ದೀಪಾವಳಿಗೆ ದೀಪ ಖರೀದಿ ಭರಾಟೆ ಜೋರು!

KannadaprabhaNewsNetwork |  
Published : Oct 21, 2025, 01:00 AM IST
ಗುಬ್ಬಿ ಪಟ್ಟಣದಲ್ಲಿ ದೀಪಾವಳಿ ಹಬ್ಬಕ್ಕೆ ಮಹಿಳೆಯರು ಮಕ್ಕಳು ದೀಪ ಖರೀದಿಸುವುದು ಜೋರಾಗಿದೆ. | Kannada Prabha

ಸಾರಾಂಶ

ದೀಪಾವಳಿಗೆ ವಾರದಿಂದಲೇ ಖರೀದಿ ಪ್ರಕ್ರಿಯೆ ನಡೆಯುತ್ತಿದ್ದು, ಪಟ್ಟಣದ ಫ್ಯಾನ್ಸಿ ಅಂಗಡಿ, ಬಟ್ಟೆ ಅಂಗಡಿಗಳು, ಮಾಲ್‌ಗಳು ತುಂಬಿದ್ದವು.

ಕನ್ನಡಪ್ರಭ ವಾರ್ತೆ ಗುಬ್ಬಿ

ಬೆಳಕಿನ ಹಬ್ಬ ದೀಪಾವಳಿ ಹಬ್ಬಕ್ಕೆ ಖರೀದಿ ಜೋರಾಗಿದೆ. ವಿವಿಧ ಅಂಗಡಿ ಮುಂಗಟ್ಟುಗಳು ಗ್ರಾಹಕರಿಂದ ತುಂಬಿದ್ದವು. ದೀಪದ ಹಣತೆ ಹಾಗೂ ಮತ್ತಿತರ ವಸ್ತುಗಳ ಖರೀದಿಗೆ ಗೃಹಿಣಿಯರು ಆಸಕ್ತಿ ಇಂದ ಮುಗಿಬಿದ್ದಿದ್ದರು. ಮಕ್ಕಳು, ಯುವಕ-ಯುವತಿಯರು ಪಟಾಕಿ ಖರೀದಿಯಲ್ಲಿ ಮುಳುಗಿದ್ದರು.

ದೀಪಾವಳಿಗೆ ವಾರದಿಂದಲೇ ಖರೀದಿ ಪ್ರಕ್ರಿಯೆ ನಡೆಯುತ್ತಿದ್ದು, ಪಟ್ಟಣದ ಫ್ಯಾನ್ಸಿ ಅಂಗಡಿ, ಬಟ್ಟೆ ಅಂಗಡಿಗಳು, ಮಾಲ್‌ಗಳು ತುಂಬಿದ್ದವು. ಪ್ರತಿ ವರ್ಷದಂತೆ ಈ ವರ್ಷವೂ ಮಣ್ಣಿನ ದೀಪಕ್ಕೆ ಭಾರಿ ಬೇಡಿಕೆ ಇದೆ. ವಿಭಿನ್ನ ಮಾದರಿಯಲ್ಲಿ ಮಾರುಕಟ್ಟೆಗೆ ಲಗ್ಗೆ ಇಟ್ಟಿರುವ ಮಣ್ಣಿನ ದೀಪ, ಬಣ್ಣ ಬಣ್ಣದ ಕ್ಯಾಂಡಲ್‌ಗಳನ್ನು ಜನರು ಮುಗಿಬಿದ್ದು ಖರೀದಿಸುತ್ತಿದ್ದಾರೆ. ಒಂದು ಡಜನ್‌ ಮಣ್ಣಿನ ಹಣತೆಗೆ ₹50 ರಿಂದ 60 ರವರೆಗೆ ದೊಡ್ಡ ಮಣ್ಣಿನ ದೀಪಕ್ಕೆ ಒಂದು ಜೊತೆಗೆ ₹100ಗೆ ಮಾರಾಟ ಮಾಡಲಾಗುತ್ತಿದೆ.

