ಹರಿಶಂಕರಬಂಡಿ ಗ್ರಾಮದಲ್ಲಿ ನಮ್ಮ ಮನೆ ಬಂಡೆಗಳ ಮೇಲಿವೆ, ನಾವೂ ಅಲ್ಲಿ ವಾಸಿಸುವುದು ಕಷ್ಟಕರವಾಗುತ್ತಿದೆ. ನಮಗೆ ಗ್ರಾಮದ ಸರ್ಕಾರಿ ಜಾಗದಲ್ಲಿ ವಾಸಿಸಲು ನಿವೇಶನ ನೀಡಿ ಎಂದು ತಾಪಂ ಇಒ ಬೆಟದೇಶ ಮಾಳೆಕೊಪ್ಪ ಎದುರು ಹರಿಶಂಕರಬಂಡಿ ಗ್ರಾಮಸ್ಥರು ಮನವಿ ಮಾಡಿಕೊಂಡಿದ್ದಾರೆ.
ಕುಕನೂರು: ಹರಿಶಂಕರಬಂಡಿ ಗ್ರಾಮದಲ್ಲಿ ನಮ್ಮ ಮನೆ ಬಂಡೆಗಳ ಮೇಲಿವೆ, ನಾವೂ ಅಲ್ಲಿ ವಾಸಿಸುವುದು ಕಷ್ಟಕರವಾಗುತ್ತಿದೆ. ನಮಗೆ ಗ್ರಾಮದ ಸರ್ಕಾರಿ ಜಾಗದಲ್ಲಿ ವಾಸಿಸಲು ನಿವೇಶನ ನೀಡಿ ಎಂದು ತಾಪಂ ಇಒ ಬೆಟದೇಶ ಮಾಳೆಕೊಪ್ಪ ಎದುರು ಹರಿಶಂಕರಬಂಡಿ ಗ್ರಾಮಸ್ಥರು ಮನವಿ ಮಾಡಿಕೊಂಡಿದ್ದಾರೆ.
ತಾಲೂಕಿನ ಹರಿಶಂಕರಬಂಡಿ ಗ್ರಾಮದ ಸಾರ್ವಜನಿಕ ಶೌಚಾಲಯದ ಸಮಸ್ಯೆಯನ್ನು ಆಲಿಸಲು ಹೋಗಿದ್ದ ಇಒ ಅವರ ಮುಂದೆ ಹರಿಶಂಕರಬಂಡಿ ಗ್ರಾಮಸ್ಥರು ಅಳಲು ತೋಡಿಕೊಂಡರು. ನಮ್ಮ ಮನೆಗಳು ಬಂಡೆಗಳ ಮೇಲಿರುವುದರಿಂದ ನೀರಿನ ಸೌಲಭ್ಯ, ಶೌಚಾಲಯಗಳ ಸಮಸ್ಯೆ ಹಾಗೂ ಮನೆ ಕಟ್ಟಲು ಸಾಮಗ್ರಿ ತರಲು ತೊಂದರೆ ಆಗುತ್ತದೆ. ಅಲ್ಲದೆ ಮನೆಗಳು ಬಂಡೆಗಳ ಮೇಲಿರುವುದರಿಂದ ಬೇಸಿಗೆ ವೇಳೆ ತೊಂದರೆ ಸಹ ಆಗುತ್ತಿದೆ. ಆ ನಿಟ್ಟಿನಲ್ಲಿ ನಮಗೆ ಗ್ರಾಮದಲ್ಲಿರುವ ಸರ್ಕಾರಿ ಜಾಗದಲ್ಲಿ ನಿವೇಶನ ಮಾಡಿ ನೀಡಬೇಕು ಎಂದು ಒತ್ತಾಯಿಸಿದರು.
ಬಳಿಕ ಬೆಟದಪ್ಪ ಮಾಳೆಕೊಪ್ಪ ಅವರು ಸಾರ್ವಜನಿಕರ ಶೌಚಾಲಯಕ್ಕೆ ಸಂಬಂಧಿಸಿದ ಸಮಸ್ಯೆ ಪರಿಶೀಲಿಸಿದರು. ಸಮಸ್ಯೆಯನ್ನು ಶೀಘ್ರ ಪರಿಹರಿಸುವಂತೆ ಬಳಗೇರಿ ಪಿಡಿಒ ಪ್ರಕಾಶ ಶಿಡ್ನಳ್ಳಿ ಅವರಿಗೆ ನಿರ್ದೇಶನ ನೀಡಿದರು.
ಕೆಲವು ಗ್ರಾಮಸ್ಥರು, ನಮಗೆ ವಾಸಿಸಲು ಸ್ವಂತ ಮನೆ ಇಲ್ಲ. ಆದ್ದರಿಂದ ಸರ್ಕಾರಿ ಜಾಗದಲ್ಲಿ, ಗ್ರಾಮಠಾಣಾ ವ್ಯಾಪ್ತಿಯಲ್ಲಿ ವಾಸಿಸಲು ಅವಕಾಶ ಕಲ್ಪಿಸಿಕೊಡಬೇಕು ಎಂದು ಮನವಿ ಸಲ್ಲಿಸಿದರು. ಗ್ರಾಮಸ್ಥರ ಮನವಿ ಸ್ವೀಕರಿಸಿದ ಕಾರ್ಯನಿರ್ವಾಹಕ ಅಧಿಕಾರಿಗಳು, ಸಂಬಂಧಿಸಿದ ನಿಯಮ ಹಾಗೂ ಸರ್ಕಾರದ ಮಾರ್ಗಸೂಚಿಗಳನ್ವಯ ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ಪಿಡಿಒ ಅವರಿಗೆ ಸೂಚಿಸಿದರು.
ಪಿಡಿಒ ಪ್ರಕಾಶ ಶಿಡ್ನಳ್ಳಿ, ಗ್ರಾಪಂ ಸಿಬ್ಬಂದಿ ಹಾಗೂ ಸಾರ್ವಜನಿಕರಿದ್ದರು.
ಸಚಿವರಿಗೆ ಮನವಿ ನೀಡಿದ್ದ ಗ್ರಾಮಸ್ಥರು: ಕಳೆದ ಕೆಲವು ದಿನಗಳ ಹಿಂದೆ ಬಳಗೇರಿ ಗ್ರಾಮದಲ್ಲಿ ಸಚಿವ ಬಸವರಾಜ ರಾಯರಡ್ಡಿ ಅವರ ಬಳಿ ಹರಿಶಂಕರಬಂಡಿ ಗ್ರಾಮಸ್ಥರು, ನಮಗೆ ಶೌಚಾಲಯ ಇಲ್ಲ, ಶೌಚಾಲಯ ಕಟ್ಟಿಸಿಕೊಡ್ರೀ ಎಂದು ಮನವಿ ಮಾಡಿದ್ದರು. ಆ ಹಿನ್ನೆಲೆಯಲ್ಲಿ ಹರಿಶಂಕರಬಂಡಿ ಗ್ರಾಮಕ್ಕೆ ತಾಪಂ ಇಒ ಭೇಟಿ ನೀಡಿದರು. ಈ ವೇಳೆ ಗ್ರಾಮಸ್ಥರು ಶೌಚಾಲಯ ಇದೆ, ಮನೆಗಳಿಗೆ ಬಂಡೆ ಬಿಟ್ಟು ಬೇರೆ ಜಾಗ ನೀಡಿ ಎಂದು ಮನವಿ ಮಾಡಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.