ಸಂಕಷ್ಟಗಳಿವೆ ಆದರೆ ಸೇವಾ ಸಂತೃಪ್ತಿ ನಮಗಿದೆ: ದಶರಥ ಸಾವೂರ

KannadaprabhaNewsNetwork |  
Published : Jul 22, 2025, 01:17 AM IST
21ಕೆಪಿಡಿವಿಡಿ01:  | Kannada Prabha

ಸಾರಾಂಶ

ಪತ್ರಿಕಾರಂಗ,ಮಾಧ್ಯಮ ರಂಗ ಇಂದು ಉದ್ಯಮವಾಗಿ ರೂಪುಗೊಂಡಿದೆ.ಆದರೆ ಆದರ್ಶಗಳು ಜೀವಂತವಾಗಿವೆ.ಪತ್ರಕರ್ತರಿಗೆ ಅನೇಕ ಸಂಕಷ್ಟಗಳಿದ್ದರೂ ಸೇವಾ ಸಂತೃಪ್ತಿ ನಮಗಿದೆ ಎಂದು ಟಿವಿ 5 ಚಾನಲ್ ಸಂಪಾದಕ ದಶರಥ ಸಾವೂರ ತಿಳಿಸಿದರು.

ಕನ್ನಡಪ್ರಭ ವಾರ್ತೆ ದೇವದುರ್ಗ

ಪತ್ರಿಕಾರಂಗ,ಮಾಧ್ಯಮ ರಂಗ ಇಂದು ಉದ್ಯಮವಾಗಿ ರೂಪುಗೊಂಡಿದೆ.ಆದರೆ ಆದರ್ಶಗಳು ಜೀವಂತವಾಗಿವೆ.ಪತ್ರಕರ್ತರಿಗೆ ಅನೇಕ ಸಂಕಷ್ಟಗಳಿದ್ದರೂ ಸೇವಾ ಸಂತೃಪ್ತಿ ನಮಗಿದೆ ಎಂದು ಟಿವಿ 5 ಚಾನಲ್ ಸಂಪಾದಕ ದಶರಥ ಸಾವೂರ ತಿಳಿಸಿದರು.

ಪಟ್ಟಣದ ಖೆಣೇದ್ ಫಂಕ್ಶನ್ ಹಾಲ್ನಲ್ಲಿ ಸೋಮವಾರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದರು. ನಮಗಾಗಿಯೇ ಇರುವ ವಾರ್ತಾ ಮತ್ತು ಪ್ರಚಾರ ಇಲಾಖೆ ಪರಿಣಾಮಕಾರಿಯಾಗಿ ಸೇವಾ ಸೌಲಭ್ಯ ನೀಡದಿರುವದು ಖೇದದ ಸಂಗತಿ.ಜೊತೆಗೆ ನಮ್ಮ ಸಹಾಯ ಪಡೆದು ರಾಜಕೀಯದಲ್ಲಿ ನಾಯಕರಾಗಿ ಬೆಳೆದ ಮೇಲೆ ಬದಲಾಗುತ್ತಾರೆ.ಹೀಗಾಗಿ ನಮ್ಮ ನಿಷ್ಠೆ ಸಮಾಜ ಸೇವೆಗೆ ಮುಡುಪಾಗಿದೆ.ಹತ್ತಿರುವ ಏಣಿಯನ್ನು ಮರೆಯುವವರೇ ಹೆಚ್ಚು.

ಈ ಉದ್ಯೋಗವನ್ನು ನಾವೇ ಆಯ್ಕೆ ಮಾಡಿಕೊಂಡಿದ್ದೇವೆ. ನಮ್ಮ ವೇಷಭೂಷಣ ಶ್ರೀಮಂತಿಕೆಯನ್ನು ತೋರಿಸುತ್ತದೆ. ಜನರ ಮತ್ತು ಸಮಾಜದ ಕಲ್ಯಾಣಕ್ಕಾಗಿ ಸುದ್ದಿ ಬರೆಯುತ್ತೇವೆ.ಹೀಗಾಗಿ ಟೀಕೆಗಳಿಗೆ ಗುರಿಯಾಗುತ್ತೇವೆ.ಆದರೆ ಒಳಗೆ ನಮ್ಮ ನೋವು ಯಾರಿಗೂ ಹೇಳಿಕೊಳ್ಳುವಂತಿಲ್ಲ.ಅದರಲ್ಲೂ ಗ್ರಾಮೀಣ ಪ್ರದೇಶ ದ ಪತ್ರಕರ್ತರ ಗೋಳು ಯಾರೂ ಕೇಳದಂತಾಗಿದೆ.

ಸಾಹಿತ್ಯ, ಕ್ರೀಡೆ, ಆರೋಗ್ಯ, ಗ್ರಾಮೀಣಾಭಿವೃದ್ಧಿ, ಕೃಷಿ, ಕ್ರೀಡೆ ಹೀಗೆ ಹಲವು ಹತ್ತಾರು ಕ್ಷೇತ್ರಗಳಿಗೆ ಮಾಧ್ಯಮದ ಕೊಡುಗೆ ಇದೆ. ಪೈಪೋಟಿ ಯುಗದಲ್ಲಿ ಜನರು ನೀರಿಕ್ಷಿಸುವದನ್ನು, ಬಯಸುವ ವಿಷಯಗಳನ್ನು ನೀಡಬೇಕಾದ ಅನಿವಾರ್ಯತೆ ಇದೆ. ಹೀಗಾಗಿ ಈ ಕಾಲಘಟ್ಟದಲ್ಲಿ ರಾಜಕೀಯ ಮತ್ತು ಕೈಂ ಸುದ್ದಿಗಳೇ ಹೆಚ್ಚಾಗಿ ಪ್ರಾಸರಗೊಳ್ಳುತ್ತವೆ ಪ್ರಕಟಗೊಳ್ಳುತ್ತವೆ.

