ಕನ್ನಡಪ್ರಭ ವಾರ್ತೆ ವಿಜಯಪುರ
ಬಸವಾದಿ ಶರಣರು ಬೇಧವಿಲ್ಲದ ಸಮಾಜ ನಿರ್ಮಾಣ ಮಾಡಿದರು. ವಚನ ಸಾಹಿತ್ಯ ಜನಸಾಮಾನ್ಯರಿಗೂ ಅರ್ಥವಾಗುತ್ತವೆ. ಕಾಯಕದಲ್ಲಿ ನಿರತನಾಗಿರಬೇಕು. ಹುಸಿ ಹೇಳದೆ ಸತ್ಯ ಪ್ರತಿಪಾದಿಸಬೇಕು. ಸಮಾಜ ಸುಧಾರಣೆ ವಚನದ ಆಶಯ ಎಂದು ಸಿಂದಗಿಯ ಎಚ್.ಜಿ ಪದವಿಪೂರ್ವ ಮಹಾವಿದ್ಯಾಲಯದ ಪ್ರಾಚಾರ್ಯ ಎ.ಆರ್ ಹೆಗ್ಗನದೊಡ್ಡಿ ಹೇಳಿದರು.ನಗರದ ಜಿಲ್ಲಾ ಕಸಾಪ ಭವನದಲ್ಲಿ ಅನ್ನಪೂರ್ಣ ಮಹಾದೇವಪ್ಪ ಕಾಗಲಕರ ದಿ.ಭೀಮಕ್ಕ ರಾಮಚಂದ್ರ ಕಾಗಲಕರ ದತ್ತಿ ಹಾಗೂ ಶಾಂತಾಬಾಯಿ ಸುಖಾರಾಮ್ ನೂಲಿಕರ ದತ್ತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತನ್ನು ಜನಸಾಮಾನ್ಯರ ಮುಖ್ಯ ವಾಹಿನಿಗೆ ತರುತ್ತಿರುವದು ಶ್ಲಾಘನೀಯ ಎಂದರು.
ತಿಕೋಟಾ ಕನ್ನಡ ಸಾಹಿತ್ಯ ಪರಿಷತ್‌ನ ಅಧ್ಯಕ್ಷ ಸಿದ್ರಾಮಯ್ಯ ಲಕ್ಕುಂಡಿಮಠ ಮಾತನಾಡಿ, ಪ್ರಗತಿಪರ ಸಮಾಜದ ನಿರ್ಮಾಣವೇ ವಚನ ಸಾಹಿತ್ಯ. ಶ್ರದ್ಧೆಯಿಂದ ಮಾಡಿದ ಕಾಯಕ ಪೂಜೆಗಿಂತ ಶ್ರೇಷ್ಠ. ಇಂದು ವಚನ ಸಾಹಿತ್ಯ ಸುಂದರ ಬದುಕಿನ ಸಾಹಿತ್ಯವಾಗಿದೆ ಎಂದು ಬಣ್ಣಿಸಿದರು.ಮಮತಾ ಮುಳಸಾವಳಗಿ ಮಾತನಾಡಿ, ಪ್ರಬುದ್ಧತೆಯ ಮಹೋನ್ನತ ಶಿಖರ ವಚನ ಸಾಹಿತ್ಯ. ವಚನವೆಂದರೆ ಹುಸಿಯಾಗದ ಮಾತು. ಕನ್ನಡ ವಚನ ಸಾಹಿತ್ಯ ವಿಶ್ವಕ್ಕೆ ನೀಡಿದ ಕೊಡುಗೆ. ಅಲ್ಲಮಪ್ರಭು ಹಾಗು ಅಕ್ಕಮಹಾದೇವಿ ಸಂವಾದವೇ ವಚನ ಎಂದರು.ಚಿಂತಕಿ ಚೈತನ್ಯ ಮುದ್ದೇಬಿಹಾಳ ಮಾತನಾಡಿ, ಬಸವಣ್ಣ ಬಿತ್ತಿದ ಬೀಜಗಳು ನಾವು, ನಮಗಿರದು ಎಂದೆಂದು ಸಾವು. ಕಾಯಕವೇ ಕೈಲಾಸದಲ್ಲಿ ನಂಬಿಕೆಯಿಟ್ಟು ಗೌರವದಿಂದ ಬದುಕಿದವರು. ಸತ್ಯ ಶುದ್ಧ ಕಾಯಕವೇ ಶ್ರೇಷ್ಠ ಶರಣ ದೃಷ್ಟಿಯಲ್ಲಿ ಹೊನ್ನೆಲ್ಲ ಮಣ್ಣೆ ಎಂದರು.ಇಂಡಿ ಶಿಕ್ಷಕರ ಸಂಘದ ಪದಾಧಿಕಾರಿಗಳಾದ ಜಯಶ್ರೀ ತೆಲಗ, ವಿಜಯಲಕ್ಷ್ಮೀ ಡಿಸಲೆ, ರಜೀಯಾ ಚಪ್ಪರಬಂದ, ರಾಜಶ್ರೀ ನಾರಾಯಣಕರ ಅವರನ್ನು ಗೌರವಿಸಿ ಸನ್ಮಾನಿಸಲಾಯಿತು.
ರೇಣುಕಾ ತಳವಾರ, ಡಾ.ಸುರೇಶ ಕಾಗಲಕರರಡ್ಡಿ, ಧರೆಪ್ಪ ಯಚ್ಚಿ, ರಾಜೇಸಾಬ ಶಿವನಗುತ್ತಿ, ಸುನಂದಾ ಕೋರಿ, ಡಾ. ಆನಂದ ಕುಲಕರ್ಣಿ, ಸುರೇಶ ಜತ್ತಿ, ಶೋಭಾ ಬಡಿಗೇರ, ಹಾಸಿಂಪೀರ ವಾಲಿಕಾರ, ಕಮಲಾ ಮುರಾಳ, ಜಿ.ಎಸ್ ಬಳ್ಳೂರ, ಅಹಮ್ಮದ ವಾಲಿಕಾರ, ಅಜು೯ನ ಶಿರೂರ, ಶಾಂತಾ ವಿಭೂತಿ, ಸುರಭಿ ತೆಲಗ, ದ್ಯಾಮಪ್ಪ ಗರಸಂಗಿ, ಎಸ್ .ಎಸ್ ಕುಂಬಾರ, ಎಸ್.ವೈ.ತುದಿಗಾಲ್, ಎಸ್.ಎಸ್.ಬೇಟಗೇರಿ, ಭಾಗೀರಥಿ ಸಿಂಧೆ, ಕೆ.ಎಸ್.ಹಣಮಾನಿ, ಟಿ.ಆರ್.ಹಾವಿನಾಳ, ಎಸ್.ಬಿ.ಕಲಕೇರಿ,ಎಂ.ಎನ್ ನಿಂಬಾಳ ಮುಂತಾದವರು ಉಪಸ್ಥಿತರಿದ್ದರು.