ಮಾಗಡಿ: ತಾಲೂಕು ಗಂಗಾಮತಸ್ಥ ಸಂಘ ಕಾನೂನು ಬದ್ಧವಾಗಿ ಕಾರ್ಯನಿರ್ವಹಿಸುತ್ತಿದ್ದು, ಯಾವುದೇ ಅವ್ಯವಹಾರ ನಡೆದಿಲ್ಲ, ಸಂಘದ ವಿರುದ್ಧ ಕೆಲವರು ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ತಾಲೂಕು ಗೌರವಾಧ್ಯಕ್ಷ ಕುಮಾರಸ್ವಾಮಿ ಸ್ಪಷ್ಟನೆ ನೀಡಿದರು.
ಪಟ್ಟಣದ ತಿರುಮಲೆಯ ಗಂಗಾಮತಸ್ಥ ಸಂಘದ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸೊಸೈಟಿ ಗಂಗಣ್ಣ, ಶಾಂತರಾಜು, ಪಿ.ವಿ.ಸೀತಾರಾಂ ನಮ್ಮ ಸಂಘಕ್ಕೆ ಕಳಂಕ ಬರುವ ರೀತಿಯಲ್ಲಿ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ. ಸಂಘದ ಆರಂಭದಿಂದಲೂ ಇಲ್ಲಿಯವರೆಗೂ ಎಲ್ಲಾ ರೀತಿಯ ದಾಖಲೆಗಳನ್ನು ನಿರ್ವಹಿಸುತ್ತಿದ್ದೇವೆ. 15 ಲಕ್ಷ ಹಣ ದುರ್ಬಳಸಿಕೊಂಡಿದ್ದೇವೆಂಬ ಆರೋಪವೂ ಸತ್ಯಕ್ಕೆ ದೂರವಾದುದು ಎಂದರು.ಹೆಚ್.ಎಂ.ರೇವಣ್ಣ ಸಚಿವರಾಗಿದ್ದ ಅವಧಿಯಲ್ಲಿ ಸರ್ಕಾರದಿಂದ ಸಮುದಾಯ ಭವನ ನಿರ್ಮಾಣಕ್ಕೆ 25 ಲಕ್ಷ ಹಣ ಬಿಡುಗಡೆ ಮಾಡಿದ್ದು, ಆ ವಿಷಯದಲ್ಲಿಯೂ ಆರೋಪ ಮಾಡುತ್ತಲೇ ಬಂದವರು ಇದೀಗ ಸಮುದಾಯ ಭವನ ಉದ್ಘಾಟನೆ ಸಮಯದಲ್ಲಿ ತೊಂದರೆ ಕೊಡುತ್ತಿದ್ದಾರೆ. ಇವರ ಆರೋಪಗಳೆಲ್ಲವೂ ಸುಳ್ಳಿನಿಂದ ಕೂಡಿವೆ. ಶ್ರೀರಂಗನಾಥ ಸ್ವಾಮಿ ಮೇಲೆ ಆಣೆ ಮಾಡಿ ಹೇಳುತ್ತೇನೆ ಸಂಘದಲ್ಲಿ ಹಣ ದುರುಪಯೋಗವಾಗಿಲ್ಲ ಎಂದು ಹೇಳಿದರು.
ಸೊಸೈಟಿ ಗಂಗಣ್ಣ ಸಮುದಾಯ ಭವನ ಕಟ್ಟಡಕ್ಕೆ ಬೇಕಾದ ಮರಳು, ಸೀಮೆಂಟ್, ಜಲ್ಲಿ ಎಲ್ಲಾ ವಸ್ತುಗಳನ್ನು ತಾವೇ ತಂದಿದ್ದು ಹೆಚ್ಚುವರಿ ಲೋಡ್‌ಗಳ ಲೆಕ್ಕ ಹೇಳಿ ಸಂಘಕ್ಕೆ ಎರಡು ಲಕ್ಷದವರೆಗೂ ಹಣ ದುರ್ಬಳಕೆ ಮಾಡಿದ್ದಾರೆ. ಈಗ ನಮ್ಮ ವಿರುದ್ಧವೇ ಆರೋಪ ಮಾಡುತ್ತಿದ್ದು, ಮಾಗಡಿ ಶ್ರೀರಂಗನಾಥ ಹೆಸರಿನಲ್ಲಿ ಸೇವೆ ಮಾಡುತ್ತಿದ್ದು ನಮ್ಮ ಸಂಘದ ಯಾವುದೇ ಸದಸ್ಯರು ಒಂದು ರೂಪಾಯಿ ಕೂಡ ಹಣ ದುರುಪಯೋಗ ಮಾಡಿಲ್ಲ ಎಂದು ಸ್ಪಷ್ಟನೆ ನೀಡಿದರು.ಪೂರ್ವಿಕರ ಕಾಲದಿಂದಲೂ ಶ್ರೀರಂಗನಾಥಸ್ವಾಮಿ ಶ್ರೀಮುಖ ಸೇವೆಯಲ್ಲಿ ಆಹ್ವಾನ ಪತ್ರಿಕೆಯಲ್ಲಿ ಗಂಗಾಮತಸ್ಥರ ಹೆಸರು ಹಾಕಬೇಕಿತ್ತು. ಆದರೆ ದೇವಸ್ಥಾನದ ಕಮಿಟಿಗೆ ಸುಳ್ಳು ಹೇಳಿ ಇವರ ಹೆಸರು ಬರುವಂತೆ ಮಾಡಿ, ಗಂಗಾಮತಸ್ಥ ಸಮಾಜಕ್ಕೆ ಮೋಸ ಮಾಡಿದ್ದಾರೆ. ಅದೇ ರೀತಿ ಶ್ರೀಮುಖ ಸೇವೆ ಗಂಗಾಮತಸ್ಥ ಸಮಾಜದ ಹೆಸರಿನಲ್ಲೇ ನಡೆಯಬೇಕಿದೆ ಎಂದು ಕುಮಾರಸ್ವಾಮಿ ಒತ್ತಾಯಿಸಿದರು.
ಈ ವೇಳೆ ಸಂಘದ ಅಧ್ಯಕ್ಷ ಕೃಷ್ಣಪ್ಪ, ಕಾರ್ಯಕಾರಿ ಸಮಿತಿ ಸದಸ್ಯರಾದ ಧನಂಜಯ್, ದಯಾನಂದ್, ಪ್ರಧಾನ ಕಾರ್ಯದರ್ಶಿ ಸುನಿಲ್, ಖಜಾಂಚಿ ಸಿದ್ದರಾಜು, ಉಪಾಧ್ಯಕ್ಷ ಯಾಲಕ್ಕಯ್ಯ, ಗೌತಮ್, ಸದಸ್ಯರಾದ ನಾಗರಾಜು, ಕುಮಾರಸ್ವಾಮಿ, ಕಲ್ಯ ಶಾಂತರಾಜು, ರವಿ, ರಮೇಶ್, ಬೈರಪ್ಪ, ಮುನಿರಾಜು, ಮಲ್ಲಯ್ಯ, ಮೋಹನ್, ಹನುಮಂತಯ್ಯ, ಚಂದ್ರ, ಮದನ್, ಗೋಪಾಲ್, ಕೃಷ್ಣ ಹಾಜರಿದ್ದರು.ಫೋಟೊ 11ಮಾಗಡಿ1 :
ಮಾಗಡಿಯ ತಿರುಮಲೆಯಲ್ಲಿ ಗಂಗಾಮತಸ್ಥ ಸಂಘದ ಗೌರವಾಧ್ಯಕ್ಷ ಕುಮಾರಸ್ವಾಮಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.