ಆದಿಕರ್ನಾಟಕ ಅಭಿವೃದ್ಧಿ ಸಂಘದಲ್ಲಿ ಅವ್ಯವಹಾರ ನಡೆದಿಲ್ಲ: ಎಸ್. ಮಹದೇವಯ್ಯ ಸ್ಪಷ್ಟನೆ

KannadaprabhaNewsNetwork |  
Published : Jun 23, 2024, 02:02 AM IST
ಅದಿಕರ್ನಾಟಕ ಅಭಿವೃದ್ದಿ ಸಂಘದಲ್ಲಿ ಯಾವುದೇ ಹಣಕಾಸು ಅವ್ಯವಹಾರ ನಡೆದಿಲ್ಲ : ಎಸ್.ಮಹದೇವಯ್ಯ ಸ್ಪಷ್ಟನೆ  | Kannada Prabha

ಸಾರಾಂಶ

ಆದಿಕರ್ನಾಟಕ ಸಂಘದಲ್ಲಿ ಯಾವುದೇ ಹಣಕಾಸು ಅವ್ಯವಹಾರ ನಡೆದಿಲ್ಲ. ನನ್ನ ಮೇಲೆ ಮಾಡಿರುವ ಕಿಂಗ್ ಪಿನ್ ಆರೋಪದಲ್ಲಿ ಸತ್ಯಾಂಶ ಇಲ್ಲ. ಸಂಘದಲ್ಲಿ ತಾವು ೭ ಲಕ್ಷ ಪಡೆದಿರುವ ಆರೋಪದ ವಿರುದ್ಧ ನಗರದ ಪಟ್ಟಣ ಪೊಲೀಸ್ ಠಾಣಿಯಲ್ಲಿ ದೂರು ನೀಡಿದ್ದೇನೆ ಎಂದು ಸಂಘದ ನಿರ್ದೇಶಕ ಹಾಗೂ ಜಿ.ಪಂ.ಮಾಜಿ ಅಧ್ಯಕ್ಷ ಎಸ್. ಮಹದೇವಯ್ಯ ಹೇಳಿದರು. ಚಾಮರಾನಗರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಸಂಘದಲ್ಲಿ ೭ ಲಕ್ಷ ರು. ಪಡೆದಿರುವೆನೆಂಬ ಆರೋಪದ ವಿರುದ್ಧ ಸಂಘದ ನಿರ್ದೇಶಕ ದೂರು

