆ ಎಂದು ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜು ಇಂಗ್ಲಿಷ್ ಸಹಾಯಕ ಪ್ರಾಧ್ಯಾಪಕ ಗೋವಿಂದರಾಜು ಅಭಿಪ್ರಾಯ ವ್ಯಕ್ತಪಡಿಸಿದರು.

ಪಟ್ಟಣದ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಆಂತರಿಕ ಗುಣಮಟ್ಟ ಅಭಿವೃದ್ಧಿ ಕೋಶ ಮತ್ತು ಇಂಗ್ಲಿಷ್ ವಿಭಾಗದ ವತಿಯಿಂದ ಏರ್ಪಡಿಸಿದ್ದ, ಇಂದಿನ ದಿನಮಾನದಲ್ಲಿ ಇಂಗ್ಲಿಷ್ ಸಂವಹನ ಕೌಶಲ್ಯದ ಪಾತ್ರ ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಆಧುನಿಕ ದಿನದಲ್ಲಿ ಜಾಗತಿಕ ಮಟ್ಟದಲ್ಲಿ ಸ್ಪರ್ಧೆ ಎದುರಿಸಬೇಕಾದ ಅನಿವಾರ್ಯ ಸೃಷ್ಟಿಯಾಗಿದೆ. ಹಾಗಾಗಿ, ಇಂಗ್ಲಿಷ್ ಭಾಷೆಯಲ್ಲಿ ಸಂವಹನ ಕೌಶಲ್ಯದ ಪರಿಣಿತಿ ಅಗತ್ಯವಾಗಿದೆ ಎಂದು ಹೇಳಿದರು.

ಹೊಸ ಯುಗದ ಆವಿಷ್ಕಾರವಾದ ಕೃತಕ ಬುದ್ಧಿ ಮತ್ತೆ ಆಧಾರಿತ ಚಾಟ್ ಜಿಪಿಟಿಯಂತಹ ಮುಂದುವರಿದ ತಂತ್ರಜ್ಞಾನವು ಉದ್ಯೋಗ ಕ್ಷೇತ್ರದಲ್ಲಿ ಸವಾಲುಗಳನ್ನು ಒಡ್ದುತ್ತಿವೆ. ಹಾಗಾಗಿ, ಕಲೆ, ವಾಣಿಜ್ಯ ಮತ್ತು ವಿಜ್ಞಾನ ಅಥವಾ ಯಾವುದೇ ವಿಭಾಗದ ವಿದ್ಯಾರ್ಥಿಗಳು ತಂತ್ರಜ್ಞಾನದ ಜತೆಗೆ ಇಂಗ್ಲಿಷ್ ಭಾಷೆ ಸಂವಹನ ಕೌಶಲ್ಯವನ್ನು ಹೆಚ್ಚು ಮಾಡಿಕೊಳ್ಳುವಂತೆ ಸಲಹೆ ನೀಡಿದರು.

ಕನ್ನಡ ಭಾಷೆ ಜತೆಗೆ ಇಂಗ್ಲಿಷ್ ಭಾಷೆ ಮತ್ತು ಅದರೊಂದಿಗೆ ತಂತ್ರಜ್ಞಾನ ಇದ್ದರೆ, ಉದ್ಯೋಗ ದೊರೆಯುವುದಲ್ಲದೆ, ಅಲ್ಲಿ ಗುರುತಿಸಿಕೊಳ್ಳಬಹುದು ಎಂದರು.

ಉದ್ಯೋಗ ಕ್ಷೇತ್ರದಲ್ಲಿ ಬಹು ಮುಖ್ಯ ಭಾಗವೇ ಇಂಗ್ಲಿಷ್ ಭಾಷೆ ಸಂವಹನ ಆಗಿರುವಾಗ, ಭಾಷೆ ಮಡಿವಂತಿಕೆ ಅಗತ್ಯ ಇಲ್ಲ ಎಂದ ಅವರು, ಉದ್ಯೋಗ ಪುರುಷ ಲಕ್ಷಣ ಅಲ್ಲ, ಮನುಷ್ಯ ಲಕ್ಷಣ ಎಂದು ಅಭಿಪ್ರಾಯಪಟ್ಟರು.

ಕಾಲೇಜಿನ ಪ್ರಭಾರ ಪ್ರಾಂಶುಪಾಲ ಪುಟ್ಟಸ್ವಾಮಿ, ಆಂತರಿಕ ಗುಣಮಟ್ಟ ಭರವಸೆ ಕೋಶದ ಸಂಚಾಲಕ ದೀಪು ಕುಮಾರ್, ಇಂಗ್ಲಿಷ್ ವಿಭಾಗದ ಮುಖ್ಯಸ್ಥ ಪಿ. ಪ್ರಶಾಂತ್, ಕನ್ನಡ ವಿಭಾಗದ ಮುಖ್ಯಸ್ಥ ಡಾ,ಬಿ. ಚಂದ್ರಶೇಖರ, ಸಹಾಯಕ ಪ್ರಾಧ್ಯಾಪಕ ಶಿವಾಜಿ, ಅಧ್ಯಾಪಕರು, ಅಧ್ಯಾಪಕೇತರರು, ವಿದ್ಯಾರ್ಥಿಗಳು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹೈಕೋರ್ಟ್‌ ಹೊಸ ಕಟ್ಟಡಕ್ಕೆ 30 ಎಕ್ರೆಕೋರಿಕೆ:ರಾಜ್ಯ ಸರ್ಕಾರಕ್ಕೆ ನೋಟಿಸ್‌
ಬಿಎಂಐಸಿ ಮರುಪರಿಶೀಲಿಸಿ: ರಾಜ್ಯಕ್ಕೆ ಕೋರ್ಟ್‌ ಸೂಚನೆ