ಪಡಿತರ ಅಕ್ಕಿ ಅಕ್ರಮ ಮಾರಾಟಕ್ಕೆ ಕಡಿವಾಣ ಇಲ್ಲ

KannadaprabhaNewsNetwork |  
Published : Aug 19, 2025, 01:00 AM IST
ಚಿತ್ರ :೧೨ಎಚ್‌ಬಿಎಚ್೧ಹಗರಿಬೊಮ್ಮನಹಳ್ಳಿ ಪಟ್ಟಣದ ತಾಪಂ ಕಚೇರಿಯಲ್ಲಿ ಗ್ಯಾರಂಟಿ ಅನುಷ್ಠಾನ ಸಮಿತಿಯ ಪ್ರಗತಿ ಪರಿಶೀಲನಾ ಸಭೆ ನಡೆಯಿತು. | Kannada Prabha

ಸಾರಾಂಶ

ಮುಂದಿನ ಗ್ಯಾರಂಟಿ ಪ್ರಗತಿ ಪರಿಶೀಲನಾ ಸಭೆಗೆ ಜೆಸ್ಕಾಂ ಎಇಇ ಗೈರಾದರೆ ಸೂಕ್ತ ಕ್ರಮಕೈಗೊಳ್ಳಲಾಗುವುದು.

ವಿದ್ಯುತ್ ಸಮಸ್ಯೆಗೆ ಸ್ಪಂದಿಸುವರ‍್ಯಾರು?: ತಾಲೂಕು ಅಧ್ಯಕ್ಷ ಸೊನ್ನದ ಗುರುಬಸವರಾಜ

ಗ್ಯಾರಂಟಿ ಅನುಷ್ಠಾನ ಸಮಿತಿಯ ಪ್ರಗತಿ ಪರಿಶೀಲನಾ ಸಭೆ

ಕನ್ನಡಪ್ರಭ ವಾರ್ತೆ ಹಗರಿಬೊಮ್ಮನಹಳ್ಳಿಮುಂದಿನ ಗ್ಯಾರಂಟಿ ಪ್ರಗತಿ ಪರಿಶೀಲನಾ ಸಭೆಗೆ ಜೆಸ್ಕಾಂ ಎಇಇ ಗೈರಾದರೆ ಸೂಕ್ತ ಕ್ರಮಕೈಗೊಳ್ಳಲಾಗುವುದು ಎಂದು ಗ್ಯಾರಂಟಿ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಸೊನ್ನದ ಗುರುಬಸವರಾಜ ಎಚ್ಚರಿಸಿದರು.ಪಟ್ಟಣದ ತಾಪಂಯ ಮಹಾತ್ಮಾ ಗಾಂಧಿ ಸಭಾಂಗಣದಲ್ಲಿ ನಡೆದ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು. ವಿದ್ಯುತ್‌ಗೆ ಸಂಬಂಧಪಟ್ಟ ವಿಷಯಗಳನ್ನು ಯಾರನ್ನ ಕೇಳಬೇಕು, ಪ್ರತಿಬಾರಿ ತಮ್ಮ ಅಸಿಸ್ಟಂಟ್‌ಗಳನ್ನು ಕಳಿಸಿದರೆ ಸಮಸ್ಯೆ ಬಗೆಹರಿಸುವರ‍್ಯಾರು ಎಂದು ಜೆಸ್ಕಾಂ ಹಿರಿಯ ಸಹಾಯಕ ಅಧಿಕಾರಿ ರವಿಯವರನ್ನು ಅಧ್ಯಕ್ಷರು ಪ್ರಶ್ನಿಸಿದರು. ಮುಂದಿನ ಸಭೆಗೆ ಎಇಇ ಬರದೆ ಇದ್ದರೆ ನೋಟೀಸ್ ಜಾರಿ ಮಾಡಲಾಗುವುದು ಎಂದು ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಲಕ್ಷ್ಮೀಕಾಂತ ತಿಳಿಸಿದರು. ಸರ್ಕಾರದ ಯುವನಿಧಿ ಯೋಜನೆಯಡಿ ಯುವನಿಧಿ ಪ್ಲಸ್ ಎಂಬುವ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ತರಬೇತಿ ನಂತರ ಉದ್ಯೋಗ ಭರವಸೆಯನ್ನು ಸರ್ಕಾರವೇ ಪೂರೈಸುತ್ತದೆ ಎಂದು ಗುರುಬಸವರಾಜ ತಿಳಿಸಿದರು.ಅಕ್ಕಿ ಕಾಳಸಂತೆಗೆ ಬ್ರೇಕ್ ಇಲ್ಲ:

