ಕನ್ನಡಪ್ರಭ ವಾರ್ತೆ ಸವದತ್ತಿ
ಪಟ್ಟಣದ ಗುರ್ಲಹೊಸೂರಿನ ಶಾಸಕರ ಮಾದರಿ ಶಾಲೆಯಲ್ಲಿ ಶಾಸಕ ವಿಶ್ವಾಸ ವೈದ್ಯರವರ ಹುಟ್ಟುಹಬ್ಬದ ನಿಮಿತ್ತ ಎಸ್.ಜಿ.ಎಸ್ ಗೆಳೆಯರ ಬಳಗ ಹಾಗೂ ವೈದ್ಯ ಫೌಂಢೇಶನ್ ಮತ್ತು ಧಾರವಾಡದ ಎಸ್.ಡಿ.ಎಂ ನಾರಾಯಣ ಹೃದಯಾಲಯ ಸಹಯೋಗದಲ್ಲಿ ಹಮ್ಮಿಕೊಂಡ ಉಚಿತ ಹೃದಯ ತಪಾಸಣೆ ಶಿಬಿರದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಶಾಸಕ ವಿಶ್ವಾಸ ವೈದ್ಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ನನ್ನ ಶಾಲಾ ದಿನಗಳ ಗೆಳೆಯರೆಲ್ಲ ಸೇರಿ ಆರೋಗ್ಯ ಶಿಬಿರ ಹಮ್ಮಿಕೊಂಡಿರುವುದು ನನಗೆ ಅತ್ಯಂತ ಖುಷಿ ತಂದಿದೆ ಎಂದ ಅವರು, ಎಸ್‌ಜಿಎಸ್ ಗೆಳೆಯರ ಬಳಗದವರು ನಡೆಸುವ ಪ್ರತಿಯೊಂದು ಸಾಮಾಜಿಕ ಕಾರ್ಯದಲ್ಲಿ ನಾನು ಸ್ವಯಂ ಪ್ರೇರಣೆಯಿಂದ ಭಾಗಿಯಾಗಿ ಕಾರ್ಯಕ್ರಮ ಯಶಸ್ವಿಗೊಳಿಸುವದಾಗಿ ಹೇಳಿದರು. ವಿದ್ಯಾರ್ಥಿ ಜೀವನದ ನೆನಪುಗಳನ್ನು ಮೆಲುಕು ಹಾಕಿ, ಸಮಾಜಕ್ಕೆ ಅಗತ್ಯವಾದ ಸಂಸ್ಕಾರ ಮೈಗೂಡಿಸಿಕೊಳ್ಳಬೇಕೆಂದರು.ಡಾ.ವಿವೇಕಾನಂದ ಗಜಪತಿ ಹಾಗೂ ಡಾ.ಹರೀಶ ಮಮದಾಪುರ ಹೃದಯದ ಕಾಯಿಲೆ ಕುರಿತು ಮಾತನಾಡಿದರು. ಎಸ್‌ಜಿಎಸ್ ಗೆಳೆಯರ ಬಳಗದಿಂದ ದೈಹಿಕ ಶಿಕ್ಷಕ ರಾಮಚಂದ್ರ ಸಿದ್ದಲಿಂಗಣ್ಣವರ ಹಾಗೂ ಶಾಸಕ ವಿಶ್ವಾಸ ವೈದ್ಯರನ್ನು ಸನ್ಮಾನಿಸಿ ಗೌರವಿಸಲಾಯಿತು.ಶಿಬಿರದಲ್ಲಿ ಬಿಪಿ, ಶುಗರ್, ಇಸಿಜಿ, ಇಕೋ ತಪಾಸಣೆ ಜೊತೆಗೆ ಅನುಭವಿಕ ವೈದ್ಯರೊಂದಿಗೆ ಸಮಾಲೋಚನೆ ನಡೆಸಲಾಯಿತು. ಶಿಬಿರದಲ್ಲಿ ೨೨೮ ಜನರು ಉಚಿತ ಹೃದಯ ತಪಾಸಣೆ ಮಾಡಿಸಿಕೊಂಡರು. ೧೫ ಜನರಿಗೆ ಹೆಚ್ಚಿನ ಚಿಕಿತ್ಸೆಗೆ ಎಸ್‌ಡಿಎಂ ಆಸ್ಪತ್ರೆಗೆ ಕಳಿಸಲಾಯಿತು.
ರಾಮನಗೌಡ ಗಿದಿಗೌಡರ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.