ಗೃಹಸಚಿವ ಪರಮೇಶ್ವರ್‌ ಏಳ್ಗೆ ಕುಗ್ಗಿಸುವ ಷಡ್ಯಂತ್ರ ನಡೆದಿದೆ

KannadaprabhaNewsNetwork | Published : May 24, 2025 12:11 AM
There is a conspiracy to dethrone Home Minister Parameshwara.
Follow Us

* ಖಂಡನೆ

- ಭಾರತೀಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಪ್ರದೀಪ ನಾಟೇಕರ ಆರೋಪ । ಇ.ಡಿ ದಾಳಿ ಹಿಂಪಡೆಯದಿದ್ದರೆ ಉಗ್ರ ಹೋರಾಟಕನ್ನಡಪ್ರಭ ವಾರ್ತೆ, ಬೀದರ್‌

ರಾಜ್ಯದ ಗೃಹಸಚಿವ ಜಿ. ಪರಮೇಶ್ವರ ಅವರ ಅಧ್ಯಕ್ಷತೆಯಲ್ಲಿ ನಡೆಯುತ್ತಿರುವ ಸಿದ್ಧಾರ್ಥ ಶಿಕ್ಷಣ ಸಂಸ್ಥೆ ಸೇರಿದಂತೆ ಅವರ ಮನೆ ಮೇಲೆ ಇ.ಡಿ ದಾಳಿ ಮಾಡಿರುವದರ ಹಿಂದೆ ಅವರನ್ನು ರಾಜಕೀಯವಾಗಿ ಮುಗಿಸುವ ಷಡ್ಯಂತ್ರ ನಡೆಯುತ್ತಿದೆ ಎಂದು ದಲಿತ ಸಮಾಜದ ಮುಖಂಡರು ಹಾಗೂ ಭಾರತೀಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಪ್ರದೀಪ ನಾಟೇಕರ ತಿಳಿಸಿದರು.ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಡಾ.ಜಿ.ಪರಮೇಶ್ವರ ಅವರು ದಲಿತ ಸಮಾಜದ ಕಣ್ಣು. ಅವರ ಶಿಕ್ಷಣ ಸಂಸ್ಥೆಯಿಂದ ಇದುವರೆಗೆ 40 ಸಾವಿರ ಎಂಜಿನಿಯರ್‌ ಮತ್ತು 10 ಸಾವಿರ ವೈದ್ಯರು ಉತ್ತೀರ್ಣರಾಗಿದ್ದಾರೆ. ಅಲ್ಲದೆ ಅವರು ಮುಂದಿನ ಸಿಎಂ ಆಗುವ ಎಲ್ಲಾ ಅರ್ಹತೆ ಹೊಂದಿದ್ದಾರೆ. ಈ ಕಾರಣಕ್ಕಾಗಿ ದಲಿತ ಸಮುದಾಯದ ಒಬ್ಬ ಉತ್ತಮ ನಾಯಕನನ್ನು ತುಳಿಯುವ ಷಡ್ಯಂತ್ರ ಬಿಜೆಪಿ ಮತ್ತು ಆರ್‌ಎಸ್‌ಎಸ್‌ ಮಾಡುತ್ತಿದೆ ಎಂದು ಆರೋಪಿಸಿದರು.ಇದನ್ನು ನಾವು ಉಗ್ರವಾಗಿ ಖಂಡಿಸುತ್ತೇವೆ. ಇ.ಡಿ ದಾಳಿ ಹಿಂಪಡೆಯದಿದ್ದರೆ ರಾಜ್ಯದಾದ್ಯಂತ ಉಗ್ರ ಹೋರಾಟ ನಡೆಸುತ್ತೇವೆ ಎಂದು ನಾಟೇಕರ ತಿಳಿಸಿದರು.ಸಮಾಜದ ಮುಖಂಡರು ಹಾಗೂ ಹಿರಿಯ ಸಾಹಿತಿ ಡಾ.ಕಾಶಿನಾಥ ಚಲವಾ ಮಾತನಾಡಿ, ಡಾ. ಅಂಬೇಡ್ಕರ್‌ ಅವರು ದಲಿತರನ್ನು ಸಾಮಾಜಿಕವಾಗಿ, ಆರ್ಥಿಕ ವಾಗಿ ಮತ್ತು ರಾಜಕೀಯವಾಗಿ ಹಿಂದುಳಿದವರಿಗೆ ಮೇಲೆ ತಂದರು. ಅದೇ ರೀತಿ ಗೃಹಸಚಿವ ಜಿ. ಪರಮೇಶ್ವರ ಅವರು ಅವರ ತಂದೆ ಸ್ಥಾಪಿಸಿದ ಸಿದ್ಧಾರ್ಥ ಶಿಕ್ಷಣ ಸಂಸ್ಥೆಯನ್ನು ಸಮರ್ಥವಾಗಿ ನಡೆಸಿಕೊಂಡು ಹೋಗುತ್ತಿದ್ದಾರೆ. ಇಂತಹ ಒಳ್ಳೆಯ ಕಾರ್ಯ ಮಾಡುವ ಪರಮೇಶ್ವರ್‌ ಅವರನ್ನು ರಾಜಕೀಯವಾಗಿ ಮತ್ತು ನೈತಿಕವಾಗಿ ಕುಗ್ಗಿಸುವ ಕಾರ್ಯ ನಡೆಯುತ್ತಿದೆ ಎಂದು ಆರೋಪಿಸಿದರು.ಅಲ್ಲದೇ, ಪಂಚಾಯತರಾಜ್‌ ಸಚಿವ ಪ್ರಿಯಾಂಕ್‌ ಖರ್ಗೆ ಅವರಿಗೆ ಛಲವಾದಿ ನಾರಾಯಣಸ್ವಾಮಿ ಅವರು ನಾಯಿಗೆ ಹೋಲಿಸಿದ್ದನ್ನು ತೀವ್ರವಾಗಿ ಖಂಡಿಸು ತ್ತೇವೆ. ನಾರಾಯಣಸ್ವಾಮಿ ಅವರು ಮಾತನಾಡುತ್ತಿಲ್ಲ. ಬದಲಾಗಿ ಅವರ ಹಿಂದೆ ಕಲಿಸಿಕೊಡುವವರಿದ್ದಾರೆ ಎಂದು ಅನುಮಾನಿಸಿದರು.ದಲಿತ ಮುಖಂಡರಾದ ಸುಂದರ ಜ್ಞಾನಿ, ಸೂರ್ಯಕಾಂತ ಸಾದುರೆ, ಶರಣು ಫುಲೆ, ನಾಗಸೇನ ಗಾಯಕವಾಡ, ರಾಜಕುಮಾರ ಪ್ರಸಾದೆ, ಭೀಮರಾವ್‌ ಮಾಲಗತ್ತಿ, ಪಂಡಿತ ಭಂಗೂರೆ ಸೇರಿದಂತೆ ಹಲವರು ಉಪಸ್ಥಿತರಿದ್ದರು.

----