ಕನ್ನಡಪ್ರಭ ವಾರ್ತೆ ಬಾಗಲಕೋಟೆ
ನವನಗರದ ಸೆಕ್ಟರ್ ನಂ.3ರಲ್ಲಿರುವ ಶ್ರೀಪ್ರಸನ್ನ ವೆಂಕಟದಾಸರ ಸ್ಮಾರಕ ಭವನದಲ್ಲಿ ರಾಷ್ಟ್ರೀಯ ವೇದವಿಜ್ಞಾನ ಸಂಸ್ಥೆ ಟ್ರಸ್ಟ್, ಶ್ರೀಪ್ರಸನ್ನ ವೆಂಕಟ ಸಾಂಸ್ಕೃತಿಕ ಮತ್ತು ಚಾರಿಟಬಲ್ ಟ್ರಸ್ಟ್ ಹಾಗೂ ಸಂಶೋಧನಾ ಟ್ರಸ್ಟ್‌ಗಳಿಂದ ಶನಿವಾರ ಹಮ್ಮಿಕೊಂಡಿದ್ದ 14ನೇ ಒಂದು ದಿನದ ಹರಿದಾಸ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು. ಜಾತಿ ವಿಷಬೀಜಗಳನ್ನು ಬಿತ್ತುವ ಮೂಲಕ ಹಿಂದೂ ಸಮಾಜ ಹಾಗೂ ದೇಶವನ್ನು ವಿಭಜಿಸುವ ಯತ್ನಗಳು ನಡೆದಿವೆ ಎಂದರು.
ಹಿಂದುಗಳಲ್ಲಿ ಜಾತಿ ವಿಷಬೀಜವನ್ನು ಬಿತ್ತುವ, ದೇಶವನ್ನು ವಿಭಜಿಸುವ ಯತ್ನಗಳು ನಡೆದಿವೆ. ಅದಕ್ಕೆ ಕಡಿವಾಣ ಹಾಕಲು ಧಾರ್ಮಿಕ ಮುಖಂಡರೇ ಮುಂದಾಗಬೇಕು. ಪೇಜಾವರಮಠದ ಶ್ರೀವಿಶ್ವೇಶತೀರ್ಥ ಸ್ವಾಮೀಜಿ ಅವರು ಸಮುದಾಯಕ್ಕೆ ಮೀಸಲಾಗದೆ. ಇಡೀ ಹಿಂದೂ ಸಮಾಜದ ಮಾರ್ಗದರ್ಶಕರಾಗಿದ್ದರು ಎಂದು ಹೇಳಿದರು.ಸಮಗ್ರ ಹಿಂದೂ ಸಮಾಜಕ್ಕೆ ಮಾರ್ಗದರ್ಶನ ಮಾಡುವ ಸಾಮರ್ಥ್ಯ ವಿಪ್ರರಿಗೆ ಇದೆ. ಈ ಸಮಾಜದ ಬಗ್ಗೆ ನನಗೆ ಅಪಾರವಾದ ಗೌರವವಿದ್ದು, ಬ್ರಾಹ್ಮಣರ ಪರಿಸರದಲ್ಲೇ ನಾನು ಬೆಳೆದು ಬಂದಿದ್ದೇನೆ. ವಿಪ್ರರಿಗೆ ಸಕಲ ಜ್ಞಾನವಿದ್ದು, ಸಂಘಟನೆ ಇಲ್ಲದಂತೆ ಆಗಿದೆ. ಸಮಾಜದ ವಿರುದ್ಧ ಟೀಕೆಗಳು ಬಂದರೆ ಅದಕ್ಕೆ ತಕ್ಕದಾಗಿ ಉತ್ತರ ನೀಡುವ ಕೆಲಸವನ್ನು ಸಮಾಜ ಮಾಡಲೇಬೇಕೆಂದು ಕಿವಿಮಾತು ಹೇಳಿದರು.
ಟ್ರಸ್ಟ್ ಅಧ್ಯಕ್ಷ ಡಾ.ಸುಭಾಸ್ ಕಾಖಂಡಕಿ ಮಾತನಾಡಿ, ವಚನ ಸಾಹಿತ್ಯದಷ್ಟೇ ಮಹತ್ವ ದಾಸಸಾಹಿತ್ಯಕ್ಕೂ ಸಿಗಬೇಕಿದೆ. ಕನಕದಾಸರ ಅಧ್ಯಯನ ಪೀಠ ಹೊರತಾಗಿ ಇತರೆ ಯಾವುದೇ ದಾಸರ ಕೃತಿಗಳ ಕುರಿತಾದ ಅಧ್ಯಯನಪೀಠಗಳು ರಚನೆ ಆಗಿಲ್ಲ. ನಮಗೆ ಪ್ರಸನ್ನ ವೆಂಕಟದಾಸರ ಅಧ್ಯಯನಪೀಠ ಆರಂಭಿಸುವ ಗುರಿಯಿದ್ದು, ಸರ್ಕಾರದಿಂದ ನೆರವು ಸಿಗಬೇಕೆಂದು ಹೇಳಿದರು. ಮುಂದಿನ 15 ದಿನದಲ್ಲಿ ಅಧ್ಯಯನ ಪೀಠ, ಗ್ರಂಥಾಲಯ ಕಟ್ಟಡದ ಕಾಮಗಾರಿ ಆರಂಭವಾಗಲಿದೆ ಎಂದು ಘೋಷಿಸಿದರು.
ಹಿರಿಯ ಸಂಶೋಧಕ ಡಾ.ಕೃಷ್ಣ ಕೋಲ್ಹಾರ ಕುಲಕರ್ಣಿ ಪಂ.ಬಿಂದುಮಾಧವಾಚಾರ್ಯ ನಾಗಸಂಪಿಗೆ, ಹಿರಿಯ ಗಾಯಕ ಪಂ.ಅನಂತ ಕುಲಕರ್ಣಿ, ಡಾ.ರೇಖಾ ಕಾಖಂಡಕಿ, ಡಾ. ವಿಠ್ಠಲಾಚಾರ್ಯ ಕಾಖಂಡಕಿ, ಗುರುರಾಜ ಕುಲಕರ್ಣಿ ಮತ್ತಿತರರು ಇದ್ದರು.
ಕೋಟ್ಸ್.....