ತಾಲೂಕಿನ ತಂಬ್ರಹಳ್ಳಿ ಪೊಲೀಸ್ ಠಾಣೆಗೆ ಕಳೆದ ತಿಂಗಳು ಅಕ್ರಮ ಅಕ್ಕಿ ಸಾಗಾಣೆ ಮಾಡುತ್ತಿದ್ದ ಎರಡು ಟಾಟಾ ಎಸಿ ವಾಹನಗಳನ್ನು ಹಿಡಿದು ತಂದಿದ್ದರೂ ಕೂಡ ಪ್ರಕರಣ ದಾಖಲಿಸದೆ ಬಿಟ್ಟಿದ್ದಾರೆ ಕಾರಣವೇನು ಎಂದು ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯ ಗೌರಜ್ಜನವರ ಗಿರೀಶ್ ಆಹಾರ ನಿರೀಕ್ಷಕ ವೀರೇಶ್ ಅವರನ್ನು ಪ್ರಶ್ನಿಸಿದರು. ಕೆಆರ್‌ಎಸ್ ಪಕ್ಷದವರು ಅಕ್ರಮ ಅಕ್ಕಿ ಸಾಗಣೆ ಮಾಡುವ ವಾಹನಗಳನ್ನು ಪೊಲೀಸ್ ಠಾಣೆಗೆ ಒಪ್ಪಿಸಿದರು. ಕೊನೆಗೆ ಅವರ ಉಪಸ್ಥಿತಿಯಲ್ಲಿಯೇ ಆ ವಾಹನ ಬಿಡುಗಡೆ ಮಾಡಲಾಯಿತು. ಇದರ ಮಾಹಿತಿ ಆಹಾರ ಸರಬರಾಜು ನಿರೀಕ್ಷಕರ ಗಮನಕ್ಕೆ ಬರಲಿಲ್ಲವೇ ಎಂದು ಕಿಡಿಕಾರಿದರು. ತಾಲೂಕಿನಲ್ಲಿ ಅಕ್ರಮ ಅಕ್ಕಿ ಸಾಗಾಣೆ ನಿರಂತರವಾಗಿ ನಡೆಯುತ್ತಿದ್ದರು ಅಧಿಕಾರಿಗಳು ಗಮನಹರಿಸುತ್ತಿಲ್ಲ ಎಂದು ಸದಸ್ಯ ಎಸ್.ಎ. ಸಂತೋಷ ಬೇಸರ ವ್ಯಕ್ತಪಡಿಸಿದರು. ಹಿರಿಯ ನಾಗರೀಕರ ಮನೆಗಳಿಗೆ ರೇಷನ್ ಮುಟ್ಟಿಸಬೇಕು ಎಂದು ಸರ್ಕಾರ ಆದೇಶ ಮಾಡಿದರೂ ಯಾವ ನ್ಯಾಯಬೆಲೆ ಅಂಗಡಿಯವರು ಈ ಕೆಲಸ ಮಾಡುತ್ತಿಲ್ಲ ಎಂದು ಗ್ಯಾರಂಟಿ ಅನುಷ್ಠಾನ ಸಮಿತಿ ಜಿಲ್ಲಾ ಪ್ರಾಧಿಕಾರ ಸದಸ್ಯ ಎಚ್.ಪರುಶುರಾಮ ತಿಳಿಸಿದರು. ರೇಷನ್‌ನಲ್ಲಿ ರಾಗಿ ಬದಲಿ ಜೋಳ ನೀಡುವುದಕ್ಕೆ ಕ್ರಮವಹಿಸಿ ಎಂದು ಸದಸ್ಯ ವೆಂಕಟೇಶನಾಯ್ಕ ತಿಳಿಸಿದರು. ಸಭೆಯಲ್ಲಿ ಗ್ಯಾರಂಟಿ ಅನುಷ್ಠಾನ ಸಮಿತಿ ಜಿಲ್ಲಾ ಉಪಾಧ್ಯಕ್ಷ ಜಂದಿಸಾಬ್, ಸದಸ್ಯರಾದ ರಾಘವೇಂದ್ರ ಉಲುವತ್ತಿ, ಸರ್ದಾರ್ ರಾಮಣ್ಣ, ಬಲ್ಲಾಹುಣಿಸಿ ಹನುಮಂತ, ಉಪ್ಪಾರ ಕಾರ್ತಿಕ, ಮಾಲವಿ ಗಿರೀಶ್, ಮೇಟಿ ಮಂಜುನಾಥ, ಕೆಎಸ್‌ಆರ್‌ಟಿಸಿ ಡಿಪೋ ವ್ಯವಸ್ಥಾಪಕ ಜಡೇಶ, ನಿಯಂತ್ರಣಾಧಿಕಾರಿ ರಾಘವೇಂದ್ರ, ಉದ್ಯೋಗ ಸಮಾಲೋಚನಾಧಿಕಾರಿ ವೆಂಕಟೇಶ್, ತಾಲೂಕು ಯೋಜನಾಧಿಕಾರಿ ನಾಗರಾಜ ನಾಯ್ಕ, ವ್ಯವಸ್ಥಾಪಕಿ ಲಕ್ಷ್ಮೀ ಇತರರಿದ್ದರು.

PREV

Recommended Stories

ಪಕ್ಷ ಭೇದ ಮರೆತು ಅಭಿವೃದ್ಧಿ ಕೆಲಸ ಮಾಡಿ
ಮುತ್ತೂರು ನಡುಗಡ್ಡೆಯಿಂದ 7 ಕುಟುಂಬಗಳ ಸ್ಥಳಾಂತರ