ಹಸಿರು ಪಟಾಕಿಗಳ ಮಾರಾಟಕ್ಕೆ ಅಧಿಕಾರಿಗಳು ಅನುಮತಿ ನೀಡಿದ್ದು ಪಟ್ಟಣದಲ್ಲಿ ಕೆಲವೇ ಅಂಗಡಿಗಳು ಇದ್ದ ಕಾರಣ ಪಟ್ಟಣ ಹಾಗೂ ತಾಲೂಕಿನ ಜನ ಪಟಾಕಿಕೊಳ್ಳಲು ಮುಂದಾಗಿದ್ದರು. ಕೆಲ ಕಡೆ ವ್ಯಾಪಾರ ಜೋರಾಗಿ ನಡೆದರೆ, ಅಲ್ಲಲ್ಲಿ ಮಂದಗತಿಯಲ್ಲಿ ಸಾಗಿದ್ದು ಕಂಡು ಬಂತು. ಪಟ್ಟಣದ ಪ್ರಮುಖ ಸ್ಥಳದಲ್ಲಿ ಜನಸಂದಣಿ ತುಂಬ ಇದ್ದ ಕಾರಣ ವಾಹನ ಸವಾರರು ಸಂಚಾರಕ್ಕೆ ಹರಸಾಹಸ ಪಡಬೇಕಾಯಿತು.

ಹಬ್ಬಕ್ಕೆ ಹೂವುಗಳ ದರ ಹೆಚ್ಚಾಗಿದ್ದು, ಬಟನ್ ಕೆಜಿಗೆ ₹300, ಚೆಂಡು ಹೂವು ಕೆಜಿಗೆ ₹50, ಮಲ್ಲಿಗೆ ಕೆಜಿಗೆ ₹1000ದಿಂದ ₹1,200, ಕನಕಾಂಬರ ಕೆಜಿಗೆ ₹1,500, ಬಾಳೆಹಣ್ಣು ಕೆಜಿಗೆ ₹100 ಮೋಸಂಬಿ ಕೆಜಿಗೆ ₹100, ಕಿತ್ತಲೆ ಹಣ್ಣು ಕೆಜಿಗೆ ₹100, ಬಾಳೆಹಣ್ಣು ಕೆಜಿಗೆ ₹100 ಮಾರಾಟವಾಯಿತು.

20 ಜಿ ಯು ಬಿ 3

ಗುಬ್ಬಿ ತಾಲೂಕಿನ ಮಾರಾಟಗಾರರಾದ ಬ್ಯಾಡಿಗೆರೆಯ ಚಂದ್ರಮ ಹೇಳಿದ ಪ್ರಕಾರ ಈ ಸತಿ ಭಾರಿ ಮಳೆ ಬಿದ್ದ ಕಾರಣ ಹೂವಿನ ಬೆಲೆ ಹೆಚ್ಚಾಗಿದೆ

20 ಜಿ ಯು ಬಿ 4

ಗುಬ್ಬಿ ಪಟ್ಟಣದಲ್ಲಿ ದೀಪಾವಳಿ ಹಬ್ಬಕ್ಕೆ ಮಹಿಳೆಯರು ಮಕ್ಕಳು ದೀಪ ಖರೀದಿಸುವುದು ಜೋರಾಗಿದೆ.

20 ಜಿ ಯು ಬಿ 5

ಗುಬ್ಬಿ ಪಟ್ಟಣದ ಪಟಾಕಿ ಮಳಿಗೆ ಮಳಿಗೆಯಲ್ಲಿ ತಾಲೂಕಿನ ಹಾಗೂ ಪಟ್ಟಣದ ಜನರು ಕೊಳ್ಳಲು ಮುಗಿಲು ಬಿದ್ದಿದ್ದಾರೆ.

PREV

Recommended Stories

ಮಲೆನಾಡು, ಕರಾವಳಿಯಲ್ಲಿ ಮಳೆ : ಜನಜೀವನ ಅಸ್ತವ್ಯಸ್ತ
ಚಿತ್ತಾಪುರದಲ್ಲಿ ನ.2ರಂದು ಪಥ ಸಂಚಲನ: ಅನುಮತಿ ಕೋರಿ ಹೊಸದಾಗಿ ಅರ್ಜಿ