ರೈತ ಮುಖಂಡನ ವಿರುದ್ಧ ಮಾನಹಾನಿ ಪ್ರಕರಣ ಇಲ್ಲ

KannadaprabhaNewsNetwork |  
Published : Nov 03, 2026, 03:15 AM IST
ಸುದ್ದಿಗೋಷ್ಠಿ | Kannada Prabha

ಸಾರಾಂಶ

ಕಬ್ಬು ಬೆಳೆಗಾರರ ಸಭೆಯಲ್ಲಿ ರೈತರ ಪರವಾಗಿ ಮಾತನಾಡಿಲ್ಲ, ಸುಮ್ಮನೆ ಸಿಎಂ ಪಕ್ಕ ಫೋಸ್‌ ನೀಡಿದ್ದಾರೆ ಎಂದು ರೈತರು ಹೇಳಿದ್ದಕ್ಕೆ ಶಾಸಕರು ನೋವಿನಿಂದ ಹೋರಾಟಗಾರ ರೈತನ ಕುರಿತು ಮಾತನಾಡಿದ್ದಾರೆ, ಯಾವುದೇ ರೈತರ ವಿರುದ್ಧ ಪ್ರಕರಣ ದಾಖಲಿಸಿಲ್ಲ ಎಂದು ಪಕ್ಷದ ಹಿರಿಯರಾದ ಎಂ.ಎಲ್. ಕೆಂಪಲಿಂಗಣ್ಣನವರ ಸ್ಪಷ್ಟನೆ ನೀಡಿದ್ದಾರೆ.

ಕನ್ನಡಪ್ರಭ ವಾರ್ತೆ ಬೀಳಗಿ

ಕಬ್ಬಿಗೆ ದರ ನಿಗದಿಗೆ ಆಗ್ರಹಿಸಿ ಕಬ್ಬು ಬೆಳೆಗಾರರು ಹಮ್ಮಿಕೊಂಡಿರುವ ಹೋರಾಟಕ್ಕೆ ಶಾಸಕ ಜೆ.ಟಿ. ಪಾಟೀಲ ಸೇರಿದಂತೆ ಕಾಂಗ್ರೆಸ್ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರ ಸಂಪೂರ್ಣ ಬೆಂಬಲವಿದ್ದು ,ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೂಡಲೇ ರೈತರಿಗೆ ನ್ಯಾಯ ಒದಗಿಸಬೇಕು ಎಂದು ಪಕ್ಷದ ಹಿರಿಯರಾದ ಎಂ.ಎಲ್. ಕೆಂಪಲಿಂಗಣ್ಣನವರ ಆಗ್ರಹಿಸಿದರು.

