ಸೌಲಭ್ಯ ಕೊರತೆ । 1960ರ ದಶಕದಲ್ಲಿ ವಿಶ್ವ ಬ್ಯಾಂಕಿನ ನೆರವಿನಿಂದ ಸ್ಥಾಪಿತ । ಎಪಿಎಂಸಿ ಮಾರುಕಟ್ಟೆ ಕರ್ನಾಟಕದಲ್ಲೇ ಹೆಸರುವಾಸಿ । ಬೆಳೆಗಳ ದಾಸ್ತಾನು ಕೊರತೆ
ಕನ್ನಡಪ್ರಭ ವಾರ್ತೆ ತರೀಕೆರೆ
ಚಿಕ್ಕಮಗಳೂರು ಜಿಲ್ಲೆಯ ಉಪವಿಭಾಗ ಕೇಂದ್ರವಾದ ತರೀಕೆರೆ ಜಿಲ್ಲೆಯ ಎರಡನೆ ದೊಡ್ಡ ನಗರವಾಗಿದೆ. ಈ ನಗರದ ಸಂತೆ ಮಧ್ಯೆಯಲ್ಲೇ 1960ರ ದಶಕದಲ್ಲಿ ವಿಶ್ವ ಬ್ಯಾಂಕಿನ ನೆರವಿನಿಂದ ಸ್ಥಾಪನೆಯಾದ ಎಪಿಎಂಸಿ ಮಾರುಕಟ್ಟೆ ಕರ್ನಾಟಕದಲ್ಲೇ ಹೆಸರುವಾಸಿಯಾಗಿದೆ. ಇಂತಹ ಪ್ರಮುಖ ಎಪಿಎಂಸಿಯಲ್ಲಿ ಶೀಥಲ ಘಟಕವಿಲ್ಲದೆ ರೈತರು ನಷ್ಟ ಅನುಭವಿಸುವ ಸಂಕಷ್ಟ ಮಾತ್ರ ದೂರಾಗಿಲ್ಲ.ತರೀಕೆರೆಯಲ್ಲಿ ಮೊದಲಿನಿಂದಲೂ ಪ್ರತಿ ಶುಕ್ರವಾರ ನಡೆಯುತ್ತಿರುವ ವಾರದ ಸಂತೆ ಶ್ರೀ ಸಾಮಾನ್ಯರ ಮುಕ್ತ ಮಾರುಕಟ್ಟೆಯಾಗಿದ್ದು ತರಕಾರಿ, ಹೂವು, ಹಣ್ಣು, ಧವಸ ಧಾನ್ಯಗಳು, ಬೆಲ್ಲದಿಂದ ಹಿಡಿದು ಬೇಳೆಕಾಳುಗಳವರೆಗೆ, ತೈಲ ಪದಾರ್ಥಗಳು, ಗೃಹೋಪಯೋಗಿ ಪದಾರ್ಥಗಳು ಇಲ್ಲಿ ದೊರೆಯುವುದರಿಂದ ತರೀಕೆರೆ ಶುಕ್ರವಾರದ ಸಂತೆ ಆಪಾರ ಜನಪ್ರಿಯತೆ ಪಡೆದಿದೆ.
ತರೀಕೆರೆ ಖಾಸಗಿ ಬಸ್ ನಿಲ್ದಾಣದ ಹಿಂದೆ ಇದ್ದ ಶುಕ್ರವಾರದ ಮುಕ್ತ ಮಾರುಕಟ್ಟೆ ಎಪಿಎಂಸಿ ಆವರಣಕ್ಕೆ ಹೊಂದಿ ಕೊಂಡಂತಿದ್ದು, ಇಲ್ಲೂ ಮಾರಾಟಕ್ಕೆ ಅವಕಾಶವಿದ್ದು ಈ ಭಾಗದ ಪ್ರಮುಖ ವಾಣಿಜ್ಯ ಬೆಳೆಯಾಗಿರುವ ಅಡಕೆ ಬೆಳೆಯುವ ಜೊತೆ ಹೊರ ಜಿಲ್ಲೆಗಳು ಮತ್ತು ಹೊರರಾಜ್ಯದಿಂದ ಹಸಿ ಅಡಕೆ ತಂದು ಇಲ್ಲಿಯೇ ಸಂಸ್ಕರಿಸುವ ರೈತರಿಗೆ ಅಡಕೆ ಎಪಿಎಂಸಿ ವರಮಾನದ ಮೂಲ.
ಬೆಲೆ ಬರುವವರೆಗೆ ಬೆಳೆದ ಬೆಳೆಯನ್ನು ಇಟ್ಟುಕೊಂಡು ಕಾಯಲು ಶೀಥಲ ಘಟಕಗಳೇ ಇಲ್ಲದಿರುವುದರಿಂದ ಪದಾರ್ಥಗಳನ್ನು ಹಿಡಿದಿಟ್ಟುಕೊಳ್ಳಲು ಆಗದೆ ಬಂದಷ್ಟಕ್ಕೆ ಮಾರುವಂತಹ ಸ್ಥಿತಿ ಇದೆ. ಇದಕ್ಕೆ ಶಾಶ್ವತ ಪರಿಹಾರ ಪಡೆಯಲು ಎಪಿಎಂಸಿ ಆವರಣದಲ್ಲಿ ಸುಸಜ್ಜಿತ ಶೀಥಲ ಘಟಕ ಸ್ಥಾಪನೆ ಅಗತ್ಯವಿದೆ.
ಇತ್ತೀಚೆಗೆ ರಾಜ್ಯ ಸರ್ಕಾರ ಸಂಪುಟ ಸಭೆಯಲ್ಲಿ ರಾಜ್ಯದ ವಿವಿಧೆಡೆ ಕೃಷಿ ಉತ್ಪನ್ನ ಮಾರುಕಟ್ಟೆ ಆವರಣಗಳಲ್ಲಿ ಹತ್ತು ಶೀಥಲ ಘಟಕ ಸ್ಥಾಪಿಸುವ ತೀರ್ಮಾನ ತೆಗೆದುಕೊಂಡಿದ್ದು ಇದರಲ್ಲಿ ಒಂದು.
ಜಿ.ಎಚ್.ಶ್ರೀನಿವಾಸ್, ಶಾಸಕ
ಟಿ.ಆರ್.ಶ್ರೀಧರ್, ಎಪಿಎಂಸಿ ಮಾಜಿ ಸದಸ್ಯ.