ಇಂತಹ ಸಂದಿಗ್ಧ ಸಂದರ್ಭದಲ್ಲಿ ಪತ್ರಕರ್ತರು ವಿಶ್ವಾಸರ್ಹತೆಗಳಿಂದ ಸೇವೆ ಸಲ್ಲಿಸಿ ಪತ್ರಿಕೆ ಮತ್ತು ಮಾಧ್ಯಮ ರಂಗವನ್ನು ಉಳಿಸಿಕೊಳ್ಳಬೇಕಾಗಿದೆ ಎಂದರು.

ಸಮಾರಂಭವನ್ನು ಕು.ಗೌರಿ ಜಿ.ನಾಯಕ ಉದ್ಘಾಟಿಸಿದರು. ಎ.ವೆಂಕಟೇಶ ನಾಯಕ ಸ್ಮರಣಾರ್ಥ ನೀಡಲಾಗುತ್ತಿರುವ ದುರ್ಗದ ಸಿರಿ ಪ್ರಶಸ್ತಿಯನ್ನು ಆರ್‌ಡಿಸಿಸಿ ಬ್ಯಾಂಕ್ ನಿರ್ದೇಶಕ ರಾಜಶೇಖರ ವಿ.ನಾಯಕ ವಿತರಿಸಿದರು.

ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಾಬು ಅಲಿ ಕೆ.ಅಧ್ಯಕ್ಷತೆ ವಹಿಸಿದ್ದರು. ಪೊಲೀಸ್ ಇನ್ಸ್‌ಪೆಕ್ಟರ್ ಮಂಜುನಾಥ ಸಿಲವೇರಿ, ಕೆಬಿಜೆಎನ್ಎಲ್ ಎಇಇ ಉಪೇಂದ್ರ ಕುಮಾರ ಮ್ಯಾತ್ರಿ ಮಾತನಾಡಿದರು. ಇದೇ ವೇಳೆ ಪತ್ರಕರ್ತರಾದ ನಾಗರಾಜ ಮನ್ನಾಪೂರಿ, ಮಹಾಂತೇಶ ಹಿರೇಮಠ, ನಿರಂಜನ ಮಸರಕಲ್ ಹಾಗೂ ಸಚ್ಚಿದಾನಂದ ನಾಯಕರಿಗೆ ‘ದುರ್ಗದ ಸಿರಿ’ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷೆ ಮಲ್ಲಮ್ಮ ಶಾಂತಪ್ಪ ಹೆಂಬೆರಾಳ,ಉಪಾಧ್ಯಕ್ಷೆ ಲಕ್ಷ್ಮೀ ಈರಪ್ಪ ನಾಯಕ,ಎಪಿಎಂಸಿ ಅಧ್ಯಕ್ಷ ಆದನಗೌಡ ಪಾಟೀಲ್ ಬುಂಕಲದೊಡ್ಡಿ,ಪಿಕಾರ್ಡ ಬ್ಯಾಂಕ್ ಅಧ್ಯಕ್ಷ ಶರರಣಗೌಡ ಹಂಚಿನಾಳ,ಪುರಸಭೆ ಮುಖ್ಯಧಿಕಾರಿ ಹಂಪಯ್ಯ ಕೆ.,ಕ್ಷೇತ್ರ ಶಿಕ್ಷಣಾಧಿಕಾರಿ ಮಹಾದೇವಯ್ಯ, ಕೆಬಿಜೆಎನ್ಎಲ್ ಎಇಇ ಶ್ರೀಧರ ಬಲ್ಲಿದವ, ಸಿಪಿಐ ಎನ್.ವೈ.ಗುಂಡುರಾವ್, ಸಂಘದ ಪ್ರಧಾನ ಕಾರ್ಯದರ್ಶಿ ನಾಗರಾಜ ಸುಟ್ಟಿ ಉಪಸ್ಥಿತರಿದ್ದರು. ಪತ್ರಕರ್ತರಾದ ಬಸವರಾಜ ಬ್ಯಾಗವಾಟ, ಅಮರೇಶ ಚಿಲ್ಕಾರಾಗಿ, ನಾಗರಾಜ ಪೂಜಾರಿ ನಿರ್ವಹಿಸಿದರು.

PREV

Latest Stories

ಹವ್ಯಕ ಪ್ರತಿಷ್ಠಾನ ವಾರ್ಷಿಕೋತ್ಸವ ಸಂಪನ್ನ
5 ಪಾಲಿಕೆ ರಚನೆಗೆ ಆಕ್ಷೇಪಣೆ ಸಲ್ಲಿಸಲು ಹಕ್ಕಿದೆ: ಡಿಕೆಶಿ
ಜಿಎಸ್‌ಟಿ ನೋಟಿಸ್‌ಗೆ ಬಿಪಿ ಹೆಚ್ಚಾಗಿದೆ : ವ್ಯಾಪಾರಸ್ಥರು