ಇಲ್ಲಿನ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾಸಕರು ಈಚೆಗೆ ಬೆಳಗಾವಿ ಸುವರ್ಣ ಸೌಧದಲ್ಲಿ ಸಿಎಂ ಕರೆದ ಕಬ್ಬು ಬೆಳೆಗಾರರ ಸಭೆಯಲ್ಲಿ ರೈತರ ಪರವಾಗಿ ಮಾತನಾಡಿಲ್ಲ, ಸುಮ್ಮನೆ ಸಿಎಂ ಪಕ್ಕ ಫೋಸ್‌ ನೀಡಿದ್ದಾರೆ ಎಂದು ರೈತರು ಹೇಳಿದ್ದಕ್ಕೆ ಶಾಸಕರು ನೋವಿನಿಂದ ಹೋರಾಟಗಾರ ರೈತನ ಕುರಿತು ಮಾತನಾಡಿದ್ದಾರೆ, ಸರಿಯಾದ ಮಾಹಿತಿ ಇಲ್ಲದೆ ಶಾಸಕರು ರೈತ ಮುಖಂಡನ ವಿರುದ್ಧ ಮಾನಹಾನಿ ಪ್ರಕರಣ ದಾಖಲಿಸುವ ಮಾತು ಹೇಳಿದ್ದಾರೆ. ಶಾಸಕರು ರೈತರ ಪರವಾಗಿರುವ ಹಿರಿಯ ರಾಜಕಾರಣಿ, ರೈತ ಕುಟುಂಬ ಹಾಗೂ ರೈತ ಹೋರಾಟದಿಂದ ಗ್ರಾಪಂನಿಂದ ವಿಧಾನಸೌಧ ಪ್ರವೇಶಿಸಿರುವ ಶಾಸಕರು ರೈತರ ಮೇಲೆ ಅಪಾರ ಗೌರವ ಕಾಳಜಿ ಹೊಂದಿದ್ದಾರೆ.ರೈತರ ಮೇಲೆ ಯಾವುದೇ ದಾಖಲಿಸಿಲ್ಲ, ದಾಖಲಿಸುವುದು ಇಲ್ಲ ಎಂದು ಸ್ಪಷ್ಟಪಡಿಸಿದರು.ಶಾಸಕ ಜೆ.ಟಿ. ಪಾಟೀಲರು ಹಾಗೂ ಅವರ ಸಹೋದರ ಶಿವನಗೌಡ ಪಾಟೀಲರು ಸದಾಕಾಲ ರೈತರೊಂದಿಗೆ ನಿಂತು ಹೋರಾಟಗಳಿಗೆ ನ್ಯಾಯ ಒದಗಿಸುವ ಕೆಲಸ ಮಾಡಿದ್ದಾರೆ. ಕೃಷ್ಣಾ ಮೇಲ್ದಂಡೆ ಯೋಜನೆಯಲ್ಲಿ ಮುಳಗಡೆ ಸಂತ್ರಸ್ತ ರೈತರ ಪರವಾಗಿ ನಿಂತು ಸರ್ಕಾರ ದರ ನಿಗದಿ ಮಾಡುವಲ್ಲಿ ಮುಂಚೂಣಿ ಪಾತ್ರ ನಿಭಾಯಿಸಿದ್ದು ಶಾಸಕ ಜೆ.ಟಿ. ಪಾಟೀಲರು. ಕಬ್ಬು ದರ ನಿಗದಿ ಕುರಿತಾಗಿ ವಿಧಾನಸಭೆಯಲ್ಲಿ ಹಾಗೂ ವೈಯಕ್ತಿಕವಾಗಿ ಸಚಿವರು, ಸಿಎಂ ಗಮನಕ್ಕೆ ತಂದಿದ್ದಾರೆ. ಶಾಸಕರು ಯಾವಾಗಲೂ ರೈತ ಪರವಾಗಿದ್ದಾರೆ. ರೈತ ಹೋರಾಟಕ್ಕೆ ಸದಾ ಬೆಂಬಲವಾಗಿದ್ದಾರೆ. ಕ್ಷೇತ್ರದ ರೈತ ಮುಖಂಡರು ಶಾಸಕರೊಂದಿಗೆ ಈ ಕುರಿತು ಚರ್ಚಿಸಿದ್ದು, ರೈತರೊಂದಿಗೆ ಶಾಸಕರು ಸೇರಿ ನಾವೆಲ್ಲರೂ ಇದ್ದೇವೆ. ಈ ವಿಷಯ ಇಲ್ಲಿಗೆ ಮುಕ್ತಾಯಗೊಳಿಸುವುದಾಗಿ ಶಾಸಕರು ತಿಳಿಸಿದ್ದಾರೆ ಎಂದರು.

ಸುದ್ದಿಗೋಷ್ಠಿಯಲ್ಲಿ ಗ್ಯಾರಂಟಿ ಅನುಷ್ಠಾನ ಸಮಿತಿ ತಾಲೂಕಾಧ್ಯಕ್ಷ ಅನವೀರಯ್ಯ ಪ್ಯಾಟಿಮಠ, ಬಸು ಢವಳೇಶ್ವರ, ವೆಂಕಟೇಶ ನಾಯಿಕ, ರಮೇಶ ಬಗಲಿ, ವಿಠಲ ಕಂಬಾರ ಸೇರಿದಂತೆ ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಭುಗಿಲೆದ್ದ ಸರ್ಕಾರ ವರ್ಸಸ್‌ ಕುಮಾರಸ್ವಾಮಿ ಸ್ಟಿಂಗ್‌ ಫೈಟ್‌ - ಈಗ ಎಚ್‌ಡಿಕೆ ಚಾರ್ಜ್‌ಶೀಟ್‌
ಅರಬ್ಬಿ ಸಮುದ್ರದಲ್ಲಿ ಚಂಡಮಾರುತ - ಇನ್ನೂ 3 ದಿನ ರಾಜ್ಯದೆಲ್ಲೆಡೆ ಮಳೆ