ಅಧ್ಯಾತ್ಮದ ಹಾದಿಯಲ್ಲಿ ಅಡ್ಡದಾರಿಗಳಿಲ್ಲ

KannadaprabhaNewsNetwork |  
Published : Nov 01, 2025, 02:00 AM IST
ಸಿಕೆಬಿ-1 ಯೋಗ ಮತ್ತು ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಪೊಲೆಂಡ್‌ನ ಮಾರಿಯಾ ಆಂಡ್ರೆಜ್ ಜಿಕ್  ಅವರಿಗೆ ಸದ್ಗುರು ಶ್ರೀ ಮಧುಸೂದನ ಸಾಯಿ ಅವರು ಒಂದು ಜಗತ್ತು ಒಂದು ಕುಟುಂಬ ಮಾನವೀಯ ಪುರಸ್ಕಾರ ನೀಡಿ ಗೌರವಿಸಿದರು. | Kannada Prabha

ಸಾರಾಂಶ

ಸದ್ಗುರು ಶ್ರೀ ಮಧುಸೂದನ ಸಾಯಿ ಹೇಳುವುದೇನೆಂದರೆ ಈ ಆಧ್ಯಾತ್ಮಿಕ ಹಾದಿಯಲ್ಲಿ ಎಲ್ಲರೂ ಹಾರಲು ಪ್ರಯತ್ನಿಸಿ, ಹಾರಲು ಸಾಧ್ಯವಾಗದಿದ್ದರೆ ನಿಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಓಡಿ, ನಿಮಗೆ ಓಡಲು ಸಾಧ್ಯವಾಗದಿದ್ದರೆ ವೇಗವಾಗಿ ನಡೆಯಿರಿ, ಅದೂ ಸಾಧ್ಯವಾಗದಿದ್ದರೆ ನಿಮ್ಮ ಬಲದಿಂದ ತೆವಳುತ್ತಾ ಹೋಗಿ , ಆದರೆ ಈ ಪ್ರಯಾಣದಲ್ಲಿ ನಿಲ್ಲಬೇಡಿ.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಅಧ್ಯಾತ್ಮದ ಹಾದಿಯಲ್ಲಿ ಯಾವುದೇ ರೀತಿಯ ಅಡ್ಡದಾರಿಗಳು ಇಲ್ಲ. ಇದು ಸಾವಯವ, ನೈಸರ್ಗಿಕ ಹಾಗೂ ವಿಕಾಸದ ಪ್ರಯಾಣವಾಗಿದೆ ಎಂದು ಸದ್ಗುರು ಶ್ರೀ ಮಧುಸೂದನ ಸಾಯಿ ಹೇಳಿದರು. ತಾಲ್ಲೂಕಿನ ಮುದ್ದೇನಹಳ್ಳಿಯ ಸತ್ಯ ಸಾಯಿ ಗ್ರಾಮದಲ್ಲಿ ನಡೆಯುತ್ತಿರುವ ''''''''ಒಂದು ಜಗತ್ತು ಒಂದು ಕುಟುಂಬ ವಿಶ್ವ ಸಾಂಸ್ಕೃತಿಕ ಮಹೋತ್ಸವ''''''''ದ 75 ನೇ ದಿನದ ಆಶೀರ್ವಚನ ನೀಡಿದ ಸದ್ಗುರು, ಪ್ರತಿಯೊಬ್ಬರೂ ಅವರವರ ಆತ್ಮಗಳಿಗೆ ಸರಿಹೊಂದುವ ಪ್ರಕಾರವೇ ಇರುತ್ತಾರೆ. ಒಬ್ಬರನ್ನು ಮತ್ತೊಬ್ಬರಿಗೆ ಹೋಲಿಸಲು ಆಗುವುದಿಲ್ಲ ಎಂದು ಹೇಳಿದರು. ಆಧ್ಯಾತ್ಮಿಕ ಹಾದಿ ಬಿಡಬೇಡಿ

ನಮ್ಮ ಜನರಿಗೆ ಹೇಳುವುದೇನೆಂದರೆ ಈ ಆಧ್ಯಾತ್ಮಿಕ ಹಾದಿಯಲ್ಲಿ ಎಲ್ಲರೂ ಹಾರಲು ಪ್ರಯತ್ನಿಸಿ, ಹಾರಲು ಸಾಧ್ಯವಾಗದಿದ್ದರೆ ನಿಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಓಡಿ, ನಿಮಗೆ ಓಡಲು ಸಾಧ್ಯವಾಗದಿದ್ದರೆ ವೇಗವಾಗಿ ನಡೆಯಿರಿ, ಅದೂ ಸಾಧ್ಯವಾಗದಿದ್ದರೆ ನಿಮ್ಮ ಬಲದಿಂದ ತೆವಳುತ್ತಾ ಹೋಗಿ , ಆದರೆ ಈ ಪ್ರಯಾಣದಲ್ಲಿ ನಿಲ್ಲಬೇಡಿ ಎಂದು ತಿಳಿಸಿದರು.

ಮಾನವೀಯ ಪುರಸ್ಕಾರಯೋಗ ಮತ್ತು ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಪೊಲೆಂಡ್‌ನ ಮಾರಿಯಾ ಆಂಡ್ರೆಜ್ ಜಿಕ್ ಅವರಿಗೆ ''''ಒಂದು ಜಗತ್ತು ಒಂದು ಕುಟುಂಬ ಮಾನವೀಯ ಪುರಸ್ಕಾರ'''' ನೀಡಿ ಗೌರವಿಸಲಾಯಿತು.

ಪೊಲೆಂಡ್‌ನ ಪ್ರತಿನಿಧಿ ಜಾಗ್ವಿಗಾ ಲೆನಾರ್ಟೊವಿಚ್ ಅವರು ತಮ್ಮ ದೇಶದ ಭಾಷೆ, ಕಲೆ, ಸಂಸ್ಕೃತಿ, ಸಂಗೀತ, ಪ್ರಸಿದ್ಧ ತಾಣಗಳು, ನೆಚ್ಚಿನ ಖಾದ್ಯಗಳು, ಸಾಂಪ್ರದಾಯಿಕ ಉಡುಪು ಹಾಗೂ ಇತರೆ ವಿಚಾರಗಳ ಬಗ್ಗೆ ಮಾಹಿತಿ ನೀಡಿದರು. ಮತ್ತೊಬ್ಬ ಪ್ರತಿನಿಧಿ ಕಟಾರ್ಜಿನಾ ಮಾರ್ಗಿಯೆಲ್ಸ್ಕಾ ತಮ್ಮ ಜೀವನದ ಆಧ್ಯಾತ್ಮಿಕ ಪರಿವರ್ತನೆಯ ಅನುಭವ ಹಂಚಿಕೊಂಡರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಭಾಷಣ ಮಾಡಿಕೊಂಡು ಹೋದವನಲ್ಲ, ಪಕ್ಷದ ಎಲ್ಲಾ ಕೆಲ್ಸ ಮಾಡಿದ್ದೇನೆ: ಡಿಕೆಶಿ
ರಾಗಾ-ವೈಷ್ಣವ್‌ ಉದ್ಯೋಗ ಸೃಷ್ಟಿ ‘ಕ್ರೆಡಿಟ್‌ ವಾರ್’