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಆದಿಕರ್ನಾಟಕ ಸಂಘದಲ್ಲಿ ಯಾವುದೇ ಹಣಕಾಸು ಅವ್ಯವಹಾರ ನಡೆದಿಲ್ಲ. ನನ್ನ ಮೇಲೆ ಮಾಡಿರುವ ಕಿಂಗ್ ಪಿನ್ ಆರೋಪದಲ್ಲಿ ಸತ್ಯಾಂಶ ಇಲ್ಲ. ಸಂಘದಲ್ಲಿ ತಾವು ೭ ಲಕ್ಷ ಪಡೆದಿರುವ ಆರೋಪದ ವಿರುದ್ಧ ನಗರದ ಪಟ್ಟಣ ಪೊಲೀಸ್ ಠಾಣಿಯಲ್ಲಿ ದೂರು ನೀಡಿದ್ದೇನೆ ಎಂದು ಸಂಘದ ನಿರ್ದೇಶಕ ಹಾಗೂ ಜಿ.ಪಂ.ಮಾಜಿ ಅಧ್ಯಕ್ಷ ಎಸ್. ಮಹದೇವಯ್ಯ ಹೇಳಿದರು. ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ನಮ್ಮ ಸ್ನೇಹಿತರಾದ ಅಯ್ಯನಪುರ ಶಿವಕುಮಾರ್, ಆರ್.ಮಹದೇವು ಇತರರು ಇತ್ತೀಚೆಗೆ ಪತ್ರಿಕಾಗೋಷ್ಠಿಯಲ್ಲಿ ನಡೆಸಿ ತಮ್ಮ ವಿರುದ್ಧ ಆರೋಪ ಮಾಡಿರುವುದರಲ್ಲಿ ಯಾವುದೇ ಹುರುಳಿಲ್ಲ. ಸಂಘ ಸಮಸ್ಯೆ ಬಗೆಹರಿಸುವಂತೆ ಶಿವಕುಮಾರ್, ಆರ್. ಮಹದೇವು ನಮ್ಮ ಬಳಿ ಬಂದಿದ್ದು ನಿಜ ಸಂಘದ ಸಮಸ್ಯೆ ಬಗೆಹರಿಸಲು ಪ್ರಯತ್ನಪಟ್ಟೆ ಅಷ್ಟರಲ್ಲಿ ಈ ರೀತಿಯಾಯಿತು ಎಂದರು. ಆದಿಕರ್ನಾಟಕ ಸಂಘದಲ್ಲಿ ಇಷ್ಟೆಲ್ಲ ಸಮಸ್ಯೆಗೆ ತಮ್ಮನ್ನೇ ಕಿಂಗ್‌ಪಿನ್ ಎಂದು ಶಿವಕುಮಾರ್ ಆರೋಪ ಮಾಡಿದ್ದರು. ಆದರೆ ನಾನು ಯಾವ ಕಿಂಗ್‌ಪಿನ್, ಗುಂಡುಪಿನ್‌ ಅಲ್ಲ ನಾನು ಸಮಾಜಕ್ಕೆ ಒಳ್ಳೆಯ ವ್ಯಕ್ತಿಯಾಗಿದ್ದೇನೆ. ಸಂಘದಲ್ಲಿ ೩ ತಿಂಗಳಿಗೊಮ್ಮೆ ಸಭೆ ಕರೆದಾಗ ನಿರ್ದೇಶಕರಿಗೆ ಗೌರವಧನ ನೀಡುತ್ತಾರೆ. ಅದನ್ನು ಮುಟ್ಟುವವನು ನಾನಲ್ಲ ನನ್ನನ್ನು ಸಂಘದಲ್ಲಿ ೭ ಲಕ್ಷ ಪಡೆದುಕೊಂಡಿದ್ದಾರೆ ಎಂದು ಆರೋಪ ಮಾಡಿದ್ದಾರೆ. ಅದರ ವಿರುದ್ಧ ನಗರದ ಪಟ್ಟಣ್ಣ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದೇನೆ. ಠಾಣಿಯಲ್ಲಿ ಹಿಂಬರಹ ಕೊಟ್ಟಿದ್ದಾರೆ. ಅದರ ಮೇಲೆ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡುತ್ತೇನೆ. ತಾವು ೭ ಲಕ್ಷ ಪಡೆದಿರುವುದನ್ನು ಸಾಬೀತುಪಡಿಸಿದರೆ ೧೪ ಲಕ್ಷ ರು. ಸಂಘದ ಖಾತೆಗೆ ಹಾಕುತ್ತೇನೆ. ಒಂದು ವೇಳೆ ಶಿವಕುಮಾರ್ ಸಾಬೀತು ಪಡಿಸದೆ ಹೋದರೆ ೨೫ ಲಕ್ಷ ರು.