- ಎಸ್ಐಆರ್ ಬಗ್ಗೆ ಕಾಂಗ್ರೆಸ್ ಅಪಪ್ರಚಾರ: ಬಿಜೆಪಿ ಮಾಜಿ ಸಚಿವ ಆಕ್ರೋಶ - - -
ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭೀಕರ ಬರವಿದ್ದರೂ ರೈತರಿಗೆ ಸ್ಪಂದಿಸದ, ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗದ ರಾಜ್ಯ ಸರ್ಕಾರ ಜನರ ಗಮನ ಬೇರೆಡೆ ಸೆಳೆಯಲು ರಾಜ್ಯದಲ್ಲಿ ಪ್ರತಿಭಟನೆ ನಡೆಸುತ್ತಿದೆಯಷ್ಟೇ ಎಂದರು.
ಕಾಂಗ್ರೆಸ್ ಸರ್ಕಾರದ ವಿರುದ್ಧ ಕಮೀಷನ್ ಆರೋಪಗಳು ಕೇಳಿಬರುತ್ತಿವೆ. ನಿಯಮಾನುಸಾರ ನಡೆಯುತ್ತಿರುವ ಎಸ್ಐಆರ್ ಪ್ರಕ್ರಿಯೆ ವಿರೋಧಿಸಿ ರಾಜ್ಯವ್ಯಾಪಿ ಕಾಂಗ್ರೆಸ್ ಪ್ರತಿಭಟನೆ ನಡೆಸುತ್ತಿದೆ. ಒಂದಕ್ಕಿಂತ ಹೆಚ್ಚು ಕಡೆ ಹೆಸರಿರುವವರು, ಬಾಂಗ್ಲಾ ದೇಶದ ಅಕ್ರಮ ವಲಸಿಗರು, ಬೋಗಸ್ ಮತದಾರರ ಹೆಸರನ್ನು ಮತದಾರರ ಪಟ್ಟಿಯಿಂದ ರದ್ದುಗೊಳಿಸುವಂತೆ ಒತ್ತಾಯ ಮಾಡುತ್ತಿದ್ದೇವೆಯೇ ಹೊರತು, ಯಾವುದೇ ಜಾತಿ, ಧರ್ಮದ ನೈಜ ಮತದಾರರನ್ನು ಗುರಿಯಾಗಿಸಿಕೊಂಡಲ್ಲ ಎಂದು ಸ್ಪಷ್ಟಪಡಿಸಿದರು.ಆರೆಸ್ಸೆಸ್ ರಾಷ್ಟ್ರಭಕ್ತ ಸಂಸ್ಥೆಯಾಗಿದೆ. ಅದರ ಬಗ್ಗೆ ಕಾಂಗ್ರೆಸ್ ಪಕ್ಷದವರು ಅಪಪ್ರಚಾರ ಮಾಡುತ್ತಿದ್ದಾರೆ. ದೇಶದ ಜನತೆಗೆ ಸಂಘ ಪರಿವಾರ ಏನೆಂಬುದು ಗೊತ್ತಿದೆ. ಕಾಂಗ್ರೆಸ್‌ನ ಇಂತಹ ಯಾವುದೇ ಅರೋಪಗಳಿಗೂ ಜನ ಸೊಪ್ಪು ಹಾಕುವುದಿಲ್ಲ. ಅಲ್ಲದೇ, ಕೇಂದ್ರ ಚುನಾವಣಾ ಆಯೋಗದ ಕಾರ್ಯನಿರ್ವಹಣೆಯಲ್ಲಿ ಬಿಜೆಪಿ ಯಾವುದೇ ಹಸ್ತಕ್ಷೇಪ ಸಹ ಮಾಡಿಲ್ಲ ಎಂದು ರೇಣುಕಾಚಾರ್ಯ ಹೇಳಿದರು.
- - -
ದಾವಣಗೆರೆಯಲ್ಲಿ ಶ್ರೀ ಗಣಪತಿ ಶೋಭಾಯಾತ್ರೆ ಬೃಹತ್ ಜನಸಾಗರದ ಮಧ್ಯೆ ಅತ್ಯಂತ ಅದ್ಧೂರಿಯಾಗಿ ನಡೆದಿದ್ದು, ಮೆರವಣಿಗೆಯಲ್ಲಿ ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತರಿದ್ದು ಉತ್ತಮ ಬೆಳವಣಿಗೆಯಾಗಿದೆ. ಇದು ಹಿಂದೂಗಳ ಒಗ್ಗಟ್ಟಿನ ಪ್ರದರ್ಶನ, ದೇವರ ಮೇಲಿನ ಭಕ್ತಿಯ ಪ್ರತೀಕವಾಗಿದೆಯೇ ಹೊರತು, ಯಾವುದೇ ಧರ್ಮದವರ ವಿರುದ್ಧವೂ ಅಲ್ಲ.
- - -
ದಾವಣಗೆರೆಯಲ್ಲಿ ಶ್ರೀ ಗಣೇಶನ ಶೋಭಾಯಾತ್ರೆ ವೇಳೆ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಸುದ್ದಿಗಾರರೊಂದಿಗೆ ಮಾತನಾಡಿದರು.