ಗಳನ್ನು ಸಂಘದ ಖಾತೆಗೆ ಹಾಕುತ್ತಾರಾ ಎಂದು ಸವಾಲು ಹಾಕಿದರು. ಆದಿಕರ್ನಾಟಕ ಅಭಿವೃದ್ಧಿ ಸಂಘದ ಆಸ್ತಿ ೧೯೫೮-೫೯ರಿಂದಲೂ ಸಹ ಪರಿಶಿಷ್ಟರ ಆಸ್ತಿಯಾಗಿದೆ. ಎ.ಕೆ ಜನರಲ್ ಹಾಸ್ಟೆಲ್ ಆಧಾರದಲ್ಲಿ ಕೊಟ್ಟಿರುವ ಆಸ್ತಿ ಇದಾಗಿದ್ದು, ಇಲ್ಲಿವರೆಗೆ ಯಾರಿಗೂ ಪರಭಾರೆಯಾಗಿಲ್ಲ. ಕೋವಿಡ್ ವೇಳೆಯಲ್ಲಿ ಯಾರು ಹೊರಗೆ ಬಾರದ ಸಂದರ್ಭದಲ್ಲಿ ಅಧಿಕಾರಿಗಳು, ಕೆಲವರು ಸೇರಿಕೊಂಡು ಸರ್ವೆ ನಂಬರ್ ಹಾಕಿಕೊಂಡು ರಿಜಿಸ್ಟರ್ ಮಾಡಿಕೊಂಡಿದ್ದಾರೆ ಎಂಬುದು ಬೆಳಕಿಗೆ ಬಂತು. ಸುಮಾರು ೬೦, ೭೦ ವರ್ಷಗಳಿಂದ ಸಂಘವೇ ಸ್ವಾಧೀನ, ಅನುಭವದಲ್ಲಿದೆ. ಅಧಿಕಾರಿಗಳು ಏನು ಮಾಡಿದರೂ ಗೊತ್ತಿಲ್ಲ. ಅದಕ್ಕೆ ಸಂಘ, ಅಧ್ಯಕ್ಷರು, ಕಾರ್ಯದರ್ಶಿ ಕಾರಣರಲ್ಲ ಎಂದರು. ಶ್ರೀರಾಮಚಂದ್ರ ಶಿಕ್ಷಣ ಸಂಸ್ಥೆಯನ್ನು ಬರೆದುಕೊಡಲಿಲ್ಲ ಎಂಬ ಕಾರಣಕ್ಕೆ ಆದಿಕರ್ನಾಟಕ ಅಭಿವೃದ್ಧಿ ಸಂಘದ ವಿರುದ್ಧ ಇಷ್ಟೇ ಪಿತೂರಿ ನಡೆಯುತ್ತಿದೆ. ಶ್ರೀರಾಮಚಂದ್ರ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎಂ.ಎಸ್. ಮಾದಯ್ಯ ಬರೆದುಕೊಡುವಂತೆ ಆದಿಕರ್ನಾಟಕ ಅಭಿವೃದ್ಧಿ ಸಂಘಕ್ಕೆ ಅರ್ಜಿ ಸಲ್ಲಿಸಿದರು. ಅದನ್ನು ಬರೆದುಕೊಡದೆ ಸಮಾಜಕ್ಕೆ ಉಳಿಸಿದ ಕಾರಣದಿಂದ ಸಂಘದ ಅಧ್ಯಕ್ಷ ಎಸ್. ನಂಜುಂಡಸ್ವಾಮಿ ವಿರುದ್ಧ ಷಡ್ಯಂತ್ರ ನಡೆಯುತ್ತಿದೆ ಎಂದು ದೂರಿದರು.ಪತ್ರಿಕಾಗೋಷ್ಠಿಯಲ್ಲಿ ಆದಿಕರ್ನಾಟಕ ಅಭಿವೃದ್ಧಿ ಸಂಘದ ಸದಸ್ಯರಾದ ಅಮಚವಾಡಿ ಕಾಂತರಾಜ್, ಸಿ.ಕೆ. ರವಿಕುಮಾರ್, ನಾಗರಾಜು ಹಾಜರಿದ್ದರು.

PREV

Recommended Stories

ಬಾಗಲಕೋಟೆ ತೋಟಗಾರಿಕಾ ವಿಜ್ಞಾನ ವಿವಿಗೆ ಅನುದಾನ: ಸಚಿವ
ಸಂಭ್ರಮದ ಮೌನೇಶ್ವರ ಜಾತ್ರಾ ಮಹೋತ